ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mohammed Siraj: ʼಮನೆಯಲ್ಲಿಡಲು ಸ್ಥಳವಿಲ್ಲದಷ್ಟು ಹಣ ಗಳಿಸುವೆʼ; ನಿಜವಾಯಿತು ಸಿರಾಜ್, ತಾಯಿಗೆ ನೀಡಿದ ಭರವಸೆ

ಹಣವಿದ್ದರೆ ಮಾತ್ರ ಕ್ರಿಕೆಟ್‌ ಅಭ್ಯಾಸ ಮಾಡಬಹುದು, ಭಾರತ ತಂಡದ ಪರ ಆಡಬಹುದು ಎಂದು ಯೋಚಿಸುತ್ತಿರುವ ಅದೆಷ್ಟೋ ಬಡ ಕ್ರಿಕೆಟಿಗರಿಗೆ ನಾನೇ ಉತ್ತಮ ಉದಾಹರಣೆ. ನಿಮ್ಮ ಮೇಲೆ ನೀವು ನಂಬಿಕೆ ಇಟ್ಟರೆ ಏನನ್ನು ಸಾಧಿಸಬಹುದು ಎಂದು ಸಿರಾಜ್‌ ಆತ್ವವಿಶ್ವಾಸ ನುಡಿಗಳನ್ನಾಡಿದರು.

ಮುಂಬಯಿ: ಟೀಮ್‌ ಇಂಡಿಯಾದ ಸ್ಟಾರ್‌ ವೇಗಿ ಮೊಹಮ್ಮದ್‌ ಸಿರಾಜ್‌ (Mohammed Siraj) ಅವರು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ. ಕ್ರಿಕೆಟ್ ಆಡಲು ಹೋಗುತ್ತಿದ್ದ ಕಾರಣಕ್ಕೆ ತಾಯಿಯ ಕೋಪಕ್ಕೆ ಗುರಿಯಾದ ಘಟನೆ ಮತ್ತು ಅಂದು ತಾಯಿಗೆ ನೀಡಿದ ಮಾತು ಹೇಗೆ ನಿಜವಾಯಿತು ಎಂಬುದನ್ನು ಮನಬಿಚ್ಚಿ ಮಾತನಾಡಿದ್ದಾರೆ.

ಹೌದು, ಸಿರಾಜ್‌ ಬಾಲ್ಯದಲ್ಲಿ, ಶಾಲೆ ಬಿಟ್ಟ ನಂತರ ಸಾಮಾನ್ಯವಾಗಿ ಮಕ್ಕಳು ಕ್ರಿಕೆಟ್ ಆಡಲು ಹೋಗುವಂತೆ ಅವರು ಕೂಡ ಶಾಲೆಯಿಂದ ಬಂತ ತಕ್ಷಣವೇ ಕ್ರಿಕೆಟ್ ಆಡಲು ಹೋಗುತ್ತಿದ್ದರಂತೆ. ಆಗ ತಾಯಿ ಸಿರಾಜ್‌ಗೆ ಕೋಲು ಹಿಡಿದು ಎಂದೆರಡು ಏಟು ನೀಡುತ್ತದಂತೆ. ಈ ಏಟಿನಿಂದ ಪಾರಾಗಲು ಸಿರಾಜ್‌ ಏನು ಮಾಡುತ್ತಿದ್ದರು ಎಂಬ ರೋಚಕ ಸಂಗತಿಯನ್ನು ಅವರು ತೆರೆದಿಟ್ಟಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಸಿರಾಜ್‌, ನಾನು ಕ್ರಿಕೆಟ್‌ ಆಡುವುದು ನನ್ನ ತಾಯಿಗೆ ಇಷ್ಟವಿರಲಿಲ್ಲ. ಆದರೆ ನನಗೆ ಕ್ರಿಕೆಟ್‌ ಎಂದರೆ ಹುಚ್ಚು ಪ್ರೀತಿ. ಗೆಳೆಯರ ಜತೆ ನಾನು ಕ್ರಿಕೆಟ್‌ ಆಡುತ್ತೇನೆ ಎಂದು ತಿಳಿದ ತಕ್ಷಣ ತಾಯಿ ಬಂದು ನನಗೆ ಏಟು ನೀಡುತ್ತಿದ್ದರು. ಭವಿಷ್ಯದ ಬಗ್ಗೆ ನನಗೆ ಚಿಂತೆ ಇಲ್ಲ ಎಂದು ಹೇಳುತ್ತಿದ್ದರು. ಆಗ ನಾನು ಹೊಡೆಯುವುದನ್ನು ನಿಲ್ಲಿಸಲು ಮತ್ತು ಒಂದು ದಿನ ನಾನು ತುಂಬಾ ಹಣವನ್ನು ಗಳಿಸುತ್ತೇನೆ, ಅದನ್ನು ಇಡಲು ಮನೆಯಲ್ಲಿ ಸ್ಥಳವಿಲ್ಲ(ಏಕ್ ದಿನ್ ಐಸಾ ಆಯೇಂಗಾ ಕಿ ಪೈಸೆ ರಖ್ನೇ ಕಿ ಜಗಹ್ ನಹಿ ರಹೇಗಿ ಆಪ್ಕೆ ಪಾಸ್) ಎಂದು ಕೇಳಿದ್ದೆ.

ಇದನ್ನೂ ಓದಿ IND vs AUS: ಸಿರಾಜ್‌-ಲಬುಶೇನ್‌ ಮಧ್ಯೆ 'ಬೆಲ್ಸ್‌ ವಾರ್‌'; ವಿಡಿಯೊ ವೈರಲ್‌

ಆ ದಿನ ನಾನು ಹೇಳಿದ್ದನ್ನು ಸರ್ವಶಕ್ತನು ಒಪ್ಪಿಕೊಂಡನು. ನೀವು ಉನ್ನತ ಮಟ್ಟದ ಕ್ರಿಕೆಟ್ ಆಡಲು ಬಯಸಿದರೆ ಆತ್ಮವಿಶ್ವಾಸ ಬಹಳ ಮುಖ್ಯ. ನಿಮ್ಮ ಮೇಲೆ ನಿಮಗೆ ವಿಶ್ವಾಸವಿಲ್ಲದಿದ್ದರೆ, ನೀವು ಜೀವನದಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ. ನಿಮಗೆ ನಂಬಿಕೆ ಇದ್ದರೆ ಮಾತ್ರ, ನೀವು ನಿಮಗಾಗಿ ನೀವು ನಿಗದಿಪಡಿಸಿದ ಗುರಿಯನ್ನು ಸಾಧಿಸುತ್ತೀರಿ ಎಂದು ಸಿರಾಜ್‌ ಹೇಳಿದರು.

ಆತ್ಮವಿಶ್ವಾಸ ಮುಖ್ಯ

ಹಣವಿದ್ದರೆ ಮಾತ್ರ ಕ್ರಿಕೆಟ್‌ ಅಭ್ಯಾಸ ಮಾಡಬಹುದು, ಭಾರತ ತಂಡದ ಪರ ಆಡಬಹುದು ಎಂದು ಯೋಚಿಸುತ್ತಿರುವ ಅದೆಷ್ಟೋ ಬಡ ಕ್ರಿಕೆಟಿಗರಿಗೆ ನಾನೇ ಉತ್ತಮ ಉದಾಹರಣೆ. ನಿಮ್ಮ ಮೇಲೆ ನೀವು ನಂಬಿಕೆ ಇಟ್ಟರೆ ಏನನ್ನು ಸಾಧಿಸಬಹುದು ಎಂದು ಸಿರಾಜ್‌ ಆತ್ವವಿಶ್ವಾಸ ನುಡಿಗಳನ್ನಾಡಿದರು.