ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಫಿಫಾ ವಿಶ್ವಕಪ್ 2026: ತಂಡವಾರು ಗುಂಪುಗಳ ಸಂಪೂರ್ಣ ಪಟ್ಟಿ ಇಲ್ಲಿದೆ

FIFA World Cup 2026: ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವು ಗ್ರೂಪ್ ಜೆಗೆ ಆಯ್ಕೆಯಾಗಿದ್ದು, ಅಲ್ಲಿ ಅದು ಅಲ್ಜೀರಿಯಾ, ಆಸ್ಟ್ರಿಯಾ ಮತ್ತು ಜೋರ್ಡಾನ್ ವಿರುದ್ಧ ಸೆಣಸಲಿದೆ. ಕಳೆದ ಆವೃತ್ತಿಯ ರನ್ನರ್-ಅಪ್ ಫ್ರಾನ್ಸ್, ಸೆನೆಗಲ್, ನಾರ್ವೆ ಮತ್ತು ಫಿಫಾ ಪ್ಲೇಆಫ್ 2 ವಿಜೇತ ತಂಡಗಳೊಂದಿಗೆ ಡ್ರಾದಲ್ಲಿ ಸ್ಥಾನ ಪಡೆದಿದೆ.

FIFA President Gianni Infantino

ನ್ಯೂಯಾರ್ಕ್, ಡಿ.6: ಮುಂದಿನ ವರ್ಷ(2026) ನಡೆಯುವ ಪ್ರತಿಷ್ಠಿತ ಫಿಫಾ ವಿಶ್ವಕಪ್ ಟೂರ್ನಿಗೆ ತಂಡಗಳ ಡ್ರಾ ಪ್ರಕಟಿಸಲಾಗಿದೆ. ಇದೇ ಮೊದಲ ಬಾರಿಗೆ ಜಗತ್ತಿನ 48 ಬಲಿಷ್ಠ ಫುಟ್ಬಾಲ್ ತಂಡಗಳು ಈ ಪ್ರತಿಷ್ಠಿತ ವಿಶ್ವಕಪ್‌ಗಾಗಿ ಕಾದಾಡಲಿವೆ. ಇದರಲ್ಲಿ 42 ತಂಡಗಳು ಅರ್ಹತೆ ಪಡೆದಿದೆ. ಪಂದ್ಯಾವಳಿ ಜೂನ್‌-ಜುಲೈನಲ್ಲಿ ಅಮೆರಿಕ, ಮೆಕಸಿಕೊ ಹಾಗೂ ಕೆನಡಾ ದೇಶಗಳ ಜಂಟಿ ಆತಿಥ್ಯದಲ್ಲಿ ನಡೆಯಲಿದೆ.

ಆರು ತಂಡಗಳು ಇನ್ನೂ ಖಚಿತವಾಗಿಲ್ಲ, ಯುರೋಪಿಯನ್ ಮತ್ತು ಇಂಟರ್-ಕಾಂಟಿನೆಂಟಲ್ ಪ್ಲೇಆಫ್‌ಗಳ ನಂತರ ಇದನ್ನು ದೃಢೀಕರಿಸಲಾಗುತ್ತದೆ. 48 ತಂಡಗಳನ್ನು ತಲಾ 4 ರಂತೆ 12 ಗುಂಪುಗಳಾಗಿ ವಿಂಗಡಿಸಲಾಗಿದೆ. ಆತಿಥೇಯ ರಾಷ್ಟ್ರಗಳಾದ ಮೆಕ್ಸಿಕೊ, ಕೆನಡಾ, ಅಮೆರಿಕ ತಂಡಗಳು ಕ್ರಮವಾಗಿ ಎ, ಬಿ,ಡಿ ಗುಂಪಿನಲ್ಲಿ ಸ್ಥಾನ ಪಡೆದಿದೆ.

ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವು ಗ್ರೂಪ್ ಜೆಗೆ ಆಯ್ಕೆಯಾಗಿದ್ದು, ಅಲ್ಲಿ ಅದು ಅಲ್ಜೀರಿಯಾ, ಆಸ್ಟ್ರಿಯಾ ಮತ್ತು ಜೋರ್ಡಾನ್ ವಿರುದ್ಧ ಸೆಣಸಲಿದೆ. ಕಳೆದ ಆವೃತ್ತಿಯ ರನ್ನರ್-ಅಪ್ ಫ್ರಾನ್ಸ್, ಸೆನೆಗಲ್, ನಾರ್ವೆ ಮತ್ತು ಫಿಫಾ ಪ್ಲೇಆಫ್ 2 ವಿಜೇತ ತಂಡಗಳೊಂದಿಗೆ ಡ್ರಾದಲ್ಲಿ ಸ್ಥಾನ ಪಡೆದಿದೆ.

ಇದನ್ನೂ ಓದಿ 2026 FIFA World Cup: 2026ರ ಫಿಫಾ ವಿಶ್ವಕಪ್ ಫೈನಲ್ಸ್ ಡ್ರಾದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಭಾಗಿ

ಸಹ-ಆತಿಥೇಯ ಮೆಕ್ಸಿಕೋ ಜೂನ್ 11 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯಾವಳಿಯ ಮೊದಲ ಪಂದ್ಯವನ್ನು ಆಡಲಿದೆ. ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿಯನ್ನು ಶನಿವಾರ ರಾತ್ರಿ ಬಿಡುಗಡೆ ಮಾಡಲಾಗುತ್ತದೆ.

2026 ರ ಫಿಫಾ ವಿಶ್ವಕಪ್ ಗುಂಪುಗಳು

ಗುಂಪು ಎ: ಮೆಕ್ಸಿಕೊ, ದಕ್ಷಿಣ ಆಫ್ರಿಕಾ, ಕೊರಿಯಾ ಗಣರಾಜ್ಯ, ಯುರೋಪಿಯನ್ ಪ್ಲೇಆಫ್ ಡಿ ವಿಜೇತರು.

ಗುಂಪು ಬಿ: ಕೆನಡಾ, ಯುರೋಪಿಯನ್ ಪ್ಲೇಆಫ್ ಎ ವಿಜೇತರು, ಕತಾರ್, ಸ್ವಿಟ್ಜರ್ಲೆಂಡ್

ಗುಂಪು ಸಿ: ಬ್ರೆಜಿಲ್, ಮೊರಾಕೊ, ಹೈಟಿ, ಸ್ಕಾಟ್ಲೆಂಡ್

ಗುಂಪು ಡಿ: ಯುಎಸ್ಎ, ಪರಾಗ್ವೆ, ಆಸ್ಟ್ರೇಲಿಯಾ, ಯುರೋಪಿಯನ್ ಪ್ಲೇಆಫ್ ಸಿ ವಿಜೇತರು

ಗುಂಪು ಇ: ಜರ್ಮನಿ, ಕುರಾಕಾವೊ, ಐವರಿ ಕೋಸ್ಟ್, ಈಕ್ವೆಡಾರ್

ಗುಂಪು ಎಫ್: ನೆದರ್ಲ್ಯಾಂಡ್ಸ್, ಜಪಾನ್, ಯುರೋಪಿಯನ್ ಪ್ಲೇಆಫ್ ಬಿ ವಿಜೇತರು, ಟುನೀಶಿಯಾ

ಗುಂಪು ಜಿ: ಬೆಲ್ಜಿಯಂ, ಈಜಿಪ್ಟ್, ಇರಾನ್, ನ್ಯೂಜಿಲೆಂಡ್

ಗುಂಪು ಎಚ್: ಸ್ಪೇನ್, ಕೇಪ್ ವರ್ಡೆ, ಸೌದಿ ಅರೇಬಿಯಾ, ಉರುಗ್ವೆ

ಗುಂಪು ಐ: ಫ್ರಾನ್ಸ್, ಸೆನೆಗಲ್, ಫಿಫಾ ಪ್ಲೇಆಫ್ 2 ವಿಜೇತರು, ನಾರ್ವೆ

ಗುಂಪು ಜೆ: ಅರ್ಜೆಂಟೀನಾ, ಅಲ್ಜೀರಿಯಾ, ಆಸ್ಟ್ರಿಯಾ, ಜೋರ್ಡಾನ್

ಗುಂಪು ಕೆ: ಪೋರ್ಚುಗಲ್, ಫಿಫಾ ಪ್ಲೇಆಫ್ 1 ವಿಜೇತರು, ಉಜ್ಬೇಕಿಸ್ತಾನ್, ಕೊಲಂಬಿಯಾ

ಗುಂಪು ಎಲ್: ಇಂಗ್ಲೆಂಡ್, ಕ್ರೊಯೇಷಿಯಾ, ಘಾನಾ, ಪನಾಮ