ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

DC vs RCB: ತವರಿನ ಸೋಲಿಗೆ ಸೇಡು ತೀರಿಸಿಕೊಂಡೀತೇ ಆರ್‌ಸಿಬಿ?; ಡೆಲ್ಲಿ​ ಎದುರಾಳಿ

IPL 2026: ಡೆಲ್ಲಿ ತಂಡಕ್ಕೆ ಹೋಲಿಸಿದರೆ ಆರ್‌ಸಿಬಿಯ ಬೌಲಿಂಗ್‌ ಘಟಕವೂ ವೈವಿಧ್ಯಮಯವಾಗಿ ಬಲಿಷ್ಠವಾಗಿದೆ. ಅನುಭವಿಗಳಾದ ಜೋಶ್‌ ಹ್ಯಾಜಲ್‌ವುಡ್‌, ಭುವನೇಶ್ವರ್‌ ಕುಮಾರ್‌ ಜತೆ ಸುಯಶ್ ಶರ್ಮಾ, ರಾಸಿಖ್ ಸಲಾಮ್ ದಾರ್ ಎದುರಾಳಿಗಳನ್ನು ಕಟ್ಟಿಹಾಕುವ ಸಾಮರ್ಥ್ಯ ಹೊಂದಿದ್ದಾರೆ.

DC vs RCB

ನವದೆಹಲಿ, ಎ.26: ಸೋಲು ಗೆಲುವಿನ ಮಿಶ್ರ ಫಲ ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್‌ (DC vs RCB) ತಂಡ, ಸೋಮವಾರ ನಡೆಯಲಿರುವ ಇಂಡಿಯನ್‌ ಪ್ರೀಮಿಯರ್‌(IPL 2026) ಲೀಗ್‌ನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡವನ್ನು ಎದುರಿಸಲಿದೆ. ಪಂದ್ಯ ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಂಣದಲ್ಲಿ ನಡೆಯಲಿದೆ. ವಿರಾಟ್‌ ಕೊಹ್ಲಿ(Virat Kohli)ಗೆ ಇದು ತವರಿನ ಪಂದ್ಯವಾಗಿದೆ. ಹೀಗಾಗಿ ಅವರಿಗೆ ಈ ಪಂದ್ಯ ವಿಷೇಶವಾಗಿದೆ.

ಈ ಬಾರಿಯ ಟೂರ್ನಿಯ ಮೊದಲ ಹಂತದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಆರ್‌ಸಿಬಿ ತನ್ನ ತವರಾದ ಚಿನ್ನಸ್ವಾಮಿಯಲ್ಲಿ ಸೋಲುಣಿಸಿತ್ತು. ಈ ಸೋಲನ್ನೇ ಆರ್‌ಸಿಬಿ ಚಾಲೆಂಜ್‌ ಆಗಿ ಸ್ವೀಕರಿಸಿ ನಾಳಿನ ಪಂದ್ಯದಲ್ಲಿ ಸೇಡು ತೀರಿಸಿಕೊಂಡೀತೇ ಎನ್ನುವುದು ಪಂದ್ಯದ ಕುತೂಹಲ. ಎದುರಾಳಿ ಯಾರೇ ಆಗಿರಲಿ ದಂಡಿಸುವುದೊಂದೆ ಎನ್ನ ಗುರಿ ಎಂದು ಬ್ಯಾಟಿಂಗ್​ ನಡೆಸುತ್ತಿರುವ ಕನ್ನಡಿಗ ಕೆ.ಎಲ್‌ ರಾಹುಲ್‌ ಈ ಪಂದ್ಯದ ಪ್ರಮುಖ ಹೈಲೆಟ್ಸ್​. ಕಳೆದ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಅವರು ಭರ್ತಿ 20 ಓವರ್‌ ಬ್ಯಾಟಿಂಗ್‌ ನಡೆಸಿ ಅಜೇಯ 152* ರನ್‌ ಬಾರಿಸಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದರು. ಈ ಪಂದ್ಯದಲ್ಲಿಯೂ ಡೆಲ್ಲಿ ಇವರ ಮೇಲೆ ಹೆಚ್ಚಿನ ಬರವಸೆ ಇರಿಸಿದೆ.

ಡೆಲ್ಲಿ ತಂಡದ ಫೀಲ್ಡಿಂಗ್‌ ಸುಧಾರಣೆ ಕಾಣಬೇಕಿದೆ. ಇಲ್ಲದೆ ಹೋದಲ್ಲಿ ಮತ್ತೊಂದು ಸೋಲಿಗೆ ತುತ್ತಾಗಬಹುದು. ಪಂಜಾವ್‌ ವಿರುದ್ಧ 264 ರನ್‌ ಬಾರಿಸಿಯೂ ಕಳಪೆ ಫೀಲ್ಡಿಂಗ್‌ನಿಂದ ಪಂದ್ಯದಲ್ಲಿ ಸೋಲು ಕಂಡಿತ್ತು. ಆರ್‌ಸಿಬಿ ಬ್ಯಾಟಿಂಗ್‌ ಲೈನ್‌ ಅಪ್‌ ತುಂಬಾ ಬಲಿಷ್ಠವಾಗಿದೆ. ವಿರಾಟ್‌ ಕೊಹ್ಲಿ, ದೇವದತ್ತ ಪಡಿಕ್ಕಲ್‌ ಪಂದ್ಯದಿಂದ ಪಂದ್ಯಕ್ಕೆ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ನೆರವಾಗುತ್ತಿದ್ದಾರೆ.

ಕೆಲ ಕ್ರಮಾಂಕದಲ್ಲಿ ಕೃನಾಲ್‌ ಪಾಂಡ್ಯ, ಟಿಮ್‌ ಡೇವಿಡ್‌ ಬಿರುಸಿನ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಕೃನಾಲ್‌ ಬ್ಯಾಟಿಂಗ್‌ ಜತೆಗೆ ಬೌಲಿಂಗ್‌ನಲ್ಲಿಯೂ ಕೊಡುಗೆ ನೀಡಬಲ್ಲರು. ಡೆಲ್ಲಿಗೆ ಹೋಲಿಸಿದರೆ ಆರ್‌ಸಿಬಿಯ ಬೌಲಿಂಗ್‌ ಘಟಕವೂ ವೈವಿಧ್ಯಮಯವಾಗಿ ಬಲಿಷ್ಠವಾಗಿದೆ. ಅನುಭವಿಗಳಾದ ಜೋಶ್‌ ಹ್ಯಾಜಲ್‌ವುಡ್‌, ಭುವನೇಶ್ವರ್‌ ಕುಮಾರ್‌ ಜತೆ ಸುಯಶ್ ಶರ್ಮಾ, ರಾಸಿಖ್ ಸಲಾಮ್ ದಾರ್ ಎದುರಾಳಿಗಳನ್ನು ಕಟ್ಟಿಹಾಕುವ ಸಾಮರ್ಥ್ಯ ಹೊಂದಿದ್ದಾರೆ.

RCB vs DC: ಆರ್‌ಸಿಬಿ ಪಂದ್ಯಕ್ಕೆ ಡೆಲ್ಲಿ ತಂಡದಲ್ಲಿ ಎರಡು ಬದಲಾವಣೆ ಸಾಧ್ಯತೆ

ಪಂದ್ಯಾವಳಿ ನಿರ್ಣಾಯಕ ಹಂತಕ್ಕೆ ಪ್ರವೇಶಿಸುತ್ತಿರುವುದರಿಂದ, ಈ ಘರ್ಷಣೆ ಕೇವಲ ಎರಡು ಅಂಕಗಳಿಗಿಂತ ಹೆಚ್ಚಿನದಾಗಿದೆ. ಬೆಂಗಳೂರಿಗೆ ತನ್ನ ಪ್ರಾಬಲ್ಯವನ್ನು ಪ್ರತಿಪಾದಿಸಲು ಒಂದು ಅವಕಾಶವಾಗಿದೆ. ಡೆಲ್ಲಿ ಈ ಪಂದ್ಯದಲ್ಲಿ ಸೋತರೆ ಪ್ಲೇ ಆಫ್‌ ಹಾದಿ ಕಠಿಣವಾಲಿದೆ. ಈಗಾಗಲೇ ಆಡಿದ 7 ಪಂದ್ಯಗಳಲ್ಲಿ ಕೇವಲ 3 ಪಂದ್ಯ ಮಾತ್ರ ಗೆದ್ದಿದೆ. ಆರ್‌ಸಿಬಿ 7ರಲ್ಲಿ 5 ಗೆಲುವು ಕಂಡು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿದೆ.

ಸಂಭಾವ್ಯ ತಂಡ

ಡೆಲ್ಲಿ ಕ್ಯಾಪಿಟಲ್ಸ್‌: ಕೆ.ಎಲ್ ರಾಹುಲ್ (ವಿ.ಕೀ.), ಪಾತುಮ್ ನಿಸ್ಸಾಂಕ, ಸಮೀರ್ ರಿಜ್ವಿ, ಅಕ್ಷರ್ ಪಟೇಲ್ (ನಾಯಕ), ನಿತೀಶ್ ರಾಣಾ, ಟ್ರಿಸ್ಟಾನ್ ಸ್ಟಬ್ಸ್, ಡೇವಿಡ್ ಮಿಲ್ಲರ್, ದುಷ್ಮಂತ ಚಮೀರ/ಕೈಲ್‌ ಜಾಮಿಸನ್‌, ಕುಲದೀಪ್ ಯಾದವ್, ಟಿ ನಟರಾಜನ್, ಮುಖೇಶ್ ಕುಮಾರ್.

IPL 2026: ಮಂಡಿರಜ್ಜು ಗಾಯಕ್ಕೆ ತುತ್ತಾದ ವೈಭವ್ ಸೂರ್ಯವಂಶಿ; ರಾಜಸ್ಥಾನ್‌ಗೆ ಆತಂಕ!

ಆರ್‌ಸಿಬಿ: ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿ.ಕೀ.), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಸುಯಶ್ ಶರ್ಮಾ, ರಾಸಿಖ್ ಸಲಾಮ್ ದಾರ್.

ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೊ ಹಾಟ್‌ಸ್ಟಾರ್‌.

ಪಂದ್ಯ ಆರಂಭ: ರಾತ್ರಿ 7.30ಕ್ಕೆ