ಬೆಟ್ಟಿಂಗ್ ಕೇಸ್; ಧವನ್, ರೈನಾ, ಉತ್ತಪ್ಪ, ಯುವಿ ಆಸ್ತಿ ಶೀಘ್ರ ಜಪ್ತಿ
ಜಾರಿ ನಿರ್ದೇಶನಾಲಯವು ಶೀಘ್ರದಲ್ಲೇ ಯುವರಾಜ್, ಧವನ್, ರೈನಾ, ಉತ್ತಪ್ಪ ಸೇರಿ ಸೆಲೆಬ್ರಿಟಿಗಳ ಯುಎಇ ಸೇರಿ ವಿದೇಶದಲ್ಲಿರುವ ಆಸ್ತಿಗಳನ್ನೂ ಜಪ್ತಿ ಮಾಡಿಕೊಳ್ಳುವ ನಿರೀಕ್ಷೆ ಇದೆ. ಈ ಆಸ್ತಿಗಳ ಪ್ರಮಾಣೀಕರಣ ಹಾಗೂ ಮೌಲ್ಯ ನಿರ್ಣಯ ಕಾರ್ಯ ಈಗಾಗಲೇ ನಡೆಯುತ್ತಿದೆ.

-

ನವದೆಹಲಿ: ಆನ್‌ಲೈನ್ ಬೆಟ್ಟಿಂಗ್ ಮತ್ತು ಗೇಮಿಂಗ್ ಪ್ಲಾಟ್‌ಫಾರ್ಮ್‌ಗೆ(betting app 1xBet) ಸಂಬಂಧಿಸಿ ಜಾರಿ ನಿರ್ದೇಶನಾಲಯ(ಇ.ಡಿ.)ವು ಕೆಲ ಕ್ರೀಡಾಪಟುಗಳು ಹಾಗೂ ನಟ-ನಟಿಯರ ನೂರಾರು ಕೋಟಿ ಆಸ್ತಿಯನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಮುಟ್ಟುಗೋಲು ಹಾಕುವ ಸಾಧ್ಯತೆ ಇದೆ. ಈ ಪ್ರಕರಣ ಸಂಬಂಧ ಕಳೆದ ಕೆಲ ದಿನಗಳಿಂದ ಜಾರಿ ನಿರ್ದೇಶನಾಲಯವು ಕ್ರಿಕೆಟರ್‌ಗಳಾದ ಯುವರಾಜ್ ಸಿಂಗ್(Yuvraj Singh), ಸುರೇಶ್ ರೈನಾ(Suresh Raina), ರಾಬಿನ್ ಉತ್ತಪ್ಪ, ಶಿಖರ್ ಧವನ್, ನಟರಾದ ಸೋನು ಸೂದ್, ಮಿಮಿ ಚಕ್ರವರ್ತಿ, ಅಂಕುಶ್ ಹಝಾರಾ ಅವರನ್ನು ತನಿಖೆಗೆ ಒಳಪಡಿಸಿದೆ.
ಕುರಕಾವೋದಲ್ಲಿ ನೋಂದಣಿಯಾಗಿರುವ ‘1ಎಕ್ಸ್‌ಬೆಟ್’ ಕಂಪನಿಯು ಅಂತಾರಾಷ್ಟ್ರೀಯಮಟ್ಟದಲ್ಲಿ ಬೆಟ್ಟಿಂಗ್ ವ್ಯವಹಾರ ನಡೆಸುತ್ತಿದೆ. ಈ ಬೆಟ್ಟಿಂಗ್ ವೆಬ್‌ಸೈಟ್ ಹಾಗೂ ಆ್ಯಪ್ ಕುರಿತ ತನಿಖೆ ವೇಳೆ ಇದರ ಪರ ಪ್ರಚಾರಕ್ಕಾಗಿ ಹಲವು ಸೆಲೆಬ್ರಿಟಿಗಳು ಸಂಭಾವನೆ ಪಡೆದಿರುವುದು ಮತ್ತು ಆ ಸಂಭಾವನೆಯಲ್ಲಿ ಆಸ್ತಿಗಳನ್ನು ಖರೀದಿಸಿರವುದು ಬೆಳಕಿಗೆ ಬಂದಿತ್ತು. ಅಕ್ರಮ ಹಣ ವರ್ಗಾವಣೆ ಕಾನೂನಿನಡಿ ಈ ಆಸ್ತಿಯನ್ನು ಕ್ರಿಮಿನಲ್ ಚಟುವಟಿಕೆಗಳಿಂದ ಗಳಿಸಿದ ಆಸ್ತಿ ಎಂಬುದಾಗಿ ಪರಿಗಣಿಸಲು ಅವಕಾಶವಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ Asia Cup 2025: ʻಭಾರತ ತಂಡದ ಎದುರು ಹ್ಯಾರಿಸ್ ರೌಫ್ ರನ್ ಮಷೀನ್ʼ-ವಸೀಮ್ ಅಕ್ರಮ್ ಟೀಕೆ!
ಹೀಗಾಗಿ ಜಾರಿ ನಿರ್ದೇಶನಾಲಯವು ಶೀಘ್ರದಲ್ಲೇ ಯುವರಾಜ್, ಧವನ್, ರೈನಾ, ಉತ್ತಪ್ಪ ಸೇರಿ ಸೆಲೆಬ್ರಿಟಿಗಳ ಯುಎಇ ಸೇರಿ ವಿದೇಶದಲ್ಲಿರುವ ಆಸ್ತಿಗಳನ್ನೂ ಜಪ್ತಿ ಮಾಡಿಕೊಳ್ಳುವ ನಿರೀಕ್ಷೆ ಇದೆ. ಈ ಆಸ್ತಿಗಳ ಪ್ರಮಾಣೀಕರಣ ಹಾಗೂ ಮೌಲ್ಯ ನಿರ್ಣಯ ಕಾರ್ಯ ಈಗಾಗಲೇ ನಡೆಯುತ್ತಿದೆ. ಜಪ್ತಿ ಆದೇಶ ಹೊರಬಿದ್ದ ಬಳಿಕ ನ್ಯಾಯಾಲಯಕ್ಕೆ ಆ ಆಸ್ತಿಗಳನ್ನು ಮುಟ್ಟುಗೋಲು ಹಾಕಲು ಜಾರ್ಜ್‌ಶೀಟ್ ಹಾಕಲಾಗುತ್ತದೆ.