Stuart Macgill: ಮಾದಕ ವಸ್ತು ಪೂರೈಕೆ ಆರೋಪ ; ಆಸೀಸ್ ಮಾಜಿ ಆಟಗಾರ ತಪ್ಪಿತಸ್ಥ
ಲೆಗ್ ಸ್ಪಿನ್ ದಂತಕತೆ ಶೇನ್ ವಾರ್ನ್ ಅವರ ಕಾಲಗಟ್ಟದಲ್ಲಿ ಆಸೀಸ್ ತಂಡದ ಪರ ಆಡಿದ್ದ ಮ್ಯಾಕ್ ಒಟ್ಟು 44 ಟೆಸ್ಟ್ ಪಂದ್ಯಗಳನ್ನು ಆಡಿ 208 ವಿಕೆಟ್‌ಗಳನ್ನು ಕಬಳಿಸಿದ್ದರು. ಮೂರು ಏಕದಿನ ಪಂದ್ಯಗಳಿಂದ 6 ವಿಕೆಟ್ ಮತ್ತು ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ193, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 774 ವಿಕೆಟ್ ಕಿತ್ತ ಸಾಧನೆ ಇವರದ್ದಾಗಿದೆ.

ಮೆಲ್ಬರ್ನ್: ಆಸ್ಟ್ರೇಲಿಯದ ಮಾಜಿ ಸ್ಪಿನ್ನರ್ ಸ್ಟುವರ್ಟ್ ಮ್ಯಾಕ್ ಗಿಲ್(Stuart Macgill) ಅವರನ್ನು ಕೊಕೇನ್ ವ್ಯವಹಾರದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ತಪ್ಪಿತಸ್ಥರೆಂದು ಸಿಡ್ನಿ ನ್ಯಾಯಾಲಯ ಘೋಷಿಸಿದೆ. ಆದರೆ 2021ರ ಎಪ್ರಿಲ್ ನಲ್ಲಿ ನಡೆದಿದ್ದ ದೊಡ್ಡ ಪ್ರಮಾಣದ ವಾಣಿಜ್ಯ ಮಾದಕವಸ್ತು ವ್ಯವಹಾರದಲ್ಲಿ ಭಾಗಿಯಾಗಿರುವುದರಿಂದ ಅವರನ್ನು ದೋಷಮುಕ್ತಗೊಳಿಸಿದೆ.
54 ವರ್ಷದ ಮ್ಯಾಕ್ ಗಿಲ್ ಅವರ ನಿಯಮಿತ ಮಾದಕವಸ್ತು ಪೂರೈಕೆದಾರ ಹಾಗೂ ಅವರ ಸಹೋದರ ಮಾವ ಮರಿನೋ ಸೊಟಿರೊ ಪೌಲೋಸ್ ಒಂದು ಕೆಜಿ ಕೊಕೇನ್‌ಗೆ 330,000 ಆಸ್ಟ್ರೇಲಿಯನ್ ಡಾಲರ್ ಪಡೆದಿದ್ದರು ಎಂದು ಪುರಾವೆಗಳಿಂದ ಸಾಬೀತಾಗಿದೆ.
ಒಂದು ಕೆಜಿ ಕೊಕೇನ್ ವ್ಯವಹಾರದಲ್ಲಿ ಮ್ಯಾಕ್ ಗಿಲ್ ಭಾಗಿಯಾಗಿದ್ದಾರೆಂಬ ಕ್ರೌನ್ಸ್ ಆರೋಪವನ್ನು ನಿರಾಕರಿಸಿದ ನ್ಯಾಯಾಧೀಶರು, ಡ್ರಗ್ ಸರಬರಾಜಿನಲ್ಲಿ ಭಾಗಿಯಾದ ಆರೋಪಕ್ಕೆ ಸಂಬಂಧಿಸಿ ಮ್ಯಾಕ್ ಗಿಲ್ ತಪ್ಪಿತಸ್ಥ ಎಂದು ತೀರ್ಪು ನೀಡಿದ್ದು, ಶಿಕ್ಷೆಯ ಕುರಿತ ಪ್ರಕ್ರಿಯೆಯನ್ನು 8 ವಾರಗಳ ಕಾಲ ಮುಂದೂಡಿದೆ.
ಲೆಗ್ ಸ್ಪಿನ್ ದಂತಕತೆ ಶೇನ್ ವಾರ್ನ್ ಅವರ ಕಾಲಗಟ್ಟದಲ್ಲಿ ಆಸೀಸ್ ತಂಡದ ಪರ ಆಡಿದ್ದ ಮ್ಯಾಕ್ ಒಟ್ಟು 44 ಟೆಸ್ಟ್ ಪಂದ್ಯಗಳನ್ನು ಆಡಿ 208 ವಿಕೆಟ್‌ಗಳನ್ನು ಕಬಳಿಸಿದ್ದರು. ಮೂರು ಏಕದಿನ ಪಂದ್ಯಗಳಿಂದ 6 ವಿಕೆಟ್ ಮತ್ತು ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ193, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 774 ವಿಕೆಟ್ ಕಿತ್ತ ಸಾಧನೆ ಇವರದ್ದಾಗಿದೆ.
ಇದನ್ನೂ ಓದಿ ಚಾಂಪಿಯನ್ಸ್ ಟ್ರೋಫಿ ವೈಫಲ್ಯದ ಬಳಿಕ ಪಾಕಿಸ್ತಾನ ಕ್ರಿಕೆಟಿಗರಿಗೆ ಮತ್ತೊಂದು ಶಾಕ್!
ಪಾಕ್ ಆಟಗಾರರ ವೇತನ ಕಡಿತ
ಆರ್ಥಿಕ ಸಂಕಷ್ಟದ ಮಧ್ಯೆಯೂ ಚಾಂಪಿಯನ್ಸ್ ಟ್ರೋಫಿಯನ್ನು ನಡೆಸಿ ಕೈ ಸುಟ್ಟುಕೊಂಡ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದೀಗ, ಪಾಕ್‌ನ ದೇಸಿ ಕ್ರಿಕೆಟಿಗರ ವೇತನವನ್ನೇ ಕಡಿತಗೊಳಿಸಲು ಮುಂದಾಗಿದೆ. ಮುಂಬರುವ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಪಾಲ್ಗೊಳ್ಳುವ ಆಟಗಾರರು ಪ್ರತಿ ಪಂದ್ಯಕ್ಕೆ ಒಂದು ಲಕ್ಷ ರೂ. ಬದಲು ಕೇವಲ 10 ಸಾವಿರ ರೂ. ಪಡೆಯಲಿದ್ದಾರೆ. ಮೀಸಲು ಆಟಗಾರರಿಗೆ ಕೇವಲ 5 ಸಾವಿರ ರೂ. ಮಾತ್ರ ನೀಡಲಾಗುತ್ತದೆ ಎಂದು ವರದಿಯಾಗಿದೆ.