ನವದೆಹಲಿ: ಭಾರತ ಹಾಗೂ ವೆಸ್ಟ್‌ಇಂಡೀಸ್ ನಡುವಿನ 2ನೇ ಟೆಸ್ಟ್(IND vs WI 2nd Test)ನ ನಾಲ್ಕನೇ ದಿನದಾಟ ಸೋಮವಾರ, ಪಂದ್ಯ ವೀಕ್ಷಿಸುತ್ತಿದ್ದ ಯುವತಿಯೊಬ್ಬಳು ಯುವಕನ ಕೆನ್ನೆಗೆ ಬಾರಿಸಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್(viral video) ಆಗಿದೆ. ವೆಸ್ಟ್ ಇಂಡೀಸ್ ತಂಡದ ಬ್ಯಾಟಿಂಗ್ ವೇಳೆ ಈ ಘಟನೆ ನಡೆದಿದೆ.
ಪಂದ್ಯ ವೀಕ್ಷಿಸುತ್ತಿದ್ದ ಯುವಕ ಮತ್ತು ಯುವತಿ ನಡುವೆ ಯಾವುದೋ ವಿಚಾರಕ್ಕೆ ಮಾತುಕತೆ ಉಂಟಾಗಿದ್ದು, ವೇಳೆ ಯುವತಿ ಎರಡು ಬಾರಿ ಕಪಾಳಮೋಕ್ಷ ಮಾಡಿದ್ದಾಳೆ. ಮೇಲ್ನೋಟಕ್ಕೆ ಇವರಿಬ್ಬರು ಪ್ರೇಮಿಗಳು ಎಂಬಂತೆ ಕಾಣುತ್ತದೆ. ಆದರೆ, ಯಾಕಾಗಿ ಜಗಳ ಮಾಡಿಕೊಂಡರು ಎಂಬುದು ಅಸ್ಪಷ್ಟ. ಇಷ್ಟಕ್ಕೆ ಸುಮ್ಮನಾಗದ ಯುವತಿ, ಆತನ ಕುತ್ತಿಗೆ ಹಿಡಿದು ಯಾರನ್ನೋ ತೋರಿಸಿ, ಏನೋ ಎಚ್ಚರಿಕೆ ನೀಡಿದಂತಿದೆ. ಸದ್ಯ ಈ ವಿಡಿಯೊ ನೆಟ್ಟಿಗರ ಗಮನ ಸೆಳೆದಿದೆ.
121 ರನ್ ಗುರಿ ಪಡೆದ ಭಾರತ, 2ನೇ ಓವರಲ್ಲೇ ಜೈಸ್ವಾಲ್ (8) ವಿಕೆಟ್ ಕಳೆದುಕೊಂಡಿತು. ಬಳಿಕ ರಾಹುಲ್ (25*) ಹಾಗೂ ಸಾಯಿ ಸುದರ್ಶನ್ (30*) ದಿನದಾಟದಲ್ಲಿ ಮತ್ತೊಂದು ವಿಕೆಟ್ ಬೀಳದಂತೆ ಎಚ್ಚರ ವಹಿಸಿದರು. ಮಂಗಳವಾರ ಮೊದಲ ಅವಧಿಯಲ್ಲೇ ಬಾಕಿ ಇರುವ 58 ರನ್ ಗಳಿಸಿ, ಸರಣಿಯನ್ನು 2-0ಯಲ್ಲಿ ವಶಪಡಿಸಿಕೊಳ್ಳಲು ಭಾರತ ಎದುರು ನೋಡುತ್ತಿದೆ.
ಇದನ್ನೂ ಓದಿ IND vs WI: ʻನಿತೀಶ್ ರೆಡ್ಡಿಗೆ ಏಕೆ ಬೌಲಿಂಗ್ ಕೊಡುತ್ತಿಲ್ಲ?ʼ-ದೊಡ್ಡ ಗಣೇಶ್ ಪ್ರಶ್ನೆ!
ಸಂಕ್ಷಿಪ್ತ ಸ್ಕೋರ್: ಭಾರತ 518/5 ಡಿ. ಹಾಗೂ 63/1 (ಸುದರ್ಶನ್ 30*, ರಾಹುಲ್ 25*, ವಾರಿಕನ್ 1-15), ವಿಂಡೀಸ್ 248 ಹಾಗೂ 390 (ಕ್ಯಾಂಬೆಲ್ 115, ಹೋಪ್ 103, ಗ್ರೀವ್ಸ್ 50*, ಬೂಮ್ರಾ 3-44, ಕುಲ್ದೀಪ್ 3-104, ಸಿರಾಜ್ 2-43).