ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಲಖನೌ ಸೂಪರ್ ಜಯಂಟ್ಸ್ ತಂಡದ ನಾಯಕ ರಿಷಭ್ ಪಂತ್ (Rishabh Pant) ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಸಬಾ ಕರಿಮ್ (Saba karim) ಪ್ರತಿಕ್ರಿಯಿಸಿದ್ದಾರೆ. ಕಳೆದ ಎರಡು ಐಪಿಎಲ್ ಆವೃತ್ತಿಗಳಲ್ಲಿ ಪಂತ್, ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಅಗತ್ಯವಾದ ಮಾದರಿಯನ್ನು ಅಳವಡಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ, ಈ ಕಾರಣದಿಂದಲೇ ಅವರಿಂದ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರುವಲ್ಲಿ ವಿಫಲರಾಗುತ್ತಿದ್ದಾರೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಏಪ್ರಿಲ್ 22 ರಂದು ಬುಧವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ 160 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಲಖನೌ ಸೂಪರ್ ಜಯಂಟ್ಸ್ ತಂಡ ಸುಲಭವಾಗಿ ಗೆಲುವು ಪಡೆಯಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಮಿಚೆಲ್ ಮಾರ್ಷ್ ಹೊರೆತುಪಡಿಸಿ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಏಡೆನ್ ಮಾರ್ಕ್ರಮ್, ಆಯುಷ್ ಬದೋನಿ ಹಾಗೂ ರಿಷಭ್ ಪಂತ್ ಡಕ್‌ಔಟ್ ಆಗಿದ್ದರು. ನಾಂಡ್ರೆ ಬರ್ಗರ್ ಎಸೆತದಲ್ಲಿ ಪಂತ್ ವಿಕೆಟ್ ಕೀಪರ್‌ಗೆ ಕ್ಯಾಚ್ ಕೊಟ್ಟಿದ್ದರು. ಈ ಸೀಸನ್‌ನಲ್ಲಿ ಅವರು ಆಡಿದ ಏಳು ಇನಿಂಗ್ಸ್‌ಗಳಿಂದ 24.50ರ ಸರಾಸರಿ ಮತ್ತು 132.43ರ ಸ್ಟ್ರೈಕ್ ರೇಟ್‌ನಲ್ಲಿ ಒಂದು ಅರ್ಧಶತಕದ ಮೂಲಕ ಕೇವಲ 147 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಅವರು ಒಂದು ಇನಿಂಗ್ಸ್‌ನಲ್ಲಿ ಅಜೇಯ 68* ರನ್ ಗಳಿಸಿದ್ದಾರೆ.
ʻನನ್ನನ್ನು ಕ್ಷಮಿಸಿ ಬಾಸ್ʼ: ರೋಹಿತ್ ಶರ್ಮಾ ಬಳಿ ಕ್ಷಮೆ ಕೇಳಿದ ಕೃಷ್ಣಮಾಚಾರಿ ಶ್ರೀಕಾಂತ್!
ರಿಷಭ್ ಪಂತ್ ನಾಯಕತ್ವದ ಲಖನೌ ಸೂಪರ್ ಜಯಂಟ್ಸ್ ತಂಡ ಇಲ್ಲಿಯವರೆಗೂ ಆಡಿದ 7 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ ಎರಡು ಪಂದ್ಯಗಳನ್ನು ಮಾತ್ರ. ಪಾಯಿಂಟ್ಸ್ ಟೇಬಲ್‌ನಲ್ಲಿ 9ನೇ ಸ್ಥಾನದಲ್ಲಿರುವ ಲಖನೌ ತಂಡದ ಪ್ಲೇಆಫ್ಸ್ ಹಾದಿ ಅತ್ಯಂತ ಕಠಿಣವಾಗಿದೆ.
ರಿಷಭ್ ಪಂತ್ ವೈಫಲ್ಯಕ್ಕೆ ಕಾರಣ ತಿಳಿಸಿದ ಸಬಾ ಕರಿಮ್
ಇಎಸ್‌ಪಿಎನ್ ಕ್ರಿಕ್‌ಇನ್ಪೋ ಜೊತೆ ʻಟೈಮ್‌ಔಟ್ʼ ಕಾರ್ಯಕ್ರಮದಲ್ಲಿ ಮಾತನಾಡಿದ ಸಬಾ ಕರಿಮ್, ರಿಷಭ್ ಪಂತ್ ದೇಶಿ ಕ್ರಿಕೆಟ್, ಐಪಿಎಲ್ ಹಾಗೂ 2015-16ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುತ್ತಾ ಬಂದರೂ ಅವರು ಇನ್ನೂ ಚುಟುಕು ಕ್ರಿಕೆಟ್‌ನಲ್ಲಿ ತಮ್ಮ ಮಾದರಿಯ ಮೇಲೆ ಇನ್ನೂ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.
IPL 2026: ರಿಷಭ್ ಪಂತ್ ಎದುರು ಅವಮಾನಕರ ವರ್ತನೆ ತೋರಿದ ನಾಂಡ್ರೆ ಬರ್ಗರ್‌ಗೆ ದಂಡ!
“ಆಧುನಿಕ ಟಿ20 ಬ್ಯಾಟರ್ (Rishabh Pant) ತನ್ನದೇ ಆದ ಆಟದ ಮಾದರಿಯನ್ನು (ಟೆಂಪ್ಲೇಟ್) ಕಂಡುಹಿಡಿಯಬೇಕಾಗುತ್ತದೆ. ಉದಾಹರಣೆಗೆ, ಶ್ರೇಯಸ್ ಅಯ್ಯರ್ ಆಗಿರಲಿ ಅಥವಾ ರಜತ್ ಪಾಟಿದಾರ್ ಆಗಿರಲಿ, ಪಾಟಿದಾರ್ ಇಂತಹ ಪಿಚ್‌ನಲ್ಲಿ ಬ್ಯಾಟಿಂಗ್‌ಗೆ ಬಂದರೂ, ಅವರು ದೊಡ್ಡ ಶಾಟ್‌ಗಳನ್ನು ಆಡಬೇಕೆಂಬ ಸ್ಪಷ್ಟತೆ ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತಾರೆ ಮತ್ತು ಅದನ್ನು ಮಾಡುವ ಆತ್ಮವಿಶ್ವಾಸವೂ ಹೊಂದಿರುತ್ತಾರೆ,” ಎಂದು ಸಬಾ ಕರಿಮ್ ಹೇಳಿದ್ದಾರೆ.
“ರಿಷಭ್ ಪಂತ್ ಅವರ ಸಮಸ್ಯೆ ಏನೆಂದರೆ, ಅವರು ಇನ್ನೂ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ತಮ್ಮ ಟೆಂಪ್ಲೇಟ್ ಅನ್ನು ಕಂಡುಹಿಡಿದಿಲ್ಲ — ಕೇವಲ ಟಿ20ಗಳಲ್ಲಿ ಮಾತ್ರವಲ್ಲ, ಒಡಿಐಗಳಲ್ಲಿಯೂ ಕೂಡ. ಆದರೆ ಟೆಸ್ಟ್ ಬ್ಯಾಟಿಂಗ್‌ನಲ್ಲಿ ಅವರ ಚಿಂತನಾ ಪ್ರಕ್ರಿಯೆ ಮತ್ತು ಸಿದ್ಧತೆಯಲ್ಲಿ ಹೆಚ್ಚು ಸ್ಪಷ್ಟತೆ ಇದೆ ಎಂದು ನನಗೆ ಅನಿಸುತ್ತದೆ. ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಅವರು ಅದನ್ನು ಇನ್ನೂ ಸ್ಥಾಪಿಸಿಲ್ಲ,” ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.