IND vs WI: ʻನಿತೀಶ್ ರೆಡ್ಡಿಗೆ ಏಕೆ ಬೌಲಿಂಗ್ ಕೊಡುತ್ತಿಲ್ಲ?ʼ-ದೊಡ್ಡ ಗಣೇಶ್ ಪ್ರಶ್ನೆ!
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿಗೆ ಬೌಲಿಂಗ್ ನೀಡದ ಬಗ್ಗೆ ಮಾಜಿ ಕ್ರಿಕೆಟಿಗ ಹಾಗೂ ಕನ್ನಡಿಗ ದೊಡ್ಡ ಗಣೇಶ್ ಪ್ರಶ್ನೆ ಮಾಡಿದ್ದಾರೆ. ಬೌಲಿಂಗ್ ನೀಡದೆ. ಆಲ್‌ರೌಂಡರ್ ಆಗಿ ಅವರನ್ನು ಹೇಗೆ ತಯಾರಿ ನಡೆಸುತ್ತೀರಿ ಎಂದು ಗುಡುಗಿದ್ದಾರೆ.

ನಿತೀಶ್ ರೆಡ್ಡಿಗೆ ಬೌಲಿಂಗ್ ನೀಡದ ಬಗ್ಗೆ ದೊಡ್ಡ ಗಣೇಶ್ ಬೇಸರ. -

ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ (IND vs WI) ಭಾರತ ತಂಡದ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿಗೆ ಬೌಲಿಂಗ್ ನೀಡದ ಬಗ್ಗೆ ಮಾಜಿ ಕ್ರಿಕೆಟಿಗ ಹಾಗೂ ಕನ್ನಡಿಗ ದೊಡ್ಡ ಗಣೇಶ್ (Dodda Ganesh) ಪ್ರಶ್ನೆ ಮಾಡಿದ್ದಾರೆ. ಅಹಮದಾಬಾದ್ ಟೆಸ್ಟ್ ಪಂದ್ಯದಲ್ಲಿ ಕೇವಲ ನಾಲ್ಕು ಓವರ್‌ಗಳನ್ನು ಬೌಲ್ ಮಾಡಿದ್ದ ನಿತೀಶ್ ರೆಡ್ಡಿ (Nitish Reddy), ಡೆಲ್ಲಿ ಟೆಸ್ಟ್ ಪಂದ್ಯದಲ್ಲಿ ಒಂದೇ ಒಂದು ಓವರ್ ಅನ್ನು ಬೌಲ್ ಮಾಡಿರಲಿಲ್ಲ. ಹಾಗಾಗಿ ನಿತೀಶ್ ಕುಮಾರ್ ರೆಡ್ಡಿ ಅವರ ಆಲ್‌ರೌಂಡರ್ ಪಾತ್ರದ ಬಗ್ಗೆ ಮಾಜಿ ವೇಗಿ ತಮ್ಮ ಟ್ವಿಟರ್ ಖಾತೆಯಲ್ಲಿ ಟೀಮ್ ಮ್ಯಾನೇಜ್‌ಮೆಂಟ್ ಬಗ್ಗೆ ಗುಡುಗಿದ್ದಾರೆ.
ಇದೀಗ ದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ ಹಾಗೂ ದ್ವಿತೀಯ ಇನಿಂಗ್ಸ್ ಎರಡರಲ್ಲಿಯೂ ನಿತೀಶ್ ಕುಮಾರ್ ರೆಡ್ಡಿ ಬೌಲ್ ಮಾಡಿರಲಿಲ್ಲ. ಆದರೆ, ಅವರಿಗೆ ಬ್ಯಾಟಿಂಗ್‌ನಲ್ಲಿ ಮಾತ್ರ ಬಳಸಲಾಗುತ್ತಿದೆ. ಪ್ರಥಮ ಇನಿಂಗ್ಸ್‌ನಲ್ಲಿ 54 ಎಸೆತಗಳಲ್ಲಿ 43 ರನ್‌ಗಳನ್ನು ಕಲೆ ಹಾಕಿದ್ದರು. ಅಂದ ಹಾಗೆ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್‌ಗೆ ಬೌಲಿಂಗ್ ನೀಡಲಾಗಿದೆ, ಆದರೆ ನಿತೀಶ್ ರೆಡ್ಡಿಗೆ ಒಂದೇ ಒಂದು ಓವರ್ ಬೌಲಿಂಗ್ ನೀಡಿಲ್ಲದಿರುವುದು ಅಚ್ಚರಿಯ ಸಂಗತಿಯಾಗಿದೆ.
IND vs WI: ವಿಂಡೀಸ್ 390ಕ್ಕೆ ಆಲ್‌ಔಟ್, ಎರಡನೇ ಟೆಸ್ಟ್ ಗೆಲುವಿನ ಸನಿಹದಲ್ಲಿ ಭಾರತ ತಂಡ!
ನಿತೀಶ್ ಕುಮಾರ್ ರೆಡ್ಡಿ ಅವರನ್ನು ಆಲ್‌ರೌಂಡರ್ ಆಗಿ ಸರಿಯಾಗಿ ಬಳಿಸಿಕೊಳ್ಳದೇ ಇರುವುದರಿಂದ ಭಾರತದ ಮಾಜಿ ವೇಗದ ಬೌಲರ್ ದೊಡ್ಡ ಗಣೇಶ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. "ನಿತೀಶ್ ಕುಮಾರ್ ರೆಡ್ಡುಗೆ ನೀವು ಬೌಲಿಂಗ್ ನೀಡಿಲ್ಲವಾದರೆ, ಅವರನ್ನು ಆಲ್‌ರೌಂಡರ್ ಪಾತ್ರಕ್ಕೆ ಹೇಗೆ ತಯಾರಿ ಮಾಡುತ್ತೀರಿ?" ಎಂದು ದೊಡ್ಡ ಗಣೇಶ್ ತಮ್ಮ ಎಕ್ಸ್ ಖಾತೆಯಲ್ಲಿ ಪ್ರಶ್ನೆ ಮಾಡಿದ್ದಾರೆ.
How are you preparing Nitish Reddy for the all rounder role if you don’t give him bowling at all? #INDvWI
— Dodda Ganesh | ದೊಡ್ಡ ಗಣೇಶ್ (@doddaganesha) October 13, 2025
ಭಾರತಕ್ಕೆ 121 ರನ್ ಗುರಿ ನೀಡಿದ ವಿಂಡೀಸ್
ಜಾನ್ ಕ್ಯಾಂಪ್‌ಬೆಲ್ ಹಾಗೂ ಶೇಯ್ ಹೋಪ್ ಅವರ ಶತಕಗಳ ಬಲದಿಂದ ವೆಸ್ಟ್ ಇಂಡೀಸ್ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 390 ರನ್‌ಗಳನ್ನು ಕಲೆ ಹಾಕಿತು. ಆದರೂ ಪ್ರಥಮ ಇನಿಂಗ್ಸ್‌ನಲ್ಲಿನ ಭಾರಿ ಹಿನ್ನಡೆಯ ಕಾರಣ ಭಾರತಕ್ಕೆ ಕೇವಲ 121 ರನ್‌ಗಳ ಸಾಧಾರಣ ಗುರಿಯನ್ನು ನೀಡುವಲ್ಲಿ ಶಕ್ತವಾಯಿತು. ವಿಂಡೀಸ್ ಪರ ಜಸ್ಟಿನ್ ಗ್ರೀವ್ಸ್ 50 ರನ್ ಹಾಗೂ ಜೇಡನ್ ಸೀಲ್ಸ್ 32 ರನ್‌ಗಳನ್ನು ಕೊಡುಗೆಯನ್ನು ನೀಡಿದ್ದರು.
IND vs WI: ಬೌಂಡರಿ ಲೈನ್ ಬಳಿ ಸ್ಯಾಂಡ್‌ವಿಚ್ ಸವಿದ ಸಾಯಿ ಕಿಶೋರ್! ವಿಡಿಯೊ ನೋಡಿ
ಗೆಲುವಿನ ಸನಿಹದಲ್ಲಿ ಭಾರತ
ಸಾಧಾರಣ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, ನಾಲ್ಕನೇ ದಿನದಾಟದ ಅಂತ್ಯಕ್ಕೆ 18 ಓವರ್‌ಗಳಿಗೆ ಒಂದು ವಿಕೆಟ್ ನಷ್ಟಕ್ಕೆ 63 ರನ್‌ಗಳನ್ನು ಗಳಿಸಿದೆ. ಭಾರತ ತಂಡಕ್ಕೆ ಗೆಲ್ಲಲು ಇನ್ನೂ 58 ರನ್‌ಗಳ ಅಗತ್ಯವಿದೆ. ಕೆಎಲ್ ರಾಹುಲ್ (25*) ಹಾಗೂ ಸಾಯಿ ಸುದರ್ಶನ್ (30*) ಅವರು ಐದನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಅಹಮದಾಬಾದ್ ಪಂದ್ಯ ಗೆದ್ದಿರುವ ಭಾರತ ತಂಡ, ಇದೀಗ ಎರಡನೇ ಪಂದ್ಯವನ್ನು ಗೆದ್ದು ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಳ್ಳಲು ಎದುರು ನೋಡುತ್ತಿದೆ.