ಮುಂಬಯಿ, ನ.17: ಮುಂದಿನ ವರ್ಷದ ಐಪಿಎಲ್ 20ನೇ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಮುನ್ನ ಎಲ್ಲ 10 ತಂಡಗಳು ಆಟಗಾರರ ರಿಟೇನ್ ಪಟ್ಟಿಯನ್ನು ಪ್ರಕಟಿಸಲು ಮಂಗಳವಾರ ಅಂತಿಮ ಗಡುವು ಆಗಿದೆ. ತಂಡಗಳು ಯಾವ ಆಟಗಾರರನ್ನು ರಿಟೇನ್ ಮಾಡಿಕೊಳ್ಳಲಿವೆ ಮತ್ತು ಯಾರನ್ನು ಕೈಬಿಡಲಿವೆ ಎಂಬ ಬಗ್ಗೆ ತೀವ್ರ ಕುತೂಹಲಗಳು ಹರಡಿವೆ.
ಹರಾಜು ಪ್ರಕ್ರಿಯೆಗೆ ಮುನ್ನ ಈಗಾಗಲೆ ಕೆಲ ಪ್ರಮುಖ ಆಟಗಾರರ ವರ್ಗಾವಣೆ ಪ್ರಕ್ರಿಯೆಗಳು ನಡೆದಿವೆ. ಆಟಗಾರರ ವಿನಿಮಯ ಪ್ರಕ್ರಿಯೆ (ಟ್ರೇಡ್ ವಿಂಡೋ) ಇನ್ನೂ ಚಾಲ್ತಿಯಲ್ಲಿದೆ. ಮೊಹಮ್ಮದ್ ಶಮಿ, ಸ್ಯಾಮ್ ಕರನ್ ಮತ್ತು ಯಶಸ್ವಿ ಜೈಸ್ವಾಲ್ ಅವರ ಭವಿಷ್ಯ ಇನ್ನೂ ಅನಿಶ್ಚಿತವಾಗಿರುವುದರಿಂದ, ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳುವ ದಿನದಂದು (ರಿಟೆನ್ಷನ್ ಡೇ) ಕೆಲವು ಪ್ರಮುಖ ಬದಲಾವಣೆಗಳನ್ನು ನಾವು ನಿರೀಕ್ಷಿಸಬಹುದು.
ಧೋನಿ ಮೇಲೆ ಎಲ್ಲರ ಕಣ್ಣು
ಚೆನ್ನೈ ಸೂಪರ್ಕಿಂಗ್ಸ್ ತಂಡ ಮಾಜಿ ನಾಯಕ ಎಂಎಸ್ ಧೋನಿ ಆಡಲಿದ್ದಾರೆಯೇ ಅಥವಾ ನಿವೃತ್ತಿ ಹೊಂದಲಿದ್ದಾರೆಯೇ? ಎಂಬುದು ಇಂದಿನ 'ರಿಟೆನ್ಷನ್' (ಆಟಗಾರರನ್ನು ಉಳಿಸಿಕೊಳ್ಳುವ) ದಿನದಂದು ಉಳಿದುಕೊಂಡಿರುವ ಪ್ರಶ್ನೆಯಾಗಿದೆ.
45 ವರ್ಷದ ಧೋನಿ ಕಳೆದ ಆವೃತ್ತಿಗೆ ತಂಡದಲ್ಲಿದ್ದರೂ, ಫಿಟ್ನೆಸ್ ಸಮಸ್ಯೆಯಿಂದಾಗಿ ಒಂದೂ ಪಂದ್ಯ ಆಡಿರಲಿಲ್ಲ. ಹೀಗಾಗಿ ಅವರು ಮುಂದಿನ ಆವೃತ್ತಿಗೆ ಫಿಟ್ ಆಗುವ ಬಗ್ಗೆ ಅನುಮಾನವಿದೆ. ಅವರು ರಿಟೇನ್ ಆಗದಿದ್ದರೆ ನಿವೃತ್ತಿ ಖಚಿತವೆನಿಸಿದೆ.
IPL 2027: ರಾಜಸ್ಥಾನ್ ರಾಯಲ್ಸ್ ತಂಡದ ನಾಯಕನಾಗಿ ರಿಯಾನ್ ಪರಾಗ್ ಮುಂದುವರಿಕೆ?
ಚೆನ್ನೈ ತಮ್ಮ ಬಳಿ ಹೆಚ್ಚಿನ ಹಣವನ್ನು (ಪರ್ಸ್‌ನಲ್ಲಿ ಮೊತ್ತವನ್ನು) ಲಭ್ಯವಾಗಿಸಿಕೊಳ್ಳಲು, 14.2 ಕೋಟಿ ರೂಪಾಯಿಗೆ ಖರೀದಿಸಿದ್ದ ಪ್ರಶಾಂತ್ ವೀರ್ ಅವರನ್ನು ತಂಡದಿಂದ ಕೈಬಿಡಲಿದ್ದಾರೆ. ಇದಲ್ಲದೆ, ಮ್ಯಾಟ್ ಶಾರ್ಟ್, ಮ್ಯಾಟ್ ಹೆನ್ರಿ ಮತ್ತು ಸ್ಪೆನ್ಸರ್ ಜಾನ್ಸನ್ ಅವರನ್ನು ಕೂಡ ತಂಡದಿಂದ ಬಿಡುಗಡೆ ಮಾಡುವ ಮೂಲಕ ಅವರು ಹೆಚ್ಚಿನ ಅವಕಾಶವನ್ನು ಸೃಷ್ಟಿಸಿಕೊಳ್ಳಲಿದ್ದಾರೆ. ಚೆನ್ನೈ ತಂಡವು ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಜಾಕ್ ಎಡ್ವರ್ಡ್ಸ್ ಅವರನ್ನು ಟ್ರೇಡಿಂಗ್ ಮೂಲಕ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ.
ಚೆನ್ನೈ ರಿಟೈನ್ ಮಾಡಿಕೊಳ್ಳಬಹುದಾದ ಸಂಭಾವ್ಯ ಆಟಗಾರರು
ಡೆವಾಲ್ಡ್ ಬ್ರೆವಿಸ್, ಋತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಎಂಎಸ್ ಧೋನಿ, ಶಿವಂ ದುಬೆ, ಉರ್ವಿಲ್ ಪಟೇಲ್, ಅನ್ಶುಲ್ ಕಾಂಬೋಜ್, ಜೇಮಿ ಓವರ್ಟನ್, ನೂರ್ ಅಹ್ಮದ್, ಕಾರ್ತಿಕ್ ಶರ್ಮಾ, ಆಯುಷ್ ಮ್ಹಾತ್ರೆ, ಮುಖೇಶ್ ಚೌಧರಿ, ಗುರ್ಜಪ್ನೀತ್ ಸಿಂಗ್, ಸರ್ಫರಾಜ್ ಖಾನ್, ರಾಮಕೃಷ್ಣ ಘೋಷ್, ಅಕೇಲ್ ಹೋಸೆನ್.
ತಂಡದಿಂದ ರಿಸೀಸ್ ಮಾಡುವ ಸಂಭಾವ್ಯ ಪಟ್ಟಿ
ಅಮನ್ ಖಾನ್, ಮ್ಯಾಟ್ ಶಾರ್ಟ್, ರಾಹುಲ್ ಚಾಹರ್, ಮ್ಯಾಟ್ ಹೆನ್ರಿ, ಸ್ಪೆನ್ಸರ್ ಜಾನ್ಸನ್, ಆಕಾಶ್ ಮಾಧ್ವಲ್, ಕುಲದೀಪ್ ಯಾದವ್, ಡಯಾನ್ ಫಾರೆಸ್ಟರ್, ಶ್ರೇಯಸ್ ಗೋಪಾಲ್, ಝಾಕ್ ಫೌಲ್ಕ್ಸ್, ಮ್ಯಾಕ್ನೀಲ್ ನೊರೊನ್ಹಾ, ಪ್ರಶಾಂತ್ ವೀರ್.