IPL 2026: ರಿಷಭ್ ಪಂತ್ ಎದುರು ಅವಮಾನಕರ ವರ್ತನೆ ತೋರಿದ ನಾಂಡ್ರೆ ಬರ್ಗರ್‌ಗೆ ದಂಡ!
IPL 2026: ರಿಷಭ್ ಪಂತ್ ಎದುರು ಅವಮಾನಕಾರಿ ರೀತಿಯಲ್ಲಿ ವರ್ತಿಸಿ ಐಪಿಎಲ್‌ನ ವರ್ತನಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣ ರಾಜಸ್ಥಾನ್ ರಾಯಲ್ಸ್ ತಂಡದ ವೇಗದ ಬೌಲರ್ ನಾಂಡ್ರೆ ಬರ್ಗರ್ ಅವರಿಗೆ ದಂಡ ವಿಧಿಸಲಾಗಿದೆ ಹಾಗೂ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ.
ನಾಂಡ್ರೆ ಬರ್ಗರ್‌ಗೆ ದಂಡ ವಿಧಿಸಿದ ಐಪಿಎಲ್. -
ಲಖನೌ: ಲಖನೌ ಸೂಪರ್ ಜಯಂಟ್ಸ್ ವಿರುದ್ಧದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪಂದ್ಯದಲ್ಲಿ ನಾಯಕ ರಿಷಭ್ ಪಂತ್ (Rishabh Pant) ಔಟ್ ಆದ ಬಳಿಕ ಅವಮಾನಕರ ರೀತಿಯಲ್ಲಿ ಸಂಭ್ರಮಿಸಿದ ಹಿನ್ನೆಲೆಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ನಾಂಡ್ರೆ ಬರ್ಗರ್ (Nandre Burger) ಅವರಿಗೆ ಪಂದ್ಯದ ಸಂಭಾವನೆಯಲ್ಲಿ ಶೇ 10 ರಷ್ಟು ದಂಡ ಹಾಗೂ ಒಂದು ಡಿಮೆರಿಟ್ ಅಂಕವನ್ನು ವಿಧಿಸಲಾಗಿದೆ. ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 40 ರನ್‌ಗಳಿಂದ ಗೆದ್ದು ಬೀಗಿತ್ತು ಹಾಗೂ ಟೂರ್ನಿಯ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.
ಬುಧವಾರ ಇಲ್ಲಿನ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ನೀಡಿದ್ದ 160 ರನ್‌ಗಳ ಗುರಿಯನ್ನು ಹಿಂಬಾಲಿಸುತ್ತಿದ್ದ ವೇಳೆ ರಿಷಭ್ ಪಂತ್ ಅವರನ್ನು ನಾಂಡ್ರೆ ಬರ್ಗರ್ ಶೂನ್ಯಕ್ಕೆ ಔಟ್ ಮಾಡಿದರು. ರಿಷಭ್ ಪಂತ್ ಔಟ್ ಆದ ಬಳಿಕ ಬರ್ಗರ್ ಆಕ್ರಮಣಕಾರಿ ವರ್ತನೆ ಹಾಗೂ ಅನುಚಿತ ಪದಗಳಿಂದ ನಿಂದಿಸಿದರು. ಈ ಹಿನ್ನೆಲೆಯಲ್ಲಿ ಆರ್‌ಆರ್ ವೇಗಿಗೆ ದಂಡವನ್ನು ವಿಧಿಸಲಾಗಿದೆ.
LSG vs RR: ಲೋ ಸ್ಕೋರಿಂಗ್ ಪಂದ್ಯದಲ್ಲಿ ಲಖನೌಗೆ ಸೋಲುಣಿಸಿದ ರಾಜಸ್ಥಾನ್ ರಾಯಲ್ಸ್!
"ಲಖನೌ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯದಲ್ಲಿ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ರಾಜಸ್ಥಾನ್ ರಾಯಲ್ಸ್ ತಂಡದ ವೇಗದ ಬೌಲರ್ ನಾಂಡ್ರೆ ಬರ್ಗರ್ ಅವರಿಗೆ ಪಂದ್ಯದ ಸಂಭಾವನೆಯಲ್ಲಿ ಶೇಕಡಾ 10ರಷ್ಟು ದಂಡ ಹಾಗೂ ಒಂದು ಡೀಮೆರಿಟ್ ಅಂಕವನ್ನು ನೀಡಲಾಗಿದೆ," ಎಂದು ಐಪಿಎಲ್ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
Did Burger really say to Pant, "Go back home"? ☠️😭
— AK 45 (@ImRo45_Club) April 22, 2026
Rishabh Pant doesn't look happy with this comment. 👀
pic.twitter.com/j4ETG0fYSF
“ನಾಂಡ್ರೆ ಬರ್ಗರ್ ಅವರು 2.5ರ ಅಡಿಯಲ್ಲಿ ಮೊದಲನೇ ಹಂತದ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಪಂದ್ಯದಲ್ಲಿ ಇನ್ನೊಬ್ಬ ಆಟಗಾರನನ್ನು ಅವಮಾನಿಸುವ ಅಥವಾ ಆಕ್ರಮಣಕಾರಿ ಪ್ರತಿಕ್ರಿಯೆಗೆ ಪ್ರೇರೇಪಿಸಬಹುದಾದ ಭಾಷೆ, ಕ್ರಿಯೆಗಳು ಅಥವಾ ಸಂಕೇತಗಳನ್ನು ಬಳಸುವುದು ಈ ನಿಯಮದ ಅಡಿಯಲ್ಲಿ ಬರುತ್ತದೆ. ಮ್ಯಾಚ್ ರೆಫರಿಯ ವಿಧಿಸಿದ ಶಿಕ್ಷೆಯನ್ನು ಅವರು ಒಪ್ಪಿಕೊಂಡಿದ್ದಾರೆ," ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
RR vs LSG: ರಾಜಸ್ಥಾನ ರಾಯಲ್ಸ್ ಪರ ಹೊಸ ಐಪಿಎಲ್ ದಾಖಲೆ ನಿರ್ಮಿಸಿದ ಜೋಫ್ರಾ ಆರ್ಚರ್
ಐಪಿಎಲ್ ವರ್ತನಾ ಸಂಹಿತೆಯ ಪ್ರಕಾರ, ನಾಲ್ಕು ಡಿಮೆರಿಟ್ ಪಾಯಿಂಟ್‌ಗಳು ಒಂದು ಅಮಾನತು ಪಾಯಿಂಟ್‌ಗೆ ಸಮ. ಅಂದರೆ ಆ ಹಂತ ತಲುಪಿದಾಗ ಆಟಗಾರ ಒಂದು ಪಂದ್ಯದಿಂದ ಹೊರಗುಳಿಯಬೇಕಾಗುತ್ತದೆ. ಡಿಮೆರಿಟ್ ಪಾಯಿಂಟ್‌ಗಳು 36 ತಿಂಗಳ ಕಾಲ ಆಟಗಾರನ ದಾಖಲೆಯಲ್ಲಿ ಉಳಿಯುವುದರಿಂದ, ಮುಂದಿನ ಋತುಗಳಲ್ಲಿ ಬರ್ಗರ್ ಹೆಚ್ಚು ಎಚ್ಚರಿಕೆಯಿಂದ ಆಡಬೇಕಾಗುತ್ತದೆ.
ಆರ್‌ಆರ್‌ಗೆ ಮುಂದಿನ ಎದುರಾಳಿ ಎಸ್‌ಆರ್‌ಎಚ್
ನಾಂಡ್ರೆ ಬರ್ಗರ್ ಮುಂದಿನ ಪಂದ್ಯದಲ್ಲಿ ಏಪ್ರಿಲ್ 25ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಈ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯುವ ಮೊದಲ ಪಂದ್ಯವಾಗಿರುತ್ತದೆ. ಇದರ ಮಧ್ಯೆ, ಲಖನೌ ಸೂಪರ್ ಜಯಂಟ್ಸ್ ಏಪ್ರಿಲ್ 26ರಂದು ಕೋಲ್ಕತಾ ನೈಟ್ ರೈಡರ್ಸ್ ತಂಡದ ಪಂದ್ಯಕ್ಕೆ ಆತಿಥ್ಯ ವಹಿಸಲಿದ್ದು, ಇದು ಪಟ್ಟಿಯ ಕೊನೆಯ ಸ್ಥಾನಗಳಲ್ಲಿರುವ ತಂಡಗಳ ನಡುವಿನ ಪಂದ್ಯವಾಗಿರಲಿದೆ.