ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

2026 FIFA World Cup: 2026ರ ಫಿಫಾ ವಿಶ್ವಕಪ್ ಫೈನಲ್ಸ್ ಡ್ರಾದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಭಾಗಿ

US President Trump: ಡೆಮಾಕ್ರಟಿಕ್ ಆಡಳಿತದ ಕೆಲವು ಪ್ರದೇಶಗಳಲ್ಲಿ ಅಪರಾಧ ಮತ್ತು ಅಕ್ರಮ ವಲಸೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿರುವ ಮಧ್ಯೆ, ಅಮೆರಿಕದ ಕೆಲವು ಆತಿಥೇಯ ನಗರಗಳಿಂದ ಕ್ರೀಡಾಕೂಟಗಳನ್ನು ಸ್ಥಳಾಂತರಿಸುವ ಸಾಧ್ಯತೆಯನ್ನು ಟ್ರಂಪ್ ಎತ್ತಿದ್ದಾರೆ.

ಫಿಫಾ ವಿಶ್ವಕಪ್ ಫೈನಲ್ಸ್ ಡ್ರಾದಲ್ಲಿ ಟ್ರಂಪ್ ಭಾಗಿ

US President Trump -

Abhilash BC
Abhilash BC Dec 2, 2025 4:43 PM

ವಾಷಿಂಗ್ಟನ್‌, ಡಿ.2: ಈ ವಾರದ ಕೊನೆಯಲ್ಲಿ ವಾಷಿಂಗ್ಟನ್‌ನಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್(2026 FIFA World Cup) ಫೈನಲ್‌ಗಾಗಿ ನಡೆಯುವ ಡ್ರಾದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಭಾಗವಹಿಸಲಿದ್ದಾರೆ ಎಂದು ಶ್ವೇತಭವನ(The White House) ಮಂಗಳವಾರ ದೃಢಪಡಿಸಿದೆ. ಕೆನಡಾ ಮತ್ತು ಮೆಕ್ಸಿಕೋ ಜತೆಗೆ ಅಮೆರಿಕವು 2026 ರ ಪಂದ್ಯಾವಳಿಯನ್ನು ಜಂಟಿಯಾಗಿ ಆಯೋಜಿಸಲಿದೆ.

"ಶುಕ್ರವಾರ, ಅಧ್ಯಕ್ಷ ಟ್ರಂಪ್ ಕೆನಡಿ ಸೆಂಟರ್‌ನಲ್ಲಿ ನಡೆಯುವ ಫಿಫಾ ವಿಶ್ವಕಪ್ ಫೈನಲ್ ಡ್ರಾದಲ್ಲಿ ಭಾಗವಹಿಸಲಿದ್ದಾರೆ" ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೀವಿಟ್ ಸುದ್ದಿಗಾರರಿಗೆ ತಿಳಿಸಿದರು. ಟ್ರಂಪ್ ತಮ್ಮ ಎರಡನೇ ಅಧ್ಯಕ್ಷತೆ ಮತ್ತು ಮುಂದಿನ ವರ್ಷ ನಡೆಯಲಿರುವ ಅಮೆರಿಕದ 250ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ವಿಶ್ವಕಪ್ ಅನ್ನು ಕೇಂದ್ರಬಿಂದುವನ್ನಾಗಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ Cristiano Ronaldo: ದಾಖಲೆಯ ಆರನೇ ವಿಶ್ವಕಪ್ ಆಡಲು ರೊನಾಲ್ಡೊ ಸಜ್ಜು

ಡೆಮಾಕ್ರಟಿಕ್ ಆಡಳಿತದ ಕೆಲವು ಪ್ರದೇಶಗಳಲ್ಲಿ ಅಪರಾಧ ಮತ್ತು ಅಕ್ರಮ ವಲಸೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿರುವ ಮಧ್ಯೆ, ಅಮೆರಿಕದ ಕೆಲವು ಆತಿಥೇಯ ನಗರಗಳಿಂದ ಕ್ರೀಡಾಕೂಟಗಳನ್ನು ಸ್ಥಳಾಂತರಿಸುವ ಸಾಧ್ಯತೆಯನ್ನು ಟ್ರಂಪ್ ಎತ್ತಿದ್ದಾರೆ.

2026ರ ಫಿಫಾ ವಿಶ್ವಕಪ್‌ನಲ್ಲಿ ದಾಖಲೆಯ 48 ತಂಡಗಳು ಭಾಗವಹಿಸಲಿದ್ದು, ಯುನೈಟೆಡ್ ಸ್ಟೇಟ್ಸ್, ಕೆನಡಾ ಮತ್ತು ಮೆಕ್ಸಿಕೊ ಜಂಟಿ ಆತಿಥ್ಯವಹಿಸಲಿದೆ. 43 ತಂಡಗಳು ಕಾಂಟಿನೆಂಟಲ್ ಪ್ಲೇ-ಆಫ್‌ಗಳ ಮೂಲಕ ನೇರವಾಗಿ ಅರ್ಹತೆ ಪಡೆಯಲಿದ್ದು, ಜತೆಗೆ ಆತಿಥೇಯ ತಂಡಗಳು ಸಹ ನೇರವಾಗಿ ಅರ್ಹತೆ ಪಡೆಯುತ್ತವೆ.

ವಿಶ್ವಕಪ್‌ಗೆ ಅರ್ಹತೆ ಪಡೆದ ತಂಡಗಳು

ಅಮೆರಿಕ, ಮೆಕ್ಸಿಕೊ, ಕೆನಡಾ (ಆತಿಥೇಯ ರಾಷ್ಟ್ರವಾಗಿ ನೇರ ಅರ್ಹತೆ).

ಆಫ್ರಿಕಾ ಖಂಡ: ಅಲ್ಜೀರಿಯಾ, ಕೇಪ್ ವರ್ಡೆ, ಈಜಿಪ್ಟ್, ಘಾನಾ, ಮೊರಾಕೊ, ಟುನೀಶಿಯಾ.

ಏಷ್ಯಾ ಖಂಡ: ಆಸ್ಟ್ರೇಲಿಯಾ, ಇರಾನ್, ಜಪಾನ್, ಜೋರ್ಡಾನ್, ದಕ್ಷಿಣ ಕೊರಿಯಾ, ಉಜ್ಬೇಕಿಸ್ತಾನ್.

ಓಷಿಯಾನಿಯಾ: ನ್ಯೂಜಿಲೆಂಡ್.

ದಕ್ಷಿಣ ಅಮೆರಿಕಾ: ಅರ್ಜೆಂಟೀನಾ, ಬ್ರೆಜಿಲ್, ಕೊಲಂಬಿಯಾ, ಈಕ್ವೆಡಾರ್, ಪರಾಗ್ವೆ, ಉರುಗ್ವೆ.