ತಿರುವನಂತಪುರ, ಡಿ.31: ಮಂಗಳವಾರ ನಡೆದಿದ್ದ ಐದನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾ(INDW vs SLW) ವಿರುದ್ಧ 15 ರನ್‌ಗಳ ಜಯ ಸಾಧಿಸುವ ಮೂಲಕ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿತ್ತು. 5-0 ಅಂತರದ ಸರಣಿ ಗೆಲುವಿನ ಮೂಲಕ ತಂಡವು ವರ್ಷವನ್ನು ಅದ್ದೂರಿಯಾಗಿ ಕೊನೆಗೊಳಿಸಿತು. ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿದ ನಾಯಕಿ ಹರ್ಮನ್‌ಪ್ರೀತ್ ಕೌರ್(Harmanpreet Kaur) ಅವರು ಮಾಜಿ ಆಟಗಾರ್ತಿ ಮಿಥಾಲಿ ರಾಜ್(Mithali Raj) ಅವರ ದಾಖಲೆಯೊಂದನ್ನು ಸರಿಗಟ್ಟಿದರು.
ಭಾರತ ಪರ ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದ ಮಿಥಾಲಿ ರಾಜ್ ಅವರ ದಾಖಲೆಯನ್ನು ಸರಿಗಟ್ಟಿದರು. ಉಭಯ ಆಟಗಾರ್ತಿಯರು 12 ಸಲ ಪ್ರಶಸ್ತಿ ಪಡೆದಿದ್ದಾರೆ. ಕೌರ್ 43 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 68 ರನ್ ಗಳಿಸಿದರು.
ಪಂದ್ಯದ ನಂತರ ಮಾತನಾಡಿದ ಹರ್ಮನ್‌ಪ್ರೀತ್ ಕೌರ್, 2025 ರಲ್ಲಿ ತವರಿನಲ್ಲಿ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದ ತಂಡದ ಪ್ರದರ್ಶನದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ವರ್ಷವಿಡೀ 23 ಏಕದಿನ ಪಂದ್ಯಗಳನ್ನು ಆಡಿದ ನಂತರ ತಂಡವು ಟಿ 20 ಸ್ವರೂಪಕ್ಕೆ ಹೊಂದಿಕೊಳ್ಳುವುದು ಸುಲಭವಲ್ಲ ಎಂದು ಹೇಳಿದರು.
ಹರ್ಮನ್‌ಪ್ರೀತ್ ಕೌರ್ ಅರ್ಧಶತಕ, 5ನೇ ಪಂದ್ಯವನ್ನು ಗೆದ್ದು ಟಿ20ಐ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡ ಭಾರತ!
T20I ಗಳಲ್ಲಿ ಭಾರತ ಮಹಿಳೆಯರಿಗೆ ಹೆಚ್ಚಿನ PoTM ಪ್ರಶಸ್ತಿಗಳು
12 - ಹರ್ಮನ್‌ಪ್ರೀತ್ ಕೌರ್*
12 - ಮಿಥಾಲಿ ರಾಜ್
8 - ಶಫಾಲಿ ವರ್ಮಾ
8 - ಸ್ಮೃತಿ ಮಂಧಾನ
T20I ಗಳಲ್ಲಿ ಭಾರತ ಮಹಿಳೆಯರಿಗೆ ಹೆಚ್ಚಿನ PoTS ಪ್ರಶಸ್ತಿಗಳು
3 - ಮಿಥಾಲಿ ರಾಜ್
3 - ಹರ್ಮನ್‌ಪ್ರೀತ್ ಕೌರ್
3 - ದೀಪ್ತಿ ಶರ್ಮಾ
3 - ಶಫಾಲಿ ವರ್ಮಾ*
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 175 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಶ್ರೀಲಂಕಾ 7 ವಿಕೆಟ್‌ಗೆ 160 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಲಂಕಾ ಪರ ಹಾಸಿನಿ ಪೆರೇರಾ ಮತ್ತು ಇಮೇಷಾ ದುಲಾನಿ ಬಾರಿಸಿದ ಅರ್ಧಶತಕ ವ್ಯರ್ಥವಾಯಿತು.