ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026 Final: ಇಂದಿನ ಐಪಿಎಲ್‌ ಫೈನಲ್‌ನಲ್ಲಿ ಆರ್‌ಸಿಬಿ-ಗುಜರಾತ್‌ ತಂಡದ ಆಟಗಾರರು ನಿರ್ಮಿಸಬಹುದಾದ ದಾಖಲೆಗಳಿವು

Royal Challengers Bengaluru vs Gujarat Titans: ಕೈಬೆರಳು ಗಾಯದಿಂದ ಚೇತರಿಸಿಕೊಂಡಿರುವ ಆರಂಭಿಕ ಫಿಲ್​ ಸಾಲ್ಟ್​ ಈಗಾಗಲೆ ಆರ್​ಸಿಬಿ ತಂಡವನ್ನು ಮರಳಿ ಕೂಡಿಕೊಂಡಿದ್ದರೂ, ಮೊದಲ ಕ್ವಾಲಿಫೈಯರ್​ನಲ್ಲಿ ಆಡಿರಲಿಲ್ಲ. ಫೈನಲ್​ನಲ್ಲಿ ಅವರು ಆಡುವ ಬಗ್ಗೆಯೂ ಸ್ಪಷ್ಟತೆ ಇಲ್ಲ.

rcb vs gt final 2026

ಅಹಮದಾಬಾದ್‌, ಮೇ 31: ಸತತ 2ನೇ ಬಾರಿ ಚಾಂಪಿಯನ್‌ ಎನಿಸಿಕೊಳ್ಳಲು ಕಾಯುತ್ತಿರುವ ಆರ್‌ಸಿಬಿ, ಇಂದು(ಭಾನುವಾರ) ನಡೆಯಲಿರುವ 19ನೇ ಆವೃತ್ತಿಯ ಐಪಿಎಲ್‌(IPL 2026 Final) ಫೈನಲ್‌ನಲ್ಲಿ ಗುಜರಾತ್‌ ಟೈಟಾನ್ಸ್‌ ವಿರುದ್ಧ ಸೆಣಸಾಡಲಿದೆ. ಈ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಈ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರಿಗೆ ಹಲವು ದಾಖಲೆ ನಿರ್ಮಿಸುವ ಅವಕಾಶವಿದೆ.

ತೀವ್ರ ಪೈಪೋಟಿ ನಿರೀಕ್ಷೆ

ಉಭಯ ತಂಡಗಳು ಟೂರ್ನಿಯಲ್ಲಿ ನೀಡಿರುವ ಪ್ರದರ್ಶನ ಗಮನಿಸಿದರೆ, ಫೈನಲ್‌ನಲ್ಲಿ ರೋಚಕ ಪೈಪೋಟಿ ನಿರೀಕ್ಷಿಸಬಹುದು. ಕ್ವಾಲಿಫೈಯರ್‌-1ರಲ್ಲಿ ತನ್ನ ವಿರುದ್ಧವೇ ಸೋತ ಹೊರತಾಗಿಯೂ ಗುಜರಾತ್‌ ತಂಡವನ್ನು ಆರ್‌ಸಿಬಿ ಲಘುವಾಗಿ ಪರಿಗಣಿಸುವಂತಿಲ್ಲ. ಕ್ವಾಲಿಫೈಯರ್‌-1 ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಗುಜರಾತ್‌ ಅತ್ಯಂತ ಹೀನಾಯವಾಗಿ ಸೋತಿತ್ತು. ಆರ್‌ಸಿಬಿ 254 ರನ್‌ ಸಿಡಿಸಿದರೆ, ಗುಜರಾತ್‌ ಕೇವಲ 162 ರನ್‌ಗೆ ಸರ್ವಪತನ ಕಂಡಿತ್ತು. ಆದರೆ ಟೂರ್ನಿಯಲ್ಲಿ ಗುಜರಾತ್‌ನ ಒಟ್ಟಾರೆ ಪ್ರದರ್ಶನ ಗಮನಿಸಿದರೆ ಆರ್‌ಸಿಬಿ ವಿರುದ್ಧದ ಸೋಲು ತಂಡದ ಆತ್ಮವಿಶ್ವಾಸ ಕುಗ್ಗಿಸಲು ಸಾಧ್ಯವಿಲ್ಲ.

ಆರ್‌ಸಿಬಿ ಆಟಗಾರರ ಮುಂದಿರುವ ದಾಖಲೆಗಳು

ದೇವದತ್ ಪಡಿಕ್ಕಲ್: 150 ಟಿ20 ಸಿಕ್ಸರ್‌ಗಳಿಗೆ 5 ಸಿಕ್ಸರ್‌ಗಳು ಬೇಕಾಗಿದೆ.

ರಜತ್ ಪಟಿದಾರ್: 250 ಟಿ20 ಬೌಂಡರಿಗಳಿಗೆ 5 ಬೌಂಡರಿಗಳು ಬೇಕಾಗಿದೆ.

ಕೃನಾಲ್ ಪಾಂಡ್ಯ: 2000 ಐಪಿಎಲ್ ರನ್‌ಗಳಿಗೆ 19 ರನ್‌ಗಳು ಅಗತ್ಯ.

ಟಿಮ್ ಡೇವಿಡ್: 450 ಐಪಿಎಲ್ ಬೌಂಡರಿಗಳಿಗೆ 4 ಬೌಂಡರಿಗಳು ಬೇಕಾಗಿದೆ.

ಜಿತೇಶ್ ಶರ್ಮಾ: 300 ಟಿ20 ಬೌಂಡರಿಗಳಿಗೆ 3 ಬೌಂಡರಿಗಳು ಅಗತ್ಯ.

ರೊಮಾರಿಯೊ ಶೆಫರ್ಡ್: 200 ಟಿ20 ಬೌಂಡರಿಗಳಿಗೆ 5 ಸಿಕ್ಸರ್‌ಗಳು ಅಗತ್ಯ.

ಐಪಿಎಲ್​ ಟ್ರೋಫಿಗೂ 1983ರ ವಿಶ್ವಕಪ್​ಗೂ ಇದೆ ನಂಟು; ಏನದು?

ಗುಜರಾತ್‌ ತಂಡದ ಆಟಗಾರರ ಮುಂದಿರುವ ದಾಖಲೆಗಳು

ಸಾಯಿ ಸುದರ್ಶನ್: ಟಿ20ಯಲ್ಲಿ 100 ಸಿಕ್ಸರ್‌ಗಳನ್ನು ಪೂರ್ಣಗೊಳಿಸಲು 10 ಸಿಕ್ಸರ್‌ಗಳು ಅಗತ್ಯ.

ಶುಭ್‌ಮನ್ ಗಿಲ್: 450 ಐಪಿಎಲ್ ಬೌಂಡರಿಗಳಿಗೆ 6 ಬೌಂಡರಿಗಳು ಬೇಕಾಗಿದೆ.

ಕಾಗಿಸೊ ರಬಾಡ: 150 ಐಪಿಎಲ್ ವಿಕೆಟ್‌ಗಳಿಗೆ 3 ವಿಕೆಟ್‌ಗಳು ಅಗತ್ಯ.

ಶುಭ್‌ಮನ್ ಗಿಲ್: ಪ್ಲೇ-ಆಫ್‌ಗಳಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಲು 53 ರನ್‌ಗಳು ಅಗತ್ಯ

ಸಂಭಾವ್ಯ ಆಟಗಾರರ ಪಟ್ಟಿ

ಆರ್‌ಸಿಬಿ: ವಿರಾಟ್‌ ಕೊಹ್ಲಿ, ಫಿಲ್‌ ಸಾಲ್ಟ್‌/ವೆಂಕಟೇಶ್‌ ಅಯ್ಯರ್‌, ಏವದತ್ತ ಪಡಿಕ್ಕಲ್‌, ರಜತ್‌ ಪಾಟೀದಾರ್‌(ನಾಯಕ), ಜಿತೇಶ್‌ ಶರ್ಮ, ರೊಮಾರಿಯೊ ಶೆಫರ್ಡ್‌, ಟಿಮ್‌ ಡೇವಿಡ್‌, ಕೃನಾಲ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಜೇಕಬ್ ಡಫಿ, ಜೋಶ್‌ ಹೇಜಲ್‌ವುಡ್‌, ರಸಿಕ್‌ ಸಲಾಂ.

ಗುಜರಾತ್‌: ಶುಭಮನ್‌ ಗಿಲ್‌(ನಾಯಕ), ಸಾಯಿ ಸುದರ್ಶನ್‌, ಜಾಸ್‌ ಬಟ್ಲರ್‌, ವಾಷಿಂಗ್ಟನ್‌ ಸುಂದರ್‌, ಜೇಸನ್‌ ಹೋಲ್ಡರ್‌, ರಾಹುಲ್‌ ತೆವಾಟಿಯಾ, ನಿಶಾಂತ್‌ ಸಿಂಧು, ರಶೀದ್‌ ಖಾನ್‌, ಮೊಹಮ್ಮದ್‌ ಸಿರಾಜ್‌, ಪ್ರಸಿದ್ಧ್‌ ಋಷ್ಣ, ಸಾಯಿ ಕಿಶೋರ್‌, ಕಗಿಸೊ ರಬಾಡ.