IPL 2027: ರಾಜಸ್ಥಾನ್ ರಾಯಲ್ಸ್ ತಂಡದ ನಾಯಕನಾಗಿ ರಿಯಾನ್ ಪರಾಗ್ ಮುಂದುವರಿಕೆ?
2027ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಿಯಾನ್ ಪರಾಗ್ ಅವರನ್ನು ನಾಯಕನಾಗಿ ಮುಂದುವರಿಸಲು ರಾಜಸ್ಥಾನ್ ರಾಯಲ್ಸ್ ನಿರ್ಧರಿಸಿದೆ. ಕಳೆದ ಆವೃತ್ತಿಯಲ್ಲಿ ತಂಡವನ್ನು ಪ್ಲೇಆಫ್‌ಗೆ ಮುನ್ನಡೆಸಿದ್ದ ಪರಾಗ್ ಮೇಲೆ ಫ್ರಾಂಚೈಸಿ ಮತ್ತೊಮ್ಮೆ ವಿಶ್ವಾಸವಿಟ್ಟಿದೆ. ನವೆಂಬರ್ 17ರ ರಿಟೆನ್ಷನ್ ಗಡುವಿಗೂ ಮುನ್ನ ಈ ನಿರ್ಧಾರ ಅಧಿಕೃತವಾಗುವ ನಿರೀಕ್ಷೆಯಿದೆ.
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ರಿಯಾನ್ ಪರಾಗ್ ನಾಯಕನಾಗಿ ಮುಂದುವರಿಕೆ. -
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2027ರ (IPL 2027) ಆವೃತ್ತಿಗೂ ರಿಯಾನ್ ಪರಾಗ್ (Riyan Parag) ಅವರನ್ನು ನಾಯಕನಾಗಿ ಮುಂದುವರಿಸಲು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ನಿರ್ಧರಿಸಿದೆ. ಕಳೆದ ಆವೃತ್ತಿಯಲ್ಲಿ ಮೊದಲ ಬಾರಿಗೆ ಪೂರ್ಣಾವಧಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದ ಪರಾಗ್ ಅವರ ಮೇಲೆ ಫ್ರಾಂಚೈಸಿ ಮತ್ತೊಮ್ಮೆ ವಿಶ್ವಾಸ ವ್ಯಕ್ತಪಡಿಸಿದೆ. ನವೆಂಬರ್ 17ರ ಆಟಗಾರರ ರಿಟೆನ್ಷನ್ ಗಡುವಿಗೂ ಮುನ್ನ ಈ ನಿರ್ಧಾರ ಅಧಿಕೃತವಾಗಿ ಪ್ರಕಟವಾಗುವ ನಿರೀಕ್ಷೆಯಿದೆ.
ರಾಜಸ್ಥಾನ್ ರಾಯಲ್ಸ್ ತಂಡ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಮಾಡಲು ನಿರ್ಧರಿಸಿಲ್ಲ ಎನ್ನಲಾಗಿದೆ. ಹೊಸ ಮಾಲೀಕತ್ವದ ಅಡಿಯಲ್ಲಿ ಮುಂದಿನ ಆವೃತ್ತಿಗೆ ಸಿದ್ಧತೆ ನಡೆಸುತ್ತಿರುವ ತಂಡ, ಅಸ್ಸಾಂ ಮೂಲದ ಆಲ್‌ರೌಂಡರ್ ರಿಯಾನ್ ಪರಾಗ್ ಅವರನ್ನೇ ನಾಯಕನಾಗಿ ಉಳಿಸಿಕೊಳ್ಳಲು ಮುಂದಾಗಿದೆ.
ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ವರ್ಗಾವಣೆಯಾದ ಬಳಿಕ 2026ರ ಐಪಿಎಲ್‌ಗೂ ಮುನ್ನ ರಿಯಾನ್ ಪರಾಗ್ ಅವರಿಗೆ ಪೂರ್ಣಾವಧಿ ನಾಯಕತ್ವ ನೀಡಲಾಗಿತ್ತು. ನಾಯಕನಾಗಿ ಅವರ ಮೊದಲ ಆವೃತ್ತಿ ಸಾಕಷ್ಟು ಸವಾಲುಗಳಿಂದ ಕೂಡಿತ್ತು. ಮೈದಾನದ ಒಳಗೆ ಮತ್ತು ಹೊರಗೆ ಹಲವು ಏರಿಳಿತಗಳನ್ನು ಎದುರಿಸಿದ್ದರೂ, ಮತ್ತೊಂದು ವರ್ಷ ತಂಡವನ್ನು ಮುನ್ನಡೆಸುವ ಅವಕಾಶ ನೀಡಲು ರಾಜಸ್ಥಾನ್ ಫ್ರಾಂಚೈಸಿ ನಿರ್ಧರಿಸಿದೆ.
IPL 2027: ಲಖನೌ ಸೂಪರ್ ಜಯಂಟ್ಸ್‌ನಿಂದ ರಾಜಸ್ಥಾನ್ ರಾಯಲ್ಸ್‌ಗೆ ಸೇರಲಿರುವ ಮೊಹಮ್ಮದ್ ಶಮಿ?
ನವೆಂಬರ್ 17ರ 2027ರ ಐಪಿಎಲ್ ರಿಟೆನ್ಷನ್ ಗಡುವಿಗೂ ಮುನ್ನ ಈ ನಿರ್ಧಾರ ಅಧಿಕೃತಗೊಳ್ಳುವ ಸಾಧ್ಯತೆಯಿದೆ. ಸದ್ಯ ಪರಾಗ್ ಲಂಡನ್‌ನಲ್ಲಿದ್ದು, ತಂಡದ ಸಹಮಾಲೀಕ ಮನೋಜ್ ಬಡಾಲೆ, ಮುಖ್ಯ ಕೋಚ್ ಕುಮಾರ ಸಂಗಕ್ಕಾರ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಸೇರಿದಂತೆ ಫ್ರಾಂಚೈಸಿಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ.
ಪರಾಗ್‌ಗೆ ಫ್ರಾಂಚೈಸಿ ಬೆಂಬಲ
ನಾಯಕನಾಗಿ ರಿಯಾನ್ ಪರಾಗ್ ಅವರ ಮೊದಲ ಪೂರ್ಣಾವಧಿ ಆವೃತ್ತಿ ಏರಿಳಿತಗಳಿಂದ ಕೂಡಿತ್ತು. ಐಪಿಎಲ್ 2026ರ ಲೀಗ್ ಹಂತದಲ್ಲಿ ರಾಜಸ್ಥಾನ್ ರಾಯಲ್ಸ್ ನಾಲ್ಕನೇ ಸ್ಥಾನ ಪಡೆದಿತ್ತು. ಆದರೆ ಕ್ವಾಲಿಫೈಯರ್-2ರಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿತ್ತು. ಈ ಆವೃತ್ತಿಯಲ್ಲಿ 24 ವಯಸ್ಸಿನ ಪರಾಗ್ 309 ರನ್ ಗಳಿಸಿದ್ದರು. ಆದರೆ ಅವರ ಬ್ಯಾಟಿಂಗ್ ಪ್ರದರ್ಶನದಲ್ಲಿ ಸ್ಥಿರತೆ ಇರಲಿಲ್ಲ.
ವಿರಾಟ್ ಕೊಹ್ಲಿ ಜೊತೆಗಿನ ಸ್ನೇಹವೇ ನನ್ನ ಜೀವನದ ದುಬಾರಿ ಸಂಬಂಧ: ಫಾಫ್ ಡು ಪ್ಲೆಸಿಸ್!
ಯಶಸ್ವಿ ಜೈಸ್ವಾಲ್ ಕೂಡ ತಂಡದ ಪ್ರಮುಖ ಆಟಗಾರನಾಗಿರುವುದರಿಂದ ನಾಯಕತ್ವದಲ್ಲಿ ಬದಲಾವಣೆ ತರಬಹುದೇ ಎಂಬ ಚರ್ಚೆಗಳು ನಡೆದಿದ್ದವು. ಆದರೆ ನಾಯಕತ್ವದಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಲು ಫ್ರಾಂಚೈಸಿ ಬಯಸಿದ್ದು, ಪರಾಗ್ ಅವರನ್ನೇ ಮುಂದುವರಿಸಲು ಒಲವು ತೋರಿದೆ.
2019ರಿಂದಲೂ ರಿಯಾನ್ ಪರಾಗ್ ರಾಜಸ್ಥಾನ್ ರಾಯಲ್ಸ್ ತಂಡದ ಭಾಗವಾಗಿದ್ದಾರೆ. ಹಲವು ವರ್ಷಗಳಿಂದ ಅವರ ಬೆಳವಣಿಗೆಗೆ ಫ್ರಾಂಚೈಸಿ ಬೆಂಬಲ ನೀಡುತ್ತಾ ಬಂದಿದೆ. ಅಂತಿಮವಾಗಿ 2026ರ ಆವೃತ್ತಿಗೂ ಮುನ್ನ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿತ್ತು.