ENG vs IND: ಮೂರನೇ ಪಂದ್ಯಕ್ಕೆ ಬುಮ್ರಾ ಲಭ್ಯ; ಖಚಿತಪಡಿಸಿದ ನಾಯಕ ಗಿಲ್
IND vs ENG 3rd Test: ದ್ವಿತೀಯ ಟೆಸ್ಟ್ ಮುಕ್ತಾಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಿಲ್, "ಬುಮ್ರಾ ಅವರ ಕೆಲಸದ ಹೊರೆಯನ್ನು ನಿಭಾಯಿಸಲು ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಎರಡನೇ ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿತ್ತು. 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅವರು ಕೇವಲ ಮೂರು ಪಂದ್ಯಗಳು ಮಾತ್ರ ಆಡಲಿದ್ದಾರೆ. ಮೂರನೇ ಟೆಸ್ಟ್‌ನಲ್ಲಿ ಅವರ ಸೇವೆ ತಂಡಕ್ಕೆ ಲಭ್ಯವಿರಲಿದೆ. ಅವರ ಆಗಮನದಿಂದ ತಂಡ ಮತ್ತಷ್ಟು ಬಲಶಾಲಿಗೊಳ್ಳಲಿದೆ" ಎಂದು ಗಿಲ್ ಹೇಳಿದರು.


ಲಂಡನ್: ಕೆಲಸದ ಒತ್ತಡವನ್ನು ನಿಭಾಯಿಸುವ ಸಲುವಾಗಿ ಬರ್ಮಿಂಗ್‌ಹ್ಯಾಮ್‌ನ ದ್ವಿತೀಯ ಟೆಸ್ಟ್(ENG vs IND) ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದ ಭಾರತದ ತಾರಾ ವೇಗಿಜಸ್‌ಪ್ರೀತ್ ಬುಮ್ರಾ(Jasprit Bumrah) ಅವರ ಕಮ್‌ಬ್ಯಾಕ್ ಬಗ್ಗೆ ನಾಯಕ ಶುಭಮನ್ ಗಿಲ್(Shubman Gill) ಮಹತ್ವದ ಮಾಹಿತಿ ನೀಡಿದ್ದಾರೆ. ಜುಲೈ 10 ರಿಂದ ಲಾರ್ಡ್ಸ್(Lord’s) ಮೈದಾನದಲ್ಲಿ ಆರಂಭವಾಗುವ ಮೂರನೇ ಟೆಸ್ಟ್(IND vs ENG 3rd Test) ಪಂದ್ಯದಲ್ಲಿ ಬುಮ್ರಾ ಕಣಕ್ಕಿಳಿಯಲಿದ್ದಾರೆ ಎಂದು ಗಿಲ್ ಖಚಿತಪಡಿಸಿದ್ದಾರೆ.
ದ್ವಿತೀಯ ಟೆಸ್ಟ್ ಮುಕ್ತಾಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಿಲ್, "ಬುಮ್ರಾ ಅವರ ಕೆಲಸದ ಹೊರೆಯನ್ನು ನಿಭಾಯಿಸಲು ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಎರಡನೇ ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿತ್ತು. 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅವರು ಕೇವಲ ಮೂರು ಪಂದ್ಯಗಳು ಮಾತ್ರ ಆಡಲಿದ್ದಾರೆ. ಮೂರನೇ ಟೆಸ್ಟ್‌ನಲ್ಲಿ ಅವರ ಸೇವೆ ತಂಡಕ್ಕೆ ಲಭ್ಯವಿರಲಿದೆ. ಅವರ ಆಗಮನದಿಂದ ತಂಡ ಮತ್ತಷ್ಟು ಬಲಶಾಲಿಗೊಳ್ಳಲಿದೆ" ಎಂದು ಗಿಲ್ ಹೇಳಿದರು.
ಬುಮ್ರಾ ಆಗಮನದಿಂದ ತಂಡದಲ್ಲಿ ಅವರಿಗಾಗಿ ಯಾರು ಜಾಗ ಬಿಟ್ಟುಕೊಡಲಿದ್ದಾರೆ ಎಂಬ ಕುತೂಹಲ ಹೆಚ್ಚಿದೆ. ಸದ್ಯದ ಪ್ರದರ್ಶನ ನೋಡುವಾಗ ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರನ್ನು ಕೈಬಿಡುವ ಸಾಧ್ಯತೆ ಅಧಿಕವಾಗಿದೆ. ಏಕೆಂದರೆ ಅವರು ಮೊದಲ ಎರಡು ಪಂದ್ಯಗಳಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರಿಲ್ಲ. ಮೊಹಮ್ಮದ್ ಸಿರಾಜ್ ದ್ವಿತೀಯ ಟೆಸ್ಟ್‌ನಲ್ಲಿ 7 ವಿಕೆಟ್ ಕಿತ್ತರೆ, ಬುಮ್ರಾ ಬದಲಿಗೆ ಆಡಲಿಳಿದ ಆಕಾಶ್ ದೀಪ್ 10 ವಿಕೆಟ್ ಕಡೆವಿ ತಮ್ಮ ಆಯ್ನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಹೀಗಾಗಿ ಉಭಯ ಆಟಗಾರರನ್ನು ಕೈಬಿಡುವುದು ಕಷ್ಟಸಾಧ್ಯ.
ಇದನ್ನೂ ಓದಿ IND vs ENG: 10 ವಿಕೆಟ್ ಕಿತ್ತು ಇಂಗ್ಲೆಂಡ್‌ನಲ್ಲಿ ದಾಖಲೆ ಬರೆದ ಆಕಾಶ್‌ದೀಪ್
ಕಳೆದ 58 ವರ್ಷದಿಂದ ಎಡ್ಜ್‌ಬಾಸ್ಟ್ ಮೈದಾನದಲ್ಲಿ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ಮುಖಾಮುಖಿಯಾಗುತ್ತಿದೆ. ಆದರೆ ಇದುವರೆಗೂ ಭಾರತಕ್ಕೆ ಗೆಲುವು ಸಾಧ್ಯವಾಗಿರಲಿಲ್ಲ. 2025ರ ಪಂದ್ಯ ಸೇರಿದಂತೆ ಎಡ್ಜ್‌ಬಾಸ್ಟ್‌ನಲ್ಲಿ ಭಾರತ 19 ಪಂದ್ಯ ಆಡಿದೆ. 19ನೇ ಪಂದ್ಯದಲ್ಲಿ ಗೆಲುವು ಕಂಡಿತು.