Asia Cup 2025: ʻಭಾರತ ತಂಡದ ಎದುರು ಹ್ಯಾರಿಸ್ ರೌಫ್ ರನ್ ಮಷೀನ್ʼ-ವಸೀಮ್ ಅಕ್ರಮ್ ಟೀಕೆ!
Wasim Akram on Haris Rauf: ಭಾರತ ವಿರುದ್ದದ 2025ರ ಏಷ್ಯಾ ಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವೇಗದ ಬೌಲರ್ ಹ್ಯಾರಿಸ್ ರೌಫ್ ಅವರನ್ನು ವೇಗದ ಬೌಲಿಂಗ್ ದಿಗ್ಗಜ ವಸೀಮ ಅಕ್ರಮ್ ಟೀಕಿಸಿದ್ದಾರೆ. ಭಾರತದ ಎದುರು ಹ್ಯಾರಿಸ್ ರೌಫ್ ರನ್ ಮಷೀನ್ ಎಂದು ವ್ಯಂಗ್ಯವಾಡಿದ್ದಾರೆ.

ಹ್ಯಾರಿಸ್ ರೌಫ್ ಅವರನ್ನು ಟೀಕಿಸಿದ ವಸೀಮ್ ಅಕ್ರಮ್. -

ನವದೆಹಲಿ: ಭಾರತದ ಎದುರು 2025ರ ಏಷ್ಯಾ ಕಪ್ (Asia Cup 2025) ಟೂರ್ನಿಯ ಫೈನಲ್ ಪಂದ್ಯದಲ್ಲಿ ದುಬಾರಿ ಸ್ಪೆಲ್ ಮಾಡಿದ ಪಾಕಿಸ್ತಾನ ತಂಡದ ಹಿರಿಯ ವೇಗಿ ಹ್ಯಾರಿಸ್ ರೌಫ್ (Haris Rauf) ಅವರನ್ನು ವೇಗದ ಬೌಲಿಂಗ್ ದಿಗ್ಗಜ ವಸೀಮ್ ಅಕ್ರಮ್ (Wasim Akram) ಟೀಕಿಸಿದ್ದಾರೆ. ಭಾನುವಾರ ದುಬೈ ಇಂಟರ್‌ನ್ಯಾಷನಲ್ ಕ್ರಿಕಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಭಾರತ ತಂಡ, ಎದುರಾಳಿ ಪಾಕಿಸ್ತಾನವನ್ನು5 ವಿಕೆಟ್‌ಗಳಿಂದ ಮಣಿಸುವ ಮೂಲಕ 9ನೇ ಬಾರಿ ಏಷ್ಯಾ ಕಪ್ ಅನ್ನು ಮುಡಿಗೇರಿಸಿಕೊಂಡಿತ್ತು. ಅಲ್ಲದೆ ಈ ಟೂರ್ನಿಯಲ್ಲಿ ಪಾಕಿಸ್ತಾನವನ್ನು ಭಾರತ ಸತತ ಮೂರು ಪಂದ್ಯಗಳಲ್ಲಿ ಸೋಲಿಸಿದೆ. ಆ ಮೂಲಕ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ.
ಪ್ರಸ್ತುತ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನದ ಮುಖಾಮುಖಿಯಲ್ಲಿ ಹ್ಯಾರಿಸ್ ರೌಫ್ ಅವರು ಕೈ ಸನ್ನೆ ಹಾಗೂ ವಿವಾದಾತ್ಮಕ ಆಚರಣೆಗಳಿಂದ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ಆದರೆ, ಸೆಪ್ಟಂಬರ್ 28 ರಂದು ಫೈನಲ್ ಪಂದ್ಯದಲ್ಲಿ ಅವರು ಭಾರತದ ಎದುರು ಬೌಲಿಂಗ್‌ನಲ್ಲಿ ದುಬಾರಿಯಾಗಿದ್ದರು. ಅವರು ಬೌಲ್ ಮಾಡಿದ್ದ 3.5 ಓವರ್‌ಗಳಲ್ಲಿ 50 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಕೊನೆಯಲ್ಲಿ ರಿಂಕು ಸಿಂಗ್ ಗೆಲುವಿನ ಬೌಂಡರಿಯನ್ನು ಉಡುಗೊರೆಯಾಗಿ ನೀಡಿದ್ದರು. ಈ ಪಂದ್ಯದ ಬಳಿಕ ಸೋನಿ ಸ್ಪೋರ್ಟ್ಸ್ ವಾಹಿನಿಯಲ್ಲಿ ಮಾತನಾಡಿದ ವಸೀಮ್ ಅಕ್ರಮ್, ಹ್ಯಾರಿಸ್ ರೌಫ್ ಅವರನ್ನು ಟೀಕಿಸಿದ್ದಾರೆ. ರೆಡ್-ಬಾಲ್ ಕ್ರಿಕೆಟ್ ಆಡಲು ರೌಫ್ ನಿರಾಕರಿಸಿರುವುದು ಯಾವುದೇ ಸುಧಾರಣೆಯ ಲಕ್ಷಣಗಳನ್ನು ತೋರಿಸುತ್ತಿಲ್ಲ ಎಂದು ಅಕ್ರಮ್ ಹೇಳಿದ್ದಾರೆ.
IND vs PAK: ಐಸಿಸಿ ಟೂರ್ನಿಗಳಿಂದ ಬ್ಯಾನ್ ಮಾಡಬೇಕೆಂದ ಪಾಕ್ ಮಾಜಿ ನಾಯಕ ರಶೀದ್ ಲತಿಫ್!
"ಇವರು ಅನಿರೀಕ್ಷಿತವಾಗಿ ರನ್ ಮಷೀನ್ ಬೌಲರ್ ಹಾಗೂ ವಿಶೇಷವಾಗಿ ಭಾರತ ತಂಡದ ವಿರುದ್ಧ. ನಾನು ಅವರನ್ನು ಟೀಕಿಸುತ್ತಿದ್ದೇನೆ. ಇಡೀ ದೇಶವೇ ಅವರನ್ನು ಟೀಕಿಸುತ್ತಿದೆ ಹಾಗೂ ಅವರು ರೆಡ್ ಬಾಲ್ ಕ್ರಿಕೆಟ್ ಆಡುತ್ತಿಲ್ಲ. ಅವರು ಸುಧಾರಣೆಯನ್ನು ಕಂಡುಕೊಳ್ಳುತ್ತಿಲ್ಲ. ಅವರು ಆಡಲು ಹೋಗದಿದ್ದರೆ, ರೆಡ್-ಬಾಲ್ ಕ್ರಿಕೆಟ್ ಆಡಲು ನಿರಾಕರಿಸುವ ಆಟಗಾರನು ನಿಮ್ಮ ತಂಡದಲ್ಲಿ ಇರಲು ನೀವು ಬಯಸುವುದಿಲ್ಲ. ಕನಿಷ್ಠ ನಾಲ್ಕು ಅಥವಾ ಐದು ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನಾದರು ಆಡಬೇಕು," ಎಂದು ವಸೀಮ್ ಅಕ್ರಮ್ ಸೋನಿ ಸ್ಪೋರ್ಟ್ಸ್ ಚರ್ಚೆಯಲ್ಲಿ ತಿಳಿಸಿದ್ದಾರೆ.
"ಚೆಂಡಿನ ಮೇಲೆ ನಿಯಂತ್ರಣ ಇಲ್ಲ, ಏಕೆಂದರೆ ಅವರು ರೆಡ್ ಬಾಲ್ ಕ್ರಿಕೆಟ್ ಆಡುತ್ತಿಲ್ಲ. ನೀವು ರೆಡ್ ಬಾಲ್ ಕ್ರಿಕೆಟ್ ಆಡುತ್ತಿಲ್ಲವಾದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒಂದು ಕಡೆ ಕುಳಿತುಕೊಂಡು ಧನ್ಯವಾದ, ತುಂಬಾ ಧನ್ಯವಾದಗಳು ಎಂದು ಹೇಳಬೇಕು," ಎಂದು ವಸೀಮ್ ಅಕ್ರಮ್ ದೂರಿದ್ದಾರೆ.
IND vs PAK: ಪಾಕಿಸ್ತಾನಕ್ಕೆ ಮುಖಭಂಗ, 9ನೇ ಏಷ್ಯಾ ಕಪ್ ಗೆದ್ದು ಸಂಭ್ರಮಿಸಿದ ಭಾರತ!
ಭಾರತದ ಎದುರು ಹ್ಯಾರಿಸ್ ರೌಫ್ ಆಡಿರುವ ಏಳು ಟಿ20ಐ ಪಂದ್ಯಗಳಿಂದ 25.66ರ ಸರಾಸರಿಯಲ್ಲಿ 231 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಇದೀಗ ಏಷ್ಯಾ ಕಪ್ ಫೈನಲ್‌ನಲ್ಲಿಯೂ ರೌಫ್ 50 ರನ್ ಕೊಟ್ಟಿದ್ದರು. ಈ ಹಿಂದೆ 2022ರ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿಯೂ 19ನೇ ಓವರ್‌ನಲ್ಲಿ ವಿರಾಟ್ ಕೊಹ್ಲಿಗೆ ಹ್ಯಾರಿಸ್ ರೌಫ್ ಸಿಕ್ಸರ್ ಸೇರಿದಂತೆ 15 ರನ್‌ಗಳನ್ನು ಕೊಟ್ಟಿದ್ದರು. ಆ ಮೂಲಕ ಭಾರತ 160 ರನ್‌ಗಳನ್ನು ಚೇಸ್ ಮಾಡಿತ್ತು.
"ನೀವು ನಿಮ್ಮ ಲೆನ್ತ್‌ನಲ್ಲಿ ಸುಧಾರಣೆ ಕಂಡುಕೊಳ್ಳಬೇಕಾದ ಅಗತ್ಯವಿದೆ, ಅವರ ರನ್ ಅಫ್ ಕೂಡ ಸುಧಾರಣೆಯಾಗಬೇಕು. ನಾನು ವಖಾರ್ ಯೂನಿಸ್ ಅವರ ಜೊತೆ ಮಾತನಾಡಿದ್ದೇನೆ ಹಾಗೂ ಅವರು ಆಡುತ್ತಿರುವಾಗಿನಿಂದ ಕಳೆದ ನಾಲ್ಕು ಅಥವಾ ಐದು ವರ್ಷಗಳಿಂದ ರನ್-ಅಪ್ ಅನ್ನು ಏಕೆ ಸರಿಪಡಿಸಲಿಲ್ಲ ಎಂದು ನಾನು ಕೇಳಿದೆ? ಅವರು ರೆಡ್-ಬಾಲ್ ಕ್ರಿಕೆಟ್ ಆಡುವುದಿಲ್ಲ ಎಂದು ಹೇಳಿದರು," ಎಂದು ಅಕ್ರಮ್ ತಿಳಿಸಿದ್ದಾರೆ.