ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BCCI Central Contract: ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿಗೆ ಹೊಸತಾಗಿ ಮೂವರ ಸೇರ್ಪಡೆ

ವಿಕೆಟ್‌ ಕೀಪರ್‌ ಇಶಾನ್‌ ಕಿಶನ್‌ ಅವರು ಈ ಬಾರಿಯೂ ಕೇಂದ್ರೀಯ ಗುತ್ತಿಗೆಯಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿಲ್ಲ. ಕಳೆದ ಬಾರಿ ಇಶಾನ್‌ ಕಿಶನ್‌ ಮತ್ತು ಶ್ರೇಯಸ್‌ ಅಯ್ಯರ್‌ ಅವರನ್ನು ಗುತ್ತಿಗೆಯಿಂದ ಹೊರಗಿಡಲಾಗಿತ್ತು. ಆದರೆ ಇತ್ತೀಚಿನ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಶ್ರೇಯಸ್​ ಅಯ್ಯರ್‌ಗೆ ಮತ್ತೆ ಸ್ಥಾನ ನೀಡಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ.

ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿಗೆ ಹೊಸತಾಗಿ ಮೂವರ ಸೇರ್ಪಡೆ

Profile Abhilash BC Apr 18, 2025 8:40 AM

ಮುಂಬಯಿ: ಇನ್ನು ಕೆಲವೇ ದಿನಗಳಲ್ಲಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಈ ಬಾರಿಯ ಪುರುಷರ ಕ್ರಿಕೆಟ್‌ ತಂಡದ ವಾರ್ಷಿಕ ಗುತ್ತಿಗೆ(BCCI Central Contract) ಪಟ್ಟಿ ಪ್ರಕಟ ಮಾಡಲಿದೆ. ಸ್ಫೋಟಕ ಎಡಗೈ ಬ್ಯಾಟರ್​ ಅಭಿಷೇಕ್​ ಶರ್ಮ(Abhishek Sharma), ಆಲ್ರೌಂಡರ್​ ನಿತೀಶ್​ ಕುಮಾರ್​ ರೆಡ್ಡಿ(Nitish Reddy) ಮತ್ತು ವೇಗಿ ಹರ್ಷಿತ್​ ರಾಣಾ(Harshit Rana) ಗುತ್ತಿಗೆ ಪಟ್ಟಿಗೆ ಹೊಸ ಸೇರ್ಪಡೆಯಾಗಲಿದ್ದಾರೆ. ಇವರು ತಲಾ 1 ಕೋಟಿ ರೂ. ವಾರ್ಷಿಕ ವೇತನದ ಸಿ ಶ್ರೇಣಿಗೆ ಸೇರಲಿದ್ದಾರೆ ಎನ್ನಲಾಗಿದೆ. ಇದರ ಜತೆಗೆ ಸ್ಪಿನ್ನರ್​ ವರುಣ್​ ಚಕ್ರವರ್ತಿ ಮತ್ತು ಶ್ರೇಯಸ್​ ಅಯ್ಯರ್(Shreyas Iyer)​ ಕೂಡ ಗುತ್ತಿಗೆಗೆ ಮರುಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.

ಭಾರತದ ಅನುಭವಿ ಬ್ಯಾಟರ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ20 ಸ್ವರೂಪದಿಂದ ನಿವೃತ್ತರಾದ ನಂತರವೂ ಎ+ ವಿಭಾಗದಲ್ಲಿ ಮುಂದುವರಿಯಲಿದ್ದಾರೆ ಎಂದು ವರದಿ ಹೇಳಿದೆ. ಬಿಸಿಸಿಐನ ವಾರ್ಷಿಕ ಆಟಗಾರರ ಒಪ್ಪಂದದಲ್ಲಿ ಎ+ ದರ್ಜೆಯು ರೂ. 7 ಕೋಟಿ ಮೌಲ್ಯದ್ದಾಗಿದೆ.

ವಿಕೆಟ್‌ ಕೀಪರ್‌ ಇಶಾನ್‌ ಕಿಶನ್‌ ಅವರು ಈ ಬಾರಿಯೂ ಕೇಂದ್ರೀಯ ಗುತ್ತಿಗೆಯಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿಲ್ಲ. ಕಳೆದ ಬಾರಿ ಇಶಾನ್‌ ಕಿಶನ್‌ ಮತ್ತು ಶ್ರೇಯಸ್‌ ಅಯ್ಯರ್‌ ಅವರನ್ನು ಗುತ್ತಿಗೆಯಿಂದ ಹೊರಗಿಡಲಾಗಿತ್ತು. ಆದರೆ ಇತ್ತೀಚಿನ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಶ್ರೇಯಸ್​ ಅಯ್ಯರ್‌ಗೆ ಮತ್ತೆ ಸ್ಥಾನ ನೀಡಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ.

ಇದನ್ನೂ ಓದಿ BCCI BCCI sacks coaching staff: ಕೋಚಿಂಗ್‌ ಸಿಬ್ಬಂದಿಗಳ ಕಡಿತ; ಅಭಿಷೇಕ್‌ ನಾಯರ್‌, ದಿಲೀಪ್‌ಗೆ ಗೇಟ್ ಪಾಸ್

ಕಳೆದ ಟಿ20 ವಿಶ್ವಕಪ್‌ ಮತ್ತು ಚಾಂಪಿಯನ್ಸ್‌ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಕ್ಷರ್‌ ಪಟೇಲ್‌ ಅವರು ಗುತ್ತಿಗೆಯಲ್ಲಿ ಬಡ್ತಿ ಪಡೆಯಲಿದ್ದಾರೆ ಎಂದು ವರದಿಯಾಗಿದೆ. ಬಿಸಿಸಿಐ ಮಾನದಂಡದ ಅನ್ವಯ ವಾರ್ಷಿಕ ಗುತ್ತಿಗೆ ಪಡೆಯಲು ನಿಶ್ಚಿತ ಅವಧಿಯಲ್ಲಿ 3 ಟೆಸ್ಟ್​ ಅಥವಾ 8 ಏಕದಿನ ಅಥವಾ 10 ಟಿ20 ಪಂದ್ಯ ಆಡಿರಬೇಕು. ಹರ್ಷಿತ್​ ಇದುವರೆಗೆ 2 ಟೆಸ್ಟ್​, 5 ಏಕದಿನ, 1 ಟಿ20 ಪಂದ್ಯ ಆಡಿದ್ದು, ಈ ಮೂರೂ ಮಾನದಂಡ ತಲುಪಿಲ್ಲ. ಆದರೂ ಅವರಿಗೆ ವಿಶೇಷ ವಿನಾಯಿತಿ ನೀಡಲು ಬಿಸಿಸಿಐ ಬಯಸಿದೆ ಎನ್ನಲಾಗಿದೆ.