ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತ ತಂಡಕ್ಕೆ ಏಷ್ಯಾ ಕಪ್‌ ಪದಕ ನೀಡಲು ರೆಡಿ ಆದ್ರೆ, ಒಂದು ಕಂಡೀಷನ್‌! ಮೊಹ್ಸಿನ್‌ ನಖ್ವಿಯ ಹೊಸ ನಾಟಕ!

ಪಾಕಿಸ್ತಾನ ತಂಡವನ್ನು ಮಣಿಸಿ 2025ರ ಏಷ್ಯಾ ಕಪ್‌ ಮುಡಿಗೇರಿಸಿಕೊಂಡ ಭಾರತ ತಂಡ 9ನೇ ಬಾರಿ ಚಾಂಪಿಯನ್‌ ಆಗಿತ್ತು. ಆದರೆ, ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ ಮುಖ್ಯಸ್ಥ ಮೊಹ್ಸಿನ್‌ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ಟೀಮ್‌ ಇಂಡಿಯಾ ನಿರಾಕರಿಸಿತ್ತು. ನಂತರ ಹೈಡ್ರಾಮಾ ನಡೆದಿತ್ತು. ಇದೀಗ ಮೊಹ್ಸಿನ್‌ ನಖ್ವಿ ಅವರ ಮತ್ತೊಂದು ನಾಟಕ ಬಯಲಾಗಿದೆ.

ʻಭಾರತಕ್ಕೆ ಪದಕ ನೀಡಲು ಸಿದ್ದʼ: ಮೊಹ್ಸಿನ್‌ ನಖ್ವಿ ಹೊಸ ನಾಟಕ!

ಭಾರತಕ್ಕೆ ಪದಕ ನೀಡಲು ಒಂದು ಕಂಡೀಷನ್‌ ಹಾಕಿರುವ ಮೊಹ್ಸಿನ್‌ ನಖ್ವಿ. -

Profile Ramesh Kote Sep 29, 2025 9:46 PM

ದುಬೈ: ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ ಮುಖ್ಯಸ್ಥ ಮೊಹ್ಸಿನ್‌ ನಖ್ವಿ (Mohsin Naqvi) ಅವರು ಏಷ್ಯಾ ಕಪ್‌ (Asia Cup 2025) ಚಾಂಪಿಯನ್ಸ್‌ ಭಾರತ ತಂಡಕ್ಕೆ (India) ವಿಜೇತ ಪದಕಗಳನ್ನು ನೀಡಲು ಸಿದ್ದರಿರುವುದಾಗಿ ತಿಳಿಸಿದ್ದಾರೆ. ಆದರೆ ಅದಕ್ಕಾಗಿ ಒಂದು 'ಔಪಚಾರಿಕ ಸಮಾರಂಭ' ಏರ್ಪಡಿಸಬೇಕೆಂದು ಅವರು ಕಂಡೀಷನ್ ಹಾಕಿದ್ದಾರೆಂದು ಕ್ರಿಕ್‌ಬಝ್‌ ವರದಿ ಮಾಡಿದೆ. ನಖ್ವಿ ತಮ್ಮ ಅನಿಸಿಕೆಯನ್ನು ಏಷ್ಯಾ ಕಪ್ ಸಂಘಟಕರ ಬಳಿ ಬಹಿರಂಗಪಡಿಸಿದ್ದಾರೆ, ಆದರೆ ಅಂತಹ ಸಮಾರಂಭವ ಏರ್ಪಡಿಸುವ ಸಾಧ್ಯತೆ ಕಡಿಮೆ.

ನಖ್ವಿ ಅವರು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ಮುಖ್ಯಸ್ಥರೂ ಆಗಿದ್ದಾರೆ. ಹೀಗಾಗಿ, ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್ ಪಂದ್ಯದ ನಂತರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಭಾರತದ ಬೇಡಿಕೆಗಳಿಗೆ ಮಣಿಯಲಿಲ್ಲ ಎಂಬುದು ಆಶ್ಚರ್ಯವೇನಿಲ್ಲ.

ಫೈನಲ್‌ನಲ್ಲಿ ಪಾಕಿಸ್ಥಾನವನ್ನು 5 ವಿಕೆಟ್‌ಗಳಿಂದ ಮಣಿಸಿದ ಬಳಿಕ ಭಾರತ ತಂಡ ಕಠಿಣ ಹೋರಾಟ ನಡೆಸಿ ಗೆದ್ದ ಏಷ್ಯಾ ಕಪ್‌ ಟ್ರೋಫಿ ಹಾಗೂ ಪದಕವನ್ನು ನಖ್ವಿ ಅವರಿಂದ ಸ್ವೀಕರಿಸುವುದಿಲ್ಲ ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದರು. ಈ ರಾಜಕಾರಣಿ ಭಾರತ ವಿರೋಧಿ ಹೇಳಿಕೆಗಳು ಮತ್ತು ಭಾರತೀಯ ಭಾವನೆಗಳನ್ನು ಅಪಹಾಸ್ಯ ಮಾಡುವುದರಿಂದ ಜಗತ್ತಿನ ಈ ಭಾಗದಲ್ಲಿ ಕುಖ್ಯಾತರಾಗಿದ್ದಾರೆ.

IND vs PAK: ಪಾಕಿಸ್ತಾನಕ್ಕೆ ಮುಖಭಂಗ, 9ನೇ ಏಷ್ಯಾ ಕಪ್‌ ಗೆದ್ದು ಸಂಭ್ರಮಿಸಿದ ಭಾರತ!

ಆಡಳಿತ ಮಂಡಳಿ ಮತ್ತು ಸೂರ್ಯಕುಮಾರ್ ಯಾದವ್ ಅವರ ನಡುವೆ ಒಂದು ಗಂಟೆ ಕಾಲ ಮಾತುಕತೆ ನಡೆದಿತ್ತು. ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಖಾಲಿದ್ ಅಲ್ ಜರೂನಿ ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಅಮೀನುಲ್ ಇಸ್ಲಾಂ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ಭಾರತ ಪ್ರಸ್ತಾಪಿಸಿತ್ತು. ಆದರೆ ನಖ್ವಿ, ಬಹುಶಃ ಸ್ವದೇಶದಲ್ಲಿ ತನ್ನ ಇಮೇಜ್ ಅನ್ನು ಕಾಪಾಡಿಕೊಳ್ಳಲು, ಬಹುಮಾನವನ್ನು ತಾವೇ ಹಸ್ತಾಂತರಿಸುವುದಾಗಿ ಪಟ್ಟು ಹಿಡಿದರು.

ಮೊಹ್ಸಿನ್‌ ನಖ್ವಿ ವೇದಿಕೆಯಿಂದ ಇಳಿದು ಕ್ರೀಡಾಂಗಣದಿಂದ ಹೊರಬಂದರು, ಮಾತ್ರವಲ್ಲ ಎಸಿಸಿ ಅಧಿಕಾರಿಗಳು ಟ್ರೋಫಿಯೊಂದಿಗೆ ಅವರನ್ನು ಹಿಂಬಾಲಿಸಿದರು. ಈಗ ಅದನ್ನು ಕ್ರೀಡಾಂಗಣದಿಂದ ತುಂಬಾ ದೂರದಲ್ಲಿರುವ ಎಸಿಸಿ ಪ್ರಧಾನ ಕಚೇರಿಯಲ್ಲಿ ಇರಿಸಲಾಗಿದೆ ಎಂದು ವರದಿಯಾಗಿದೆ. ಭಾರತ ತಂಡದ ಆಟಗಾರರು ತಮ್ಮ ವಿಜಯೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದ್ದರು. ಕಾಲ್ಪನಿಕ ಟ್ರೋಫಿಯನ್ನು ಎತ್ತಿದರು ಮತ್ತು ಕಾಫಿ 'ಕಪ್‌ಗಳು' ಅಥವಾ ಟ್ರೋಫಿ ಎಮೋಜಿಗಳೊಂದಿಗೆ ಫೋಟೋಗಳನ್ನು ಪೋಸ್ಟ್ ಮಾಡಿದರು.

IND vs PAK: ಐಸಿಸಿ ಟೂರ್ನಿಗಳಿಂದ ಬ್ಯಾನ್‌ ಮಾಡಬೇಕೆಂದ ಪಾಕ್‌ ಮಾಜಿ ನಾಯಕ ರಶೀದ್‌ ಲತಿಫ್‌!

ನವೆಂಬರ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಬಿಸಿಸಿಐ ಪ್ರತಿಜ್ಞೆ ಮಾಡಿದೆ. ಆದಾಗ್ಯೂ, ಮೇಲೆ ತಿಳಿಸಲಾದ ವರದಿಯ ಪ್ರಕಾರ, ಸೆಪ್ಟೆಂಬರ್ 30, ಮಂಗಳವಾರ ದುಬೈನಲ್ಲಿ ನಡೆಯಲಿರುವ ಎಸಿಸಿ ಸಭೆಯಲ್ಲಿ ಬಿಸಿಸಿಐ ಈ ವಿಷಯವನ್ನು ಚರ್ಚಿಸಲಿದೆ. ಇದು ಭಾರತೀಯ ಕಾಲಮಾನ ಮಧ್ಯಾಹ್ನ 3:30 ರ ಸುಮಾರಿಗೆ ಪ್ರಾರಂಭವಾಗಲಿದೆ.