ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ENG vs IND: 4ನೇ ಟೆಸ್ಟ್‌ಗೂ ಮುನ್ನ ಭಾರತಕ್ಕೆ ಮತ್ತೊಂದು ಆಘಾತ; ಆಕಾಶ್‌ದೀಪ್‌ಗೆ ಗಾಯ

ಎಡಗೈ ವೇಗಿ ಅರ್ಶ್‌ದೀಪ್‌ ಸಿಂಗ್‌ಗೂ ಅಭ್ಯಾಸದ ವೇಳೆ ಕೈ ಬೆರಳಿನ ಗಾಯವಾಗಿತ್ತು. ಸಾಯಿ ಸುದರ್ಶನ್‌ ಬಾರಿಸಿದ ಚೆಂಡನ್ನು ಹಿಡಿಯುವ ಯತ್ನದಲ್ಲಿ ಅರ್ಶ್‌ದೀಪ್‌ ಕೈಗೆ ಗಾಯವಾಗಿತ್ತು. ಹೀಗಾಗಿ ಅವರಿಗೆ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಅವಕಾಶ ಸಿಗುವುದು ಅನುಮಾನ.

ಮ್ಯಾಂಚೆಸ್ಟರ್‌: ಇಂಗ್ಲೆಂಡ್‌ ವಿರುದ್ಧದ ನಾಲ್ಕನೇ ಟೆಸ್ಟ್‌(ENG vs IND) ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಆಘಾತವೊಂದು ಎದುರಾಗಿದೆ. ತಂಡಕ್ಕೆ ಗಾಯದ ಭೀತಿ ಎದುರಾಗಿದೆ. ತಂಡದ ಪ್ರಮುಖ ವಿಕೆಟ್‌ ಟೇಕರ್‌ ಆಕಾಶ್‌ದೀಪ್‌(Akash Deep) ಗಾಯಗೊಂಡಿದಾರೆ. ಹೀಗಾಗಿ ಅವರ ಲಭ್ಯತೆ ಅನುಮಾನ ಮೂಡಿಸಿದೆ.

ಲಾರ್ಡ್ಸ್‌ನಲ್ಲಿ 22 ರನ್‌ಗಳ ಸೋಲಿನ ನಂತರ ಭಾರತ ಐದು ಪಂದ್ಯಗಳ ಸರಣಿಯಲ್ಲಿ 1-2 ರಿಂದ ಹಿನ್ನಡೆಯಲ್ಲಿದೆ. ಆದ್ದರಿಂದ, ಸರಣಿ ಜೀವಂತವಿರಿಸಿಕೊಳ್ಳಬೇಕಿದ್ದರೆ ಗಿಲ್‌ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಪಂದ್ಯವನ್ನು ಗೆಲ್ಲಬೇಕು ಅಥವಾ ಡ್ರಾ ಮಾಡಿಕೊಳ್ಳಬೇಕು. ನಾಲ್ಕನೇ ಟೆಸ್ಟ್‌ಗೆ ಕೇವಲ ಮೂರು ದಿನಗಳು ಬಾಕಿ ಇರುವಾಗ, ಆಕಾಶ್‌ದೀಪ್‌ ತೊಡೆಸಂದು ನೋವಿಗೆ ತುತ್ತಾಗಿದ್ದಾರೆ. ಇದು ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಎಡಗೈ ವೇಗಿ ಅರ್ಶ್‌ದೀಪ್‌ ಸಿಂಗ್‌ಗೂ ಅಭ್ಯಾಸದ ವೇಳೆ ಕೈ ಬೆರಳಿನ ಗಾಯವಾಗಿತ್ತು. ಸಾಯಿ ಸುದರ್ಶನ್‌ ಬಾರಿಸಿದ ಚೆಂಡನ್ನು ಹಿಡಿಯುವ ಯತ್ನದಲ್ಲಿ ಅರ್ಶ್‌ದೀಪ್‌ ಕೈಗೆ ಗಾಯವಾಗಿತ್ತು. ಹೀಗಾಗಿ ಅವರಿಗೆ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಅವಕಾಶ ಸಿಗುವುದು ಅನುಮಾನ. ಇದರ ಬೆನ್ನಲ್ಲೇ ಆಕಾಶ್‌ದೀಪ್‌ ಕೂಡ ಗಾಯಗೊಂಡಿದಾರೆ. ಎಜ್‌ಬಾಸ್ಟಟ್‌ ಟೆಸ್ಟ್‌ ಪಂದ್ಯದ ಗೆಲುವಿನಲ್ಲಿ ಆಕಾಶ್‌ದೀಪ್‌ ಪ್ರಮುಖ ಪಾತ್ರವಹಿಸಿದ್ದರು. ಒಂದೊಮ್ಮೆ ಆಕಾಶ್‌ದೀಪ್‌ ಮತ್ತು ಅರ್ಶ್‌ದೀಪ್‌ ಅಲಭ್ಯರಾದರೆ ಆಗ ಕನ್ನಡಿಗ ಪ್ರಸಿದ್ಧ್‌ ಕೃಷ್ಣ ಅವರು ಸಿರಾಜ್‌ ಮತ್ತು ಬುಮ್ರಾ ಜತೆ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು.

ಪಂತ್‌ ಚೇತರಿಕೆ

ಲಾರ್ಡ್ಸ್ ಟೆಸ್ಟ್‌ನ ಮೊದಲ ದಿನದಾಟದ ವೇಳೆ ಬೆರಳಿಗೆ ಗಾಯಕ್ಕೆ ತುತ್ತಾಗಿದ್ದ ಪಂತ್ ಸಂಪೂರ್ಣ ಚೇತರಿಕೆ ಕಂಡಿದ್ದು ಆಡಲು ಫಿಟ್‌ ಆಗಿದಾರೆ ಎಂದು ಬಿಸಿಸಿಐ ವೈದ್ಯಕೀಯ ವಿಭಾಗ ಮಾಹಿತಿ ನೀಡಿದೆ. ಅವರ ಗಾಯದ ಸ್ವರೂಪ ಗಂಭೀರವಾದದ್ದಲ್ಲ. ನಾಲ್ಕನೇ ಟೆಸ್ಟ್‌ನಲ್ಲಿ ಅವರು ಆಡಲಿದ್ದಾರೆ ಎಂದು ತಿಳಿಸಿದೆ. ಮೂರನೇ ಟೆಸ್ಟ್‌ನಲ್ಲಿ ಗಾಯದಿಂದ ಪಂತ್‌ ಕೀಪಿಂಗ್ ಮಾಡಿರಲಿಲ್ಲ. ಧ್ರುವ್ ಜುರೆಲ್ ಕೀಪಿಂಗ್‌ ನಡೆದಿದ್ದರು.

ಇದನ್ನೂ ಓದಿ IND vs ENG: ಕೆಎಲ್‌ ರಾಹುಲ್‌ ಬ್ಯಾಟಿಂಗ್‌ ಬದಲಾವಣೆ ಬಗ್ಗೆ ದೊಡ್ಡ ಹೇಳಿಕೆ ಕೊಟ್ಟ ರವಿ ಶಾಸ್ತಿ!