ನವದೆಹಲಿ: ಭಾರತದ (India) ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್( R Ashin) ಅವರು ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ದದ ಮೂರನೇ ಟೆಸ್ಟ್ ಪಂದ್ಯದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್ ವಿದಾಯ ಹೇಳಿದ್ದರು. ಆ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದರು. ಇದೀಗ ಆರ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲು ಪ್ರಮುಖ ಕಾರಣವೇನೆಂದು ಬಹಿರಂಗಪಡಿಸಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಭಾರತ ತಂಡದ ಮಾಜಿ ನಾಯಕ ಹಾಗೂ ಮಾಜಿ ಹೆಡ್ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರ ಜೊತೆಗೆ ಆರ್ ಅಶ್ವಿನ್ ಈ ವಿಷಯವನ್ನು ಹಂಚಿಕೊಂಡಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದ ವೇಳೆ ಆರ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದರು. ಮಾಜಿ ಆಫ್ ಸ್ಪಿನ್ನರ್ ತಮ್ಮ 13 ವರ್ಷಗಳ: ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ 537 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ನಿವೃತ್ತಿ ಪಡಯುವ ವಿಷಯ ಹಲವು ದಿನಗಳಿಂದ ನನ್ನ ಮನಸಿನಲ್ಲಿತ್ತು. ವೈಯಕ್ತಿಕ ಪ್ರಾಶಸ್ತ್ಯಗಳು ಮುಖ್ಯವಾದ ಹಂತವನ್ನು ತಲುಪಿದಾಗ ಈ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
Asia Cup 2025: ಶ್ರೇಯಸ್ ಅಯ್ಯರ್ ಏನು ತಪ್ಪು ಮಾಡಿದ್ದಾರೆ? ಆರ್ ಅಶ್ವಿನ್ ಪ್ರಶ್ನೆ!
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುವ ವೇಳೆ ಆರ್ ಅಶ್ವಿನ್‌ಗೆ ನಿವೃತ್ತಿಯ ಬಗ್ಗೆ ರಾಹುಲ್ ಡ್ರಾವಿಡ್ ಪ್ರಶ್ನೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಆರ್ ಅಶ್ವಿನ್, "ಇದು ಕೇವಲ ಸಮಯ ಎಂದು ನಾನು ಭಾವಿಸುತ್ತೇನೆ ಮತ್ತು ನನ್ನ ಜೀವನದಲ್ಲಿ ನಾನು ಎಲ್ಲಿ ನಿಂತಿದ್ದೇನೆ? ನನಗೆ ತುಂಬಾ ವಯಸ್ಸಾಗಿದ್ದೆ ಎಂದು ನಾನು ಭಾವಿಸುತ್ತೇನೆ, ನಾನು ಇದನ್ನು ಒಪ್ಪಿಕೊಳ್ಳಲೇಬೇಕು," ಎಂದು ತಿಳಿಸಿದ್ದಾರೆ.
ಭಾರತ ತಂಡ ವಿದೇಶಿ ಪ್ರವಾಸ ಮಾಡಿದಾಗಲೆಲ್ಲಾ ತನ್ನ ಬೌಲಿಂಗ್ ವಿಭಾಗದಲ್ಲಿ ವೇಗದ ಬೌಲರ್‌ಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿತ್ತು ಹಾಗೂ ರವೀಂದ್ರ ಜಡೇಜಾ ಅವರನ್ನು ಸ್ಪಿನ್ ಆಲ್‌ರೌಂಡರ್ ಆಗಿ ಆರಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅಶ್ವಿನ್ ವಿದೇಶಿ ಟೆಸ್ಟ್ ಪಂದ್ಯಗಳಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ.
Asia Cup 2025: ಶುಭಮನ್ ಗಿಲ್ ಅಲ್ಲ! ಭಾರತ ತಂಡಕ್ಕೆ ನೇರವಾಗಿ ಆಯ್ಕೆಯಾಗಬಲ್ಲ ಆಟಗಾರರನ್ನು ಆರಿಸಿದ ಆರ್ ಅಶ್ವಿನ್
"ವಿದೇಶ ಪ್ರವಾಸಗಳನ್ನು ಕೈಗೊಂಡಾಗ, ನಾನು ಹೆಚ್ಚಿನದಾಗಿ ಬೆಂಚ್ ಕಾಯಬೇಕಾಗಿತ್ತು. ನನ್ನ ಪಾಲಿಗೆ ಇದೇ ಜಾಸ್ತಿ ನಡೆದಿದೆ," ಎಂದು ಆರ್ ಅಶ್ವಿನ್ ತಿಳಿಸಿದ್ದಾರೆ. ವಿದೇಶಿ ನೆಲದಲ್ಲಿ ಹೊರತುಪಡಿಸಿ ಭಾರತ ಸೇರಿದಂತೆ ಉಪಖಂಡದಲ್ಲಿ ಆರ್ ಅಶ್ವಿನ್ ಭಾರತ ಟೆಸ್ಟ್ ತಂಡಕ್ಕೆ ಕೀ ಬೌಲರ್ ಆಗಿದ್ದರು. ತಮ್ಮ ಸ್ಪಿನ್ ಮೋಡಿಯ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡವನ್ನು ಹೇರಿದ್ದರು. ತಮ್ಮ ಅಸಾಧಾರಣ ಕೌಶಲದ ಮೂಲಕ ಅವರು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್ ಎನಿಸಿಕೊಂಡಿದ್ದಾರೆ.
ಕೌಟುಂಬಿಕ ಕಾರಣದಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ: ಆರ್ ಅಶ್ವಿನ್
"ತಂಡಕ್ಕೆ ಕೊಡುಗೆ ನೀಡಲು ಬಯಸುವುದಿಲ್ಲ ಎಂಬ ಅರ್ಥದಲ್ಲಿ ಅಲ್ಲ, ಆದರೆ ನಾನು ಮನೆಯಲ್ಲಿಯೇ ಇದ್ದು ಮಕ್ಕಳೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತೇನೆಯೇ ಎಂದು ನೀವು ಯೋಚಿಸುತ್ತಿದ್ದೀರಿ. ಅವರು ಕೂಡ ಬೆಳೆಯುತ್ತಿದ್ದಾರೆ ಮತ್ತು ನಾನು ನಿಜವಾಗಿ ಇದನ್ನೇ ಮಾಡುತ್ತಿದ್ದೇನೆ. ಅಲ್ಲದೆ 34 ಅಥವಾ 35ನೇ ವಯಸ್ಸಿನಲ್ಲಿ ನಿವೃತ್ತಿ ಪಡೆಯಬೇಕೆಂದು ಮೊದಲೇ ನನ್ನ ತಲೆಯಲ್ಲಿತ್ತು," ಎಂದು ಆರ್ ಅಶ್ವಿನ್ ತಿಳಿಸಿದ್ದಾರೆ.