IND vs ENG: 10 ವಿಕೆಟ್ ಕಿತ್ತು ಇಂಗ್ಲೆಂಡ್‌ನಲ್ಲಿ ದಾಖಲೆ ಬರೆದ ಆಕಾಶ್‌ದೀಪ್
ಅಂತಿಮ ದಿನವಾದ ಭಾನುವಾರ ಉಭಯ ತಂಡಗಳಿಗೂ ಮಹತ್ವದ್ದಾಗಿತ್ತು. ಶನಿವಾರ ರಾತ್ರಿ ಮತ್ತು ಭಾನುವಾರ ಬೆಳಿಗ್ಗೆ ಸುರಿದ ಮಳೆಯಿಂದಾಗಿ ಆಟಕ್ಕೆ ವ್ಯತ್ಯಯವಾಗುವ ಆತಂಕವಿತ್ತು. ಸುಮಾರು ಒಂದು ಗಂಟೆಯ ಬಳಿಕ ಮಳೆ ಬಿಡುವು ನೀಡಿತು. ಇದೇ ವೇಳೆ ಕ್ರೀಡಾಂಗಣದಲ್ಲಿ ಆಕಾಶ್ ದೀಪ್ ಪ್ರಜ್ವಲಿಸಿದರು.

ಬರ್ಮಿಂಗ್‌ಹ್ಯಾಮ್: 58 ವರ್ಷಗಳ ಬಳಿಕ ಎಜ್‌ಬಾಸ್ಟನ್(Edgbaston) ಕ್ರೀಡಾಂಗಣದಲ್ಲಿ ಗೆಲುವಿನ ಖಾತೆ ತೆರೆದ ಭಾರತದ ಈ ಜಯದಲ್ಲಿ ವೇಗಿ ಆಕಾಶ್‌ದೀಪ್(Akash Deep) ಪ್ರಮುಖ ಪಾತ್ರವಹಿಸಿದರು. ಜತೆಗೆ ಚೇತನ್ ಶರ್ಮಾ ಅವರ ದಾಖಲೆಯೊಂದನ್ನು ಹಿಂದಿಕ್ಕಿದರು. ಕಿಕ್ಕಿರಿದು ಸೇರಿದ್ದ ಅಭಿಮಾನಿಗಳ ಸಮ್ಮುಖದಲ್ಲಿ ಆಕಾಶ್ ದೀಪ್ (21.1–2–99–6) ಅಮೋಘ ಬೌಲಿಂಗ್ ರಂಗೇರಿತು.
ಅಂತಿಮ ದಿನವಾದ ಭಾನುವಾರ ಉಭಯ ತಂಡಗಳಿಗೂ ಮಹತ್ವದ್ದಾಗಿತ್ತು. ಶನಿವಾರ ರಾತ್ರಿ ಮತ್ತು ಭಾನುವಾರ ಬೆಳಿಗ್ಗೆ ಸುರಿದ ಮಳೆಯಿಂದಾಗಿ ಆಟಕ್ಕೆ ವ್ಯತ್ಯಯವಾಗುವ ಆತಂಕವಿತ್ತು. ಸುಮಾರು ಒಂದು ಗಂಟೆಯ ಬಳಿಕ ಮಳೆ ಬಿಡುವು ನೀಡಿತು. ಇದೇ ವೇಳೆ ಕ್ರೀಡಾಂಗಣದಲ್ಲಿ ಆಕಾಶ್ ದೀಪ್ ಪ್ರಜ್ವಲಿಸಿದರು.
ಜಸ್‌ಪ್ರೀತ್ ಬುಮ್ರಾ ಅವರ ಬದಲಿಗೆ ಆಕಾಶ್‌ದೀಪ್ ಅವರನ್ನು ಕಣಕ್ಕಿಳಿಸಲಾಗಿತ್ತು. ಬುಮ್ರಾ ಅವರು ಈ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದರು. ಆಕಾಶ್ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಮೊದಲ ಇನಿಂಗ್ಸ್‌ನಲ್ಲಿ ನಾಲ್ಕು ಮತ್ತು ಎರಡನೇಯದ್ದರಲ್ಲಿ ಆರು ವಿಕೆಟ್ ಕಿತ್ತು ಒಟ್ಟು 10 ವಿಕೆಟ್ ಪಡೆದರು. ಇದೇ ವೇಳೆ ಇಂಗ್ಲೆಂಡ್‌ನಲ್ಲಿ ಶ್ರೇಷ್ಠ ಸಾಧನೆ ಮಾಡಿದ ಭಾರತೀಯ ಬೌಲರ್ ಎನಿಸಿಕೊಂಡರು.
ಇದನ್ನೂ ಓದಿ IND vs ENG: ಎಡ್ಜ್‌ಬಾಸ್ಟನ್‌ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಭಾರತ
1986ರಲ್ಲಿ ಚೇತನ್ ಶರ್ಮಾ ಬರ್ಮಿಂಗ್‌ಹ್ಯಾಮ್ 188ಕ್ಕೆ 10 ವಿಕೆಟ್ ಕಿತ್ತಿದ್ದರು. ಇದೀಗ ಆಕಾಶ್‌ದೀಪ್ 187ಕ್ಕೆ 10 ವಿಕೆಟ್ ಕಿತ್ತು ಮೊದಲ ಸ್ಥಾನಕ್ಕೇರಿದರು. ಅಮೋಘ ಬೌಲಿಂಗ್ ಸಾಧನೆ ತೋರಿದ ಬಳಿಕ ಈ ಪ್ರದರ್ಶನವನ್ನು ಆಕಾಶ್‌ದೀಪ್ ಅವರು ಕ್ಯಾನ್ಸರ್ ಪೀಡಿತ ಸಹೋದರಿಗೆ ಅರ್ಪಿಸಿದರು.