ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Harmanpreet Kaur: ಜಯ್ ಶಾ ಪಾದ ಮುಟ್ಟಲು ಪ್ರಯತ್ನಿಸಿದ ಹರ್ಮನ್‌ಪ್ರೀತ್ ಕೌರ್; ಐಸಿಸಿ ಅಧ್ಯಕ್ಷರ ನಡೆಗೆ ಭಾರೀ ಮೆಚ್ಚುಗೆ

ಭಾರತೀಯ ಮಹಿಳಾ ಕ್ರಿಕೆಟ್‌ನ ಪ್ರಗತಿಯಲ್ಲಿ ಜಯ್ ಶಾ ಪ್ರಮುಖ ಪಾತ್ರ ವಹಿಸಿದ್ದಾರೆ. ಬಿಸಿಸಿಐ ಕಾರ್ಯದರ್ಶಿಯಾಗಿದ್ದಾಗ ಮಹಿಳಾ ಕ್ರಿಕೆಟ್‌ನಲ್ಲಿ ಅನೇಕ ಸುಧಾರಣೆಗಳಿಗೆ ಶಾ ಕಾರಣರಾಗಿದ್ದರು. ಇದರಲ್ಲಿ ಮಹಿಳಾ ಕ್ರಿಕೆಟಿಗರಿಗೆ ಪುರುಷ ಆಟಗಾರರಂತೆಯೇ ವೇತನ ಸಮಾನತೆಯನ್ನು ತರುವ ನಿರ್ಧಾರವೂ ಸೇರಿದೆ. ಐಸಿಸಿ ಅಧ್ಯಕ್ಷರಾಗಿಯೂ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ

ಜಯ್‌ ಶಾ

ನವಿ ಮುಂಬೈ: ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ಭಾನುವಾರ ತಡ ರಾತ್ರಿ ನಡೆದಿದ್ದ ಮಹಿಳಾ ಏಕದಿನ ವಿಶ್ವಕಪ್‌ ಫೈನಲ್‌(women's world cup final) ಪಂದ್ಯದಲ್ಲಿ ಭಾರತ ಮಹಿಳಾ ತಂಡವು(india women's world cup) ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಮಣಿಸಿ ಮೊದಲ ಬಾರಿಗೆ ವಿಶ್ವ ಕಿರೀಟ ಮುಡಿಗೇರಿಸಿಕೊಂಡು ಚಾರಿತ್ರಿಕ ಸಾಧನೆ ಮೆರೆಯಿತು. ಹರ್ಮನ್‌ಪ್ರೀತ್ ಕೌರ್(Harmanpreet Kaur) ಬಳಗದ ಆಟಗಾರ್ತಿಯರು ಹರ್ಷದ ಹೊನಲಲ್ಲಿ ತೇಲಿದರು.

ಐಸಿಸಿ ಅಧ್ಯಕ್ಷ ಜಯ್ ಶಾ ಅವರಿಂದ ಏಕದಿನ ವಿಶ್ವಕಪ್ ಟ್ರೋಫಿಯನ್ನು ಪಡೆಯಲು ವಿಧ್ಯುಕ್ತ ವೇದಿಕೆಯಲ್ಲಿದ್ದ ನಾಯಕಿ ಹರ್ಮನ್‌ಪ್ರೀತ್ ಕೌರ್‌, ಜಯ್‌ ಶಾ ಪಾದಗಳನ್ನು ಮುಟ್ಟಲು ಪ್ರಯತ್ನಿಸಿದರು. ಆದರೆ ಮಾಜಿ ಬಿಸಿಸಿಐ ಕಾರ್ಯದರ್ಶಿ ಭಾರತದ ನಾಯಕಿಯ ಮೇಲಿನ ಗೌರವದಿಂದ ಇದನ್ನು ನಿರಾಕರಿಸಿದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಜಯ್‌ ಶಾ ಅವರ ಈ ನಡೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಯ್ ಶಾ ಪಕ್ಕದಲ್ಲಿ ನಿಂತಿದ್ದ ಹರ್ಮನ್‌ಪ್ರೀತ್ ಭಾವನೆಗಳ ಉಬ್ಬರವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಮತ್ತು ಅವರ ಪಾದಗಳನ್ನು ಮುಟ್ಟಲು ಪ್ರಯತ್ನಿಸಿದರು. ಆದರೆ, ಶಾ ಭಾರತ ತಂಡದ ನಾಯಕನನ್ನು ಹಾಗೆ ಮಾಡದಂತೆ ತಡೆದರು. ಈ ವಿಡಿಯೊ ಇಲ್ಲಿದೆ.



ಭಾರತೀಯ ಮಹಿಳಾ ಕ್ರಿಕೆಟ್‌ನ ಪ್ರಗತಿಯಲ್ಲಿ ಜಯ್ ಶಾ ಪ್ರಮುಖ ಪಾತ್ರ ವಹಿಸಿದ್ದಾರೆ. ಬಿಸಿಸಿಐ ಕಾರ್ಯದರ್ಶಿಯಾಗಿದ್ದಾಗ ಮಹಿಳಾ ಕ್ರಿಕೆಟ್‌ನಲ್ಲಿ ಅನೇಕ ಸುಧಾರಣೆಗಳಿಗೆ ಶಾ ಕಾರಣರಾಗಿದ್ದರು. ಇದರಲ್ಲಿ ಮಹಿಳಾ ಕ್ರಿಕೆಟಿಗರಿಗೆ ಪುರುಷ ಆಟಗಾರರಂತೆಯೇ ವೇತನ ಸಮಾನತೆಯನ್ನು ತರುವ ನಿರ್ಧಾರವೂ ಸೇರಿದೆ. ಐಸಿಸಿ ಅಧ್ಯಕ್ಷರಾಗಿಯೂ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಪುರುಷರ ವಿಶ್ವಕಪ್‌ ಬಹುಮಾನ ಮೊತ್ತಕ್ಕಿಂತ ಅಧಿಕ ಮೊತ್ತವನ್ನು ನೀಡುವಂತೆ ಮಾಡಿದರು.

ಇದನ್ನೂ ಓದಿ Women’s World Cup 2025: ಚೊಚ್ಚಲ ವಿಶ್ವಕಪ್‌ ಗೆದ್ದ ಭಾರತ ಮಹಿಳಾ ತಂಡಕ್ಕೆ ₹51 ಕೋಟಿ ಬಹುಮಾನ ಘೋಷಿಸಿದ ಬಿಸಿಸಿಐ

ಫೈನಲ್‌ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನ ಪಡೆದ ಭಾರತ, ಶಫಾಲಿ ವರ್ಮಾ (87) ಮತ್ತು ದೀಪ್ತಿ ಶರ್ಮಾ (58) ಅವರ ಅರ್ಧಶತಕಗಳ ಬಲದಿಂದ ತಂಡವು 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 298 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 45.3 ಓವರ್‌ಗಳಲ್ಲಿ 246 ಗಳಿಸಲಷ್ಟೇ ಸಾಧ್ಯವಾಯಿತು. ದೀಪ್ತಿ (39ಕ್ಕೆ5) ಮತ್ತು ಶಫಾಲಿ (36ಕ್ಕೆ2) ತಮ್ಮ ಸ್ಪಿನ್ ಕೈಚಳಕ ತೋರಿಸುವ ಮೂಲಕ ಹರಿಣ ಪಡೆಯನ್ನು ಕಟ್ಟಿಹಾಕಿದರು.