IND vs ENG: ಕೆಎಲ್ ರಾಹುಲ್ ಬ್ಯಾಟಿಂಗ್ ಬದಲಾವಣೆ ಬಗ್ಗೆ ದೊಡ್ಡ ಹೇಳಿಕೆ ಕೊಟ್ಟ ರವಿ ಶಾಸ್ತಿ!
ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಪ್ರಸ್ತುತ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರುತ್ತಿರುವ ಕೆಎಲ್ ರಾಹುಲ್ ಅವರನ್ನು ಟೀಮ್ ಇಂಡಿಯಾ ಮಾಜಿ ಹೆಟ್ ಕೋಚ್ ರವಿ ಶಾಸ್ತ್ರಿ ಗುಣಗಾನ ಮಾಡಿದ್ದಾರೆ.

ಕೆಎಲ್ ರಾಹುಲ್ ಅವರನ್ನು ಶ್ಲಾಘಿಸಿದ ರವಿ ಶಾಸ್ತಿ.

ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ತಂಡಗಳ (IND vs ENG) ನಡುವಣ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಭಾರತ ತಂಡದ ಕೆಎಲ್ ರಾಹುಲ್ (KL Rahul) ಅವರನ್ನು ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ (Ravi Shastri) ಗುಣಗಾನ ಮಾಡಿದ್ದಾರೆ. ಈ ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಕೆಎಲ್ ರಾಹುಲ್ ಭಾರತ ತಂಡಕ್ಕೆ ನೆರವು ನೀಡಿದ್ದಾರೆ. ಈ ಸರಣಿಯಲ್ಲಿ ಆಡಿದ ಮೂರು ಪಂದ್ಯಗಳಿಂದ ಎರಡು ಶತಕಗಳು ಹಾಗೂ ಒಂದು ಅರ್ಧಶತಕದ ಮೂಲಕ 375 ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ಈ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿದ್ದಾರೆ.
"ಕೆಎಲ್ ರಾಹುಲ್ ಅವರ ಸಾಮರ್ಥ್ಯ ಹಾಗೂ ಅವರಿಗೆ ಪ್ರತಿಭೆ ಇಲ್ಲವೆಂದು ಜಗತ್ತಿನಾದ್ಯಂತ ಯಾರೂ ಕೂಡ ಹೇಳಿರುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಆ ರೀತಿಯ ಪ್ರತಿಭೆ ಇದ್ದರೂ ಅವರು ಅದಕ್ಕೆ ತಕ್ಕಂತೆ ಉತ್ತಮ ಪ್ರದರ್ಶನ ತೋರುತ್ತಿರಲಿಲ್ಲ ಎಂಬುದು ಜನರಿಗೆ ಕಿರಿಕಿರಿ ಉಂಟುಮಾಡುವ ವಿಷಯವಾಗಿದೆ. ಆದರೆ, ಈ ಸರಣಿಯಲ್ಲಿ ನೀವು ಉತ್ತಮ ಕೆಎಲ್ ರಾಹುಲ್ ಅವರನ್ನು ನೋಡುತ್ತಿದ್ದೀರಿ," ಎಂದು ಐಸಿಸಿ ರಿವ್ಯೂವ್‌ನಲ್ಲಿ ರವಿ ಶಾಸ್ತ್ರಿ ತಿಳಿಸಿದ್ದಾರೆ.
"ನಾನು ನೋಡುತ್ತಿರುವುದು ಅವರು (ಕೆಎಲ್ ರಾಹುಲ್) ತಮ್ಮ ಮುಂಭಾಗದ ಪಾದದಲ್ಲಿ, ಸ್ಟ್ಯಾನ್ಸ್‌ನಲ್ಲಿ ಮತ್ತು ಡಿಫೆನ್ಸ್‌ನಲ್ಲಿ ಸ್ವಲ್ಪ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಅದು ಸ್ವಲ್ಪ ತೆರೆದುಕೊಂಡಿತು, ಅದು ಅವರ ಬೆನ್ನನ್ನು ಸ್ಪಷ್ಟವಾಗಿ ದಾಟಲು ಅನುವು ಮಾಡಿಕೊಡುತ್ತದೆ. ಅವರು ಅದನ್ನು ಮಿಡ್-ವಿಕೆಟ್ ಕಡೆಗೆ ಹೊಡೆಯುವಾಗಲೂ, ಅದು ಬ್ಲೇಡ್‌ನ ಪೂರ್ಣ ಮುಖವಾಗಿರುತ್ತದೆ," ಎಂದು ಅವರು ಹೇಳಿದ್ದಾರೆ.
ಕೆಎಲ್ ರಾಹುಲ್ ತನ್ನ ಬ್ಯಾಟ್‌ನ ಮುಖವನ್ನು ಮುಚ್ಚಿಕೊಳ್ಳುವುದನ್ನು ತಪ್ಪಿಸಬೇಕು ಎಂದು ಶಾಸ್ತ್ರಿ ಸಲಹೆ ನೀಡಿದ್ದಾರೆ. ಇದು ಸಾಂದರ್ಭಿಕವಾಗಿ ಅವರ ಔಟ್‌ಗಳಿಗೆ ಕಾರಣವಾಗುವ ತಾಂತ್ರಿಕ ದೋಷವಾಗಿದೆ. ರಾಹುಲ್ ವಿಕೆಟ್ ಕಳೆದುಕೊಳ್ಳಬೇಕಾದರೆ, ಅದು ತಪ್ಪಿಸಬಹುದಾದ ದೋಷಗಳಿಂದಾಗಬಾರದು ಎಂದು ಅವರು ಒತ್ತಿ ಹೇಳಿದ್ದಾರೆ. ರಾಹುಲ್ ಯಾವುದೇ ಸೀಮ್ ಅಥವಾ ಸ್ವಿಂಗ್ ಇದ್ದರೂ ಅದನ್ನು ನಿಭಾಯಿಸುವ ತಂತ್ರವನ್ನು ಹೊಂದಿದ್ದಾರೆ ಎಂದಿದ್ದಾರೆ ರವಿ ಶಾಸ್ತ್ರಿ.
IND vs ENG: ನಾಲ್ಕನೇ ಟೆಸ್ಟ್‌ನಲ್ಲಿ ಜಸ್‌ಪ್ರೀತ್ ಬುಮ್ರಾ ಸ್ಥಾನಕ್ಕೆ ಸೂಕ್ತ ವೇಗಿಯನ್ನು ಆರಿಸಿದ ಅಜಿಂಕ್ಯ ರಹಾನೆ!
ಈ ಸರಣಿಯಲ್ಲಿ ಕೆಎಲ್ ರಾಹುಲ್ ಅತ್ಯುತ್ತಮ ಪ್ರದರ್ಶನವನ್ನು ತೋರಿದ್ದಾರೆ. ಆ ಮೂಲಕ ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಭಾರಿಸಿದ ಭಾರತದ ಎರಡನೇ ಬ್ಯಾಟ್ಸ್‌ಮನ್ ಆಗಿದ್ದಾರೆ. ಕೆಎಲ್ ರಾಹುಲ್ ನಾಲ್ಕು ಶತಕಗಳನ್ನು ಬಾರಿಸಿದ್ದರೆ, ಮಾಜಿ ನಾಯಕ ಕೆಎಲ್ ರಾಹುಲ್ ಆರು ಶತಕಗಳನ್ನು ಇಂಗ್ಲೆಂಡ್‌ನಲ್ಲಿ ಬಾರಿಸಿ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.
"ಅವರು ಬ್ಲೇಡ್‌ನ ಮುಖವನ್ನು ಮುಚ್ಚುವ ಅಗತ್ಯವಿಲ್ಲ ಮತ್ತು ಈ ಹಿಂದೆ ಇದೇ ರೀತಿ ಆಡಿ ತೊಂದರೆಗೆ ಸಿಲುಕಿದ್ದರು. ಅವರು ಲೆಗ್ ಬಿಫೋರ್‌ನಲ್ಲಿ ಔಟ್ ಆಗುತ್ತಿದ್ದರು, ಬೌಲಿಂಗ್‌ನಲ್ಲಿ ಔಟ್ ಆಗುತ್ತಿದ್ದರು, ತುಂಬಾ ದೂರ ಹೋಗುತ್ತಿದ್ದರು ಮತ್ತು ನಂತರ ಲೆಗ್ ಬಿಫೋರ್‌ನಲ್ಲಿಯೂ ಔಟ್ ಆಗುತ್ತಿದ್ದರು. ಅವರು ತಾಂತ್ರಿಕವಾಗಿ ಉತ್ತಮರು, ಅವರು ಎಲ್ಲರಂತೆ ಉತ್ತಮರಾಗಿದ್ದಾರೆ. ವಿಶೇಷವಾಗಿ, ಸರಣಿಯಲ್ಲಿ ಅದು ಹೆಚ್ಚು ನಡೆಯಲಿಲ್ಲ," ಎಂದು ರವಿ ಶಾಸ್ತ್ರಿ ತಿಳಿಸಿದ್ದಾರೆ.