ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಶ್ರೀಲಂಕಾದಲ್ಲಿ ಧೋನಿಯ ಸಾರ್ವಕಾಲಿಕ ಟೆಸ್ಟ್‌ ದಾಖಲೆ ಮುರಿದ ಜುರೆಲ್‌

Dhruv Jurel: ಶ್ರೀಲಂಕಾದಲ್ಲಿ 7ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವಾಗ ಭಾರತ ಪರ ಅತ್ಯಧಿಕ ವೈಯಕ್ತಿಕ ಸ್ಕೋರ್ ದಾಖಲಿಸಿದ ಧ್ರುವ್ ಜುರೆಲ್, ಎಂಎಸ್ ಧೋನಿಯ ಸಾರ್ವಕಾಲಿಕ ಟೆಸ್ಟ್ ದಾಖಲೆಯನ್ನು ಮುರಿದರು. ಧೋನಿ 2010ರಲ್ಲಿ 76 ರನ್‌ ಗಳಿಸಿದ್ದರು. 1985 ರ ಐಲ್ಯಾಂಡ್ ನೇಷನ್ ಪ್ರವಾಸದಲ್ಲಿ ಶ್ರೀಲಂಕಾದಲ್ಲಿ ಟೆಸ್ಟ್ ಅರ್ಧಶತಕ ಗಳಿಸಿದ ಮೊದಲ ಭಾರತೀಯ ಆಲ್‌ರೌಂಡರ್ ಮೊಹಿಂದರ್ ಅಮರ್‌ನಾಥ್ ಆಗಿದ್ದರು.

Dhruv Jurel

ಕೊಲಂಬೊ, ಆ.25: ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಅಜೇಯ ಶತಕ ಬಾರಿಸಿರುವ ಧ್ರುವ್ ಜುರೆಲ್ ಅಪರೂಪದ ಸಾಧನೆ ಮಾಡಿದ್ದಾರೆ. 7ನೇ ಕ್ರಮಾಂಕದಲ್ಲಿ ಆಡಿದ ಜುರೆಲ್, ಟೆಸ್ಟ್ ಪಂದ್ಯದ 2ನೇ ದಿನದಂದು 115 ರನ್ ಗಳಿಸುವ ಮೂಲಕ ಶ್ರೀಲಂಕಾದಲ್ಲಿ ಧೋನಿಯ ಪ್ರಮುಖ ಬ್ಯಾಟಿಂಗ್ ದಾಖಲೆಯೊಂದನ್ನು ಮುರಿದರು.

ದೇವದತ್ ಪಡಿಕ್ಕಲ್ ಅಬ್ಬರದ ಶತಕದೊಂದಿಗೆ ಭಾರತ ತಂಡಕ್ಕೆ ಉತ್ತಮ ಆರಂಭ ನೀಡಿದ ನಂತರ, ಶುಭಮನ್ ಗಿಲ್ ಮತ್ತು ರಿಷಭ್ ಪಂತ್ ನಿರ್ಣಾಯಕ ಅರ್ಧಶತಕಗಳನ್ನು ಗಳಿಸಿ ಪ್ರವಾಸಿಗರು ಮುನ್ನಡೆ ಸಾಧಿಸಲು ಸಹಾಯ ಮಾಡಿದರು. ಆ ಬಳಿಕ ಜುರೆಲ್‌ ಶತಕ ಬಾರಿಸಿ ತಂಡದ ಮೊತ್ತವನ್ನು ಮತ್ತಷ್ಟು ಹಿಗ್ಗಿಸಿದರು. ಪಂತ್‌ ಜತೆಗೂಡಿ ಏಳನೇ ವಿಕೆಟ್‌ಗೆ 112 ರನ್‌ಗಳ ಅಮೂಲ್ಯ ಪಾಲುದಾರಿಕೆಯನ್ನು ರೂಪಿಸಿದರು. ಭಾರತವು ತನ್ನ ಮೊದಲ ಇನ್ನಿಂಗ್ಸ್ ಅನ್ನು 9 ವಿಕೆಟ್‌ಗೆ 503 ರನ್‌ಗಳಿಗೆ ಡಿಕ್ಲೇರ್ ಮಾಡಿತು.

ಶ್ರೀಲಂಕಾದಲ್ಲಿ 7ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವಾಗ ಭಾರತ ಪರ ಅತ್ಯಧಿಕ ವೈಯಕ್ತಿಕ ಸ್ಕೋರ್ ದಾಖಲಿಸಿದ ಧ್ರುವ್ ಜುರೆಲ್, ಎಂಎಸ್ ಧೋನಿಯ ಸಾರ್ವಕಾಲಿಕ ಟೆಸ್ಟ್ ದಾಖಲೆಯನ್ನು ಮುರಿದರು. ಧೋನಿ 2010ರಲ್ಲಿ 76 ರನ್‌ ಗಳಿಸಿದ್ದರು. 1985 ರ ಐಲ್ಯಾಂಡ್ ನೇಷನ್ ಪ್ರವಾಸದಲ್ಲಿ ಶ್ರೀಲಂಕಾದಲ್ಲಿ ಟೆಸ್ಟ್ ಅರ್ಧಶತಕ ಗಳಿಸಿದ ಮೊದಲ ಭಾರತೀಯ ಆಲ್‌ರೌಂಡರ್ ಮೊಹಿಂದರ್ ಅಮರ್‌ನಾಥ್ ಆಗಿದ್ದರು.

ಒಟ್ಟಾರೆ ಸಂಖ್ಯೆಗಳ ಬಗ್ಗೆ ಹೇಳುವುದಾದರೆ, ಧ್ರುವ್ ಜುರೆಲ್ ತಮ್ಮ ಮೊದಲ ಪ್ರವಾಸದಲ್ಲಿ ಶ್ರೀಲಂಕಾದಲ್ಲಿ ಎಂಎಸ್ ಧೋನಿಗಿಂತ ಅದ್ಭುತವಾಗಿ ಪ್ರದರ್ಶನ ನೀಡಿದ್ದಾರೆ. ಶ್ರೀಲಂಕಾ ನೆಲದಲ್ಲಿ ಧೋನಿ ಮೂರು ಟೆಸ್ಟ್ ಪಂದ್ಯಗಳನ್ನು ಆಡಿದ್ದು, 32 ರ ಸಾಧಾರಣ ಸರಾಸರಿಯಲ್ಲಿ 132 ರನ್ ಗಳಿಸಿದ್ದಾರೆ.

ತಂದೆಗೆ ತಕ್ಕ ಮಗ; ಸೆಹ್ವಾಗ್ ಪುತ್ರನ ಬ್ಯಾಟಿಂಗ್‌ಗೆ ನೆಟ್ಟಿಗರು ಫಿದಾ!

ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಧೋನಿ 2 ಇನ್ನಿಂಗ್ಸ್‌ಗಳಲ್ಲಿ ಕೇವಲ 33 ರನ್ ಗಳಿಸಿದರೆ, ಧ್ರುವ್ ಜುರೆಲ್ ಆ ಸ್ಥಳದಲ್ಲಿ ನಡೆದ ತಮ್ಮ ಮೊದಲ ಟೆಸ್ಟ್‌ನಲ್ಲಿ ಅರ್ಧಶತಕ ಗಳಿಸಿದರು. ಒಟ್ಟಾರೆಯಾಗಿ, ಜುರೆಲ್ ಈಗಾಗಲೇ 3 ಇನ್ನಿಂಗ್ಸ್‌ಗಳಲ್ಲಿ 86.5 ಸರಾಸರಿಯಲ್ಲಿ ಅರ್ಧಶತಕ ಮತ್ತು ಶತಕದ ಸಹಾಯದಿಂದ 173* ರನ್ ಗಳಿಸಿದ್ದಾರೆ.

ಶ್ರೀಲಂಕಾದಲ್ಲಿ ಭಾರತದ 7ನೇ ಶ್ರೇಯಾಂಕದ ಆಟಗಾರನಿಂದ ಅತ್ಯಧಿಕ ಟೆಸ್ಟ್ ಸ್ಕೋರ್

ಧ್ರುವ್ ಜುರೆಲ್- 115*

ಎಂಎಸ್ ಧೋನಿ-76

ವೃದ್ಧಿಮಾನ್ ಸಹಾ-67

ವಿವಿಎಸ್ ಲಕ್ಷ್ಮಣ್ 61*

ಮೊಹಿಂದರ್ ಅಮರನಾಥ್-60