Cristiano Ronaldo: ದಾಖಲೆಯ ಆರನೇ ವಿಶ್ವಕಪ್ ಆಡಲು ರೊನಾಲ್ಡೊ ಸಜ್ಜು
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಗೆ ರೊನಾಲ್ಡೊ ಸೇರ್ಪಡೆಯಾಗುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಈ ಮೂಲಕ ಅವರು ಫುಟ್ಬಾಲ್ ನ ಅತ್ಯಧಿಕ ಸಂಪಾದನೆಯ ಆಟಗಾರನೆಂಬ ತನ್ನ ಹೆಗ್ಗಳಿಕೆಯನ್ನು ಬಲಪಡಿಸಿಕೊಂಡಿದ್ದಾರೆ ಮತ್ತು ತನ್ನ ದೀರ್ಘಕಾಲೀನ ಎದುರಾಳಿ ಅರ್ಜೆಂಟೀನದ ಲಿಯೊನೆಲ್ ಮೆಸ್ಸಿಯನ್ನು ಹಿಂದಿಕ್ಕಿದ್ದಾರೆ.
ದಾಖಲೆಯ ಆರನೇ ವಿಶ್ವಕಪ್ ಆಡಲು ರೊನಾಲ್ಡೊ ಸಜ್ಜು -
ಲಂಡನ್: ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ(Cristiano Ronaldo) ಅವರಿಗೆ ದಾಖಲೆ ಆರನೇ ಬಾರಿಗೆ ವಿಶ್ವಕಪ್ ಆಡುವ ಅವಕಾಶ ಲಭ್ಯವಾಗಿದೆ. ಭಾನುವಾರ ತಡರಾತ್ರಿ ನಡೆದಿದ್ದ ಅರ್ಮೇನಿಯಾ ವಿರುದ್ಧದ ಪಂದ್ಯದಲ್ಲಿ ಪೋರ್ಚ್‍ಗಲ್ ತಂಡ 9-1 ಗೋಲುಗಳಿಂದ ಜಯ ಸಾಧಿಸುವ ಮೂಲಕ 2026ರ ವಿಶ್ವಕಪ್‍ಗೆ(FIFA World Cup 2026) ಅರ್ಹತೆ ಸಂಪಾದಿಸಿತು. ಅಮಾನತು ಕಾರಣದಿಂದ ಈ ಪಂದ್ಯಕ್ಕೆ ರೊನಾಲ್ಡೊ ಗೈರಾಗಿದ್ದರೂ ಅವರ ತಂಡ ಐತಿಹಾಸಿಕ ಜಯ ಸಂಪಾದಿಸಿತು.
ಪೋರ್ಚ್‍ಗಲ್ ಕಳೆದ ಗುರುವಾರ ನಡೆದ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 0-2 ಗೋಲುಗಳಿಂದ ಸೋತ ಪಂದ್ಯದಲ್ಲಿ ರೆಡ್‍ಕಾರ್ಡ್ ಪಡೆದು ರೊನಾಲ್ಡೊ ನಿರ್ಗಮಿಸಿದ್ದರು. ಅರ್ಮೇನಿಯಾ ವಿರುದ್ಧದ ಪಂದ್ಯದಲ್ಲಿ ಬ್ರೂನೊ ಫೆರ್ನಾಂಡಿಸ್ ಮತ್ತು ಜೋವಾ ನೆವಿಸ್ ಹ್ಯಾಟ್ರಿಕ್ ಗೋಲು ಬಾರಿಸಿದರು.
ಮುಂದಿನ ಜೂನ್‍ನಲ್ಲಿ ಫಿಫಾ ವಿಶ್ವಕಪ್ ಟೂರ್ನಿ ಆರಂಭದ ವೇಳೆಗೆ 41ನೇ ವರ್ಷಕ್ಕೆ ಕಾಲಿಡುವ ರೊನಾಲ್ಡೊಗೆ ತಮ್ಮ ವೃತ್ತಿಜೀವನದಲ್ಲಿ ಚೊಚಲ ವಿಶ್ವಕಪ್ ಕಿರೀಟವನ್ನು ಗಳಿಸಲು ಕೊನೆಯ ಅವಕಾಶದೊಂದಿಗೆ ಕಣಕ್ಕಿಳಿಯಲಿದ್ದಾರೆ.
2026ರ ಫಿಫಾ ಫುಟ್‌ಬಾಲ್ ವಿಶ್ವಕಪ್ ಅಮೆರಿಕ, ಮೆಕ್ಸಿಕೊ, ಕೆನೆಡಾ ಆತಿಥ್ಯದಲ್ಲಿ ನಡೆಯಲಿದೆ. ಫುಟ್‌ಬಾಲ್ ವಿಶ್ವಕಪ್ ಇತಿಹಾಸದಲ್ಲಿ ಮೂರು ರಾಷ್ಟ್ರಗಳು ಆತಿಥ್ಯ ವಹಿಸುತ್ತಿರುವುದು ಇದೇ ಮೊದಲ ಬಾರಿ. ಒಟ್ಟು 16 ನಗರಗಳಲ್ಲಿ ಪಂದ್ಯಾವಳಿ ಆಯೋಜನೆಯಾಗಲಿವೆ.
ಫುಟ್ಬಾಲ್‌ನ ಮೊದಲ ಬಿಲಿಯನೇರ್
ಇತ್ತೀಚೆಗಷ್ಟೇ 'ಬಿಲಿಯನೇರ್' ಎಂದು ಹೆಸರಿಸಲ್ಪಟ್ಟ ವಿಶ್ವದ ಮೊದಲ ಫುಟ್ಬಾಲ್ ಆಟಗಾರ ಎಂಬ ಹೆಗ್ಗಳಿಕೆಗೆ ರೊನಾಲ್ಡೊ ಪಾತ್ರರಾಗಿದ್ದರು. ಸೌದಿ ಪ್ರೊ ಲೀಗ್‌ನಲ್ಲಿ ಅಲ್-ನಾಸರ್ ಜತೆ ಹೊಸ ಒಪ್ಪಂದಕ್ಕೆ ಸಹಿ ಹಾಕಿದ ನಂತರ ರೊನಾಲ್ಡೊ ಈ ಮೈಲಿಗಲ್ಲು ತಲುಪಿದರು. ರೊನಾಲ್ಡೊ ನಿವ್ವಳ ಸಂಪತ್ತು 1.4 ಬಿಲಿಯ ಡಾಲರ್ (ಸುಮಾರು 12,400 ಕೋಟಿ ರೂಪಾಯಿ) ಎಂದು ಅದು ಅಂದಾಜು ಮಾಡಿದೆ.
ಇದನ್ನೂ ಓದಿ Cristiano Ronaldo: ರೊನಾಲ್ಡೊ ಭಾರತ ಭೇಟಿ ರದ್ದಿಗೆ ನಿಜವಾದ ಕಾರಣವೇನು?
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಗೆ ರೊನಾಲ್ಡೊ ಸೇರ್ಪಡೆಯಾಗುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಈ ಮೂಲಕ ಅವರು ಫುಟ್ಬಾಲ್ ನ ಅತ್ಯಧಿಕ ಸಂಪಾದನೆಯ ಆಟಗಾರನೆಂಬ ತನ್ನ ಹೆಗ್ಗಳಿಕೆಯನ್ನು ಬಲಪಡಿಸಿಕೊಂಡಿದ್ದಾರೆ ಮತ್ತು ತನ್ನ ದೀರ್ಘಕಾಲೀನ ಎದುರಾಳಿ ಅರ್ಜೆಂಟೀನದ ಲಿಯೊನೆಲ್ ಮೆಸ್ಸಿಯನ್ನು ಹಿಂದಿಕ್ಕಿದ್ದಾರೆ.
ದಾಖಲೆ ಮುರಿಯುವ ವೇತನಗಳು, ಜಾಹೀರಾತುಗಳಿಂದ ಬರುವ ಆದಾಯ ಮತ್ತು ಯಶಸ್ವಿ ಸ್ವ ಉದ್ಯಮಗಳಿಂದಾಗಿ ರೊನಾಲ್ಡೊರ ಸಂಪತ್ತಿನಲ್ಲಿ ಏರಿಕೆಯಾಗಿದೆ. ಯುರೋಪ್‌ನಲ್ಲಿ ಅವರು ಆಡುತ್ತಿದ್ದಾಗ ಪಡೆಯುತ್ತಿದ್ದ ವೇತನಗಳು ಕ್ರೀಡಾ ಬದುಕಿನ ಹೆಚ್ಚಿನ ಅವಧಿಯಲ್ಲಿ ಮೆಸ್ಸಿಯ ವೇತನಗಳನ್ನು ಸರಿಗಟ್ಟುತ್ತಿದ್ದವು. ಆದರೆ 2023ರಲ್ಲಿ ಸೌದಿ ಅರೇಬಿಯದ ಕ್ಲಬ್ ಅಲ್-ನಸ್ರ್ ಸೇರಿದ ಬಳಿಕ ಅವರ ವೇತನ ಅಗಾಧ ಪ್ರಮಾಣದಲ್ಲಿ ಏರಿಕೆಯಾಯಿತು.