ನವದೆಹಲಿ, ಎ.27: ಇಂದು(ಸೋಮವಾರ) ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್(IPL 2026)ನ 39ನೇ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್(DC vs RCB) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಾದಾಟ ನಡೆಸಲಿದೆ. ಪಂದ್ಯಕ್ಕೆ ಅರುಣ್ ಜೇಟ್ಲಿ ಕ್ರೀಡಾಂಗಣ(Arun Jaitley Stadium) ಅಣಿಯಾಗಿದೆ. ಮೊದಲ ಸುತ್ತಿನಲ್ಲಿ ಡೆಲ್ಲಿ ತಂಡವು ಆರ್‌ಸಿಬಿಯನ್ನು ತವರಿನಲ್ಲಿ (ಚಿನ್ನಸ್ವಾಮಿ ಕ್ರೀಡಾಂಗಣ)ಯೇ ಹಣಿದಿತ್ತು. ಅದರ ಮುಯ್ಯಿ ತೀರಿಸಿಕೊಳ್ಳುವ ಛಲದಲ್ಲಿ ರಜತ್ ಪಾಟೀದಾರ್ ಪಡೆ ಇದೆ. ಈ ಪಂದ್ಯದಲ್ಲಿ ಉಭಯ ಆಟಗಾರರು ಕೆಲವು ದಾಖಲೆಯ ಸನಿಹದಲ್ಲಿದ್ದಾರೆ. ಈ ಕುರಿತ ವರದಿ ಇಲ್ಲಿದೆ.
ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ)
ಕೆ.ಎಲ್ ರಾಹುಲ್: ಟಿ20ಯಲ್ಲಿ 8500 ರನ್‌ಗಳಿಗೆ 18 ರನ್‌ಗಳ ಅಗತ್ಯವಿದೆ.
ಕೆ.ಎಲ್ ರಾಹುಲ್: ಡೆಲ್ಲಿ ತಂಡದ ಪರ 1000 ರನ್ ಪೂರ್ತಿಗೊಳಿಸಲು 104 ರನ್‌ಗಳ ಅಗತ್ಯವಿದೆ.
ನಿತೀಶ್ ರಾಣಾ: 150 ಐಪಿಎಲ್ ಸಿಕ್ಸರ್‌ಗಳಿಗೆ 1 ಸಿಕ್ಸರ್ ಅಗತ್ಯವಿದೆ.
ಡೇವಿಡ್ ಮಿಲ್ಲರ್: 12000 ಟಿ20 ರನ್‌ಗಳಿಗೆ 11 ರನ್‌ಗಳ ಅಗತ್ಯವಿದೆ.
ಡೇವಿಡ್ ಮಿಲ್ಲರ್: 550 ಟಿ20 ಸಿಕ್ಸರ್‌ಗಳಿಗೆ 3 ಸಿಕ್ಸರ್‌ಗಳ ಅಗತ್ಯವಿದೆ.
ಕುಲದೀಪ್ ಯಾದವ್: 250 ಟಿ20 ವಿಕೆಟ್‌ಗಳಿಗೆ 2 ವಿಕೆಟ್‌ಗಳ ಅಗತ್ಯವಿದೆ.
GT vs CSK: ಚೆನ್ನೈ ವಿರುದ್ಧ ಗೆಲುವಿನ ಹೊರತಾಗಿಯೂ ತಂಡದ ಪ್ರದರ್ಶನಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶುಭಮನ್ ಗಿಲ್
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)
ವಿರಾಟ್ ಕೊಹ್ಲಿ: 9000 ಐಪಿಎಲ್ ರನ್‌ಗಳಿಗೆ 111 ರನ್‌ಗಳ ಅಗತ್ಯವಿದೆ.
ವಿರಾಟ್ ಕೊಹ್ಲಿ: 450 ಟಿ20 ಸಿಕ್ಸರ್‌ಗಳಿಗೆ 3 ಸಿಕ್ಸರ್‌ಗಳ ಅಗತ್ಯವಿದೆ.
ಜಾಕೋಬ್ ಬೆಥೆಲ್: 100 ಟಿ20 ಸಿಕ್ಸರ್‌ಗಳಿಗೆ 3 ಸಿಕ್ಸರ್‌ಗಳ ಅಗತ್ಯವಿದೆ.
ರಜತ್ ಪಟಿದಾರ್: ಆರ್‌ಸಿಬಿಗೆ 50 ನೇ ಪಂದ್ಯ.
ಜಿತೇಶ್ ಶರ್ಮಾ: 50 ಐಪಿಎಲ್ ಕ್ಯಾಚ್‌ಗಳಿಗೆ 1 ಕ್ಯಾಚ್ ಅಗತ್ಯವಿದೆ.
ಜಿತೇಶ್ ಶರ್ಮಾ: 300 ಟಿ20 ಬೌಂಡರಿಗಳಿಗೆ 6 ಬೌಂಡರಿಗಳು ಅಗತ್ಯವಿದೆ.
ಭುವನೇಶ್ವರ ಕುಮಾರ್: 350 ಟಿ20 ವಿಕೆಟ್‌ಗಳಿಗೆ 4 ವಿಕೆಟ್‌ಗಳು ಅಗತ್ಯವಿದೆ.
ಜೋಶ್ ಹ್ಯಾಜಲ್‌ವುಡ್: ಆರ್‌ಸಿಬಿಗೆ 50 ವಿಕೆಟ್‌ಗಳಿಗೆ 1 ವಿಕೆಟ್ ಅಗತ್ಯವಿದೆ.
ಡೆಲ್ಲಿಗೆ ಗೆಲುವು ಅನಿವಾರ್ಯ
ಏಳು ಪಂದ್ಯಗಳಲ್ಲಿ ಕೇವಲ ಮೂರು ಗೆಲುವು ಮತ್ತು ನಾಲ್ಕು ಸೋಲುಗಳೊಂದಿಗೆ ಕ್ಯಾಪಿಟಲ್ಸ್ ತಂಡ ಸಂಕಷ್ಟದಲ್ಲಿದೆ. ಪ್ಲೇ ಆಫ್ ರೇಸ್‌ನಲ್ಲಿ ಉಳಿಯಬೇಕಿದ್ದರೆ ಆರ್‌ಸಿಬಿ ವಿರುದ್ಧ ಗೆಲುವು ಅತ್ಯಗತ್ಯ. ಕೆ.ಎಲ್ ರಾಹುಲ್ ಪಂಜಾಬ್ ಕಿಂಗ್ಸ್ ವಿರುದ್ಧ ಕೇವಲ 67 ಎಸೆತಗಳಲ್ಲಿ ಅಜೇಯ 152 ರನ್ ಗಳಿಸಿದ್ದರು. ಅವರ ಮೇಲೆ ಈ ಪಂದ್ಯದಲ್ಲಿಯೂ ಭಾರೀ ನಿರೀಕ್ಷೆ ಇರಿಸಲಾಗಿದೆ. ಭುಜದ ಗಾಯದಿಂದ ಚೇತರಿಸಿಕೊಂಡ ಮಿಚೆಲ್ ಸ್ಟಾರ್ಕ್ ತಂಡಕ್ಕೆ ಮರಳಿದರೂ, ಮೇ 1 ರವರೆಗೆ ಆಡುವ ನಿರೀಕ್ಷೆಯಿಲ್ಲ.
ಸೂಪರ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಮೇಲೆದ್ದ ಕೆಕೆಆರ್
ಹಾಲಿ ಚಾಂಪಿಯನ್ ಆರ್‌ಸಿಬಿ ತಂಡವು ಈ ಋತುವಿನಲ್ಲಿ ಐದು ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಪ್ಲೇ ಆಫ್ ಸನಿಹದಲ್ಲಿರುವ ತಂಡಕ್ಕೆ ಇನ್ನುಳಿದ ಪಂದ್ಯಗಳಲ್ಲಿ ಕನಿಷ್ಠ 3 ಗೆಲುವು ಸಾಧಿಸಿದರೂ ಸಾಕು.