ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸೂಪರ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಮೇಲೆದ್ದ ಕೆಕೆಆರ್‌

IPL 2026 Points Table: ಗುಜರಾತ್ ಟೈಟಾನ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿ ಟೂರ್ನಿಯಲ್ಲಿ ನಾಲ್ಕನೇ ಗೆಲುವು ಸಾಧಿಸಿತು. ಟೈಟಾನ್ಸ್ ಒಂದು ಸ್ಥಾನ ಏರಿಕೆಯಾಗಿ ಐದನೇ ಸ್ಥಾನಕ್ಕೆ ತಲುಪಿದರೆ, ಸೂಪರ್ ಕಿಂಗ್ಸ್ ಒಂದು ಸ್ಥಾನದಿಂದ ಆರನೇ ಸ್ಥಾನಕ್ಕೆ ಕುಸಿದಿದೆ.

ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಮೇಲೆದ್ದ ಕೆಕೆಆರ್‌

Kolkata Knight Riders -

Abhilash BC
Abhilash BC Apr 27, 2026 6:55 AM

ಲಖನೌ, ಎ.27: ಭಾನುವಾರ ನಡೆದ ಐಪಿಎಲ್ 2026ರ ಡಬಲ್‌ ಹೆಡರ್‌ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್(LSG vs KKR) ಮತ್ತು ಗುಜರಾತ್‌ ಟೈಟಾನ್ಸ್‌ ತಂಡಗಳು ಗೆಲುವು ಸಾಧಿಸಿ ಅಂಕ(IPL 2026 Points Table)ಪಟ್ಟಿಯಲ್ಲಿ ಪ್ರಗತಿ ಸಾಧಿಸಿದೆ. ಕೆಕೆಆರ್‌ ತಂಡವು ಸೂಪರ್ ಓವರ್ ಮೂಲಕ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿ ಕೊನೆಯ ಸ್ಥಾನದಿಂದ 8ನೇ ಸ್ಥಾನಕ್ಕೇರಿತು. ಗುಜರಾತ್‌ 5ನೇ ಸ್ಥಾನ ಪಡೆಯಿತು.

ಸೋಲು ಕಂಡ ಲಕನೌ ತಂಡ ಎಂಟು ಪಂದ್ಯಗಳಿಂದ ಕೇವಲ ನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ. ಕೆಕೆಆರ್ ಈಗ ಐದು ಅಂಕಗಳನ್ನು ಹೊಂದಿದ್ದು, ಎಂಟನೇ ಸ್ಥಾನಕ್ಕೆ ಏರಿದೆ.

ಗುಜರಾತ್ ಟೈಟಾನ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿ ಟೂರ್ನಿಯಲ್ಲಿ ನಾಲ್ಕನೇ ಗೆಲುವು ಸಾಧಿಸಿತು. ಟೈಟಾನ್ಸ್ ಒಂದು ಸ್ಥಾನ ಏರಿಕೆಯಾಗಿ ಐದನೇ ಸ್ಥಾನಕ್ಕೆ ತಲುಪಿದರೆ, ಸೂಪರ್ ಕಿಂಗ್ಸ್ ಒಂದು ಸ್ಥಾನದಿಂದ ಆರನೇ ಸ್ಥಾನಕ್ಕೆ ಕುಸಿದಿದೆ.

ಅಂಕಪಟ್ಟಿ ಹೀಗಿದೆ

ಪಂಜಾಬ್ ಕಿಂಗ್ಸ್- 13 ಅಂಕ

ರಾಯಲ್ ಚಾಲೆಂಜರ್ಸ್ ಬೆಂಗಳೂರು- 10 ಅಂಕ

ಸನ್‌ರೈಸರ್ಸ್ ಹೈದರಾಬಾದ್- 10 ಅಂಕ

ರಾಜಸ್ಥಾನ್ ರಾಯಲ್ಸ್- 10 ಅಂಕ

ಗುಜರಾತ್ ಟೈಟಾನ್ಸ್- 8 ಅಂಕ

ಚೆನ್ನೈ ಸೂಪರ್ ಕಿಂಗ್ಸ್- 6 ಅಂಕ

ದೆಹಲಿ ಕ್ಯಾಪಿಟಲ್ಸ್- 6 ಅಂಕ

ಕೋಲ್ಕತ್ತಾ ನೈಟ್ ರೈಡರ್ಸ್- 5 ಅಂಕ

ಮುಂಬೈ ಇಂಡಿಯನ್ಸ್- 4 ಅಂಕ

ಲಕ್ನೋ ಸೂಪರ್ ಜೈಂಟ್ಸ್- 4 ಅಂಕ

ಆರೆಂಜ್ ಕ್ಯಾಪ್

ಆರೆಂಜ್‌ ಕ್ಯಾಪ್‌ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಎಡಗೈ ಬ್ಯಾಟರ್‌ ಅಭಿಷೇಕ್‌ ಶರ್ಮ ಬಳಿ ಇದೆ. ಇಂದಿನ ಪಂದ್ಯದಲ್ಲಿ ರಾಹುಲ್‌ಗೆ ಈ ಕ್ಯಾಪ್‌ ತಮ್ಮದಾಗಿಸುವ ಅವಕಾಶವಿದೆ. ಸದ್ಯ ರಾಹುಲ್‌ ಈ ರೇಸ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಅಭಿಷೇಕ್ ಶರ್ಮಾ (SRH) - 380 ರನ್‌

ಕೆ.ಎಲ್‌ ರಾಹುಲ್ (DC)- 357 ರನ್‌

ವೈಭವ್ ಸೂರ್ಯವಂಶಿ (RR) - 357 ರನ್‌

ಹೆನ್ರಿಚ್ ಕ್ಲಾಸೆನ್ (SRH)- 349 ರನ್‌

ಶುಭಮನ್‌ ಗಿಲ್‌ (GT) - 330 ರನ್‌

LSG vs KKR: ರಿಂಕು, ನರೇನ್‌ ಮಿಂಚು ಲಖನೌ ಎದುರು ಸೂಪರ್‌ ಓವರ್‌ ಥ್ರಿಲ್ಲರ್‌ ಗೆದ್ದ ಕೋಲ್ಕತಾ!

ಪರ್ಪಲ್‌ ಕ್ಯಾಪ್‌

ಅತ್ಯಧಿಕ ವಿಕೆಟ್‌ ಕಿತ್ತ ಬೌಲರ್‌ಗೆ ನೀಡುವ ಪರ್ಪಲ್‌ ಕ್ಯಾಪ್‌ ರೇಸ್‌ನಲ್ಲಿ ಯಾವುದೇ ದೊಡ್ಡ ಬದಲಾವಣೆ ಸಂಭವಿಸಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ವೇಗಿ ಅನ್ಶುಲ್ ಕಾಂಬೋಜ್ ಪ್ರಸ್ತುತ 7 ಪಂದ್ಯಗಳಲ್ಲಿ 14 ವಿಕೆಟ್‌ಗಳೊಂದಿಗೆ ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಅಂಶುಲ್ ಕಾಂಬೋಜ್ (CSK) - 14 ವಿಕೆಟ್‌

ಇಶನ್ ಮಾಲಿಂಗ (SRH) - 14 ವಿಕೆಟ್‌

ಪ್ರಿನ್ಸ್ ಯಾದವ್ (LSG) - 13 ವಿಕೆಟ್‌

ಜೋಫ್ರಾ ಆರ್ಚರ್ (RR) - 13 ವಿಕೆಟ್‌

ಕಗಿಸೊ ರಬಾಡ (GT) - 13 ವಿಕೆಟ್‌