ಐಪಿಎಲ್ ಟ್ರೋಫಿಗೂ 1983ರ ವಿಶ್ವಕಪ್ಗೂ ಇದೆ ನಂಟು; ಏನದು?
IPL Trophy Sanskrit Shlok: ಐಪಿಎಲ್ ಎಂಬುದು ಸ್ಥಳೀಯ ಆಟಗಾರರ ಪ್ರತಿಭೆಯನ್ನು ಅನಾವರಣ ಮಾಡಿಸಲು ಇರುವಂತ ಉತ್ತಮ ವೇದಿಕೆಯಾಗಿದೆ. ಈ ಟೂರ್ನಿಯಿಂದ ಅದೆಷ್ಟೋ ಆಟಗಾರರು ಬೆಳಕಿಗೆ ಬಂದು ಇಂದು ವಿಶ್ವದ ನಂ.1 ಆಟಗಾರರಾಗಿಯೂ ಮೆರೆದಾಡಿದ್ದಾರೆ. ಕೇವಲ 15 ವರ್ಷ ವೈಭವ್ ಸೂರ್ಯವಂಶಿಯಂತಹ ಸ್ಫೋಟಕ ಬ್ಯಾಟರನ್ನು ವಿಶ್ವಕ್ಕೆ ಪರಿಚಯಿಸಿದ ನಿದರ್ಶನವೇ ಇದಕ್ಕೆ ಉತ್ತಮ ಸಾಕ್ಷಿ.
ipl trophy sanskrit shlok -
ಅಹಮದಾಬಾದ್, ಮೇ 31: ಇನ್ನೇನು ಕೆಲ ಗಂಟೆಗಳಲ್ಲಿ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಟಿ20 ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ 19ನೇ ಆವೃತ್ತಿಯ ಫೈನಲ್ ಪಂದ್ಯ ಆರಂಭವಾಗಲಿದೆ. ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ತಮ್ಮ ಎರಡನೇ ಪ್ರಶಸ್ತಿಯನ್ನು ಪಡೆಯಲು ಸಿದ್ದವಾಗಿವೆ.
ಈ ಬಾರಿ ಚಾಂಪಿಯನ್ ಯಾರಾಗಬಹುದು ಎನ್ನುವ ಕುತೂಹಲದ ಮಧ್ಯೆ ಟ್ರೋಫಿಯಲ್ಲಿ(IPL Trophy) ಬರೆದಿರುವ ಸಂಸ್ಕೃತ ಶ್ಲೋಕದ(IPL Trophy Shlok) ಅರ್ಥವೇನು? 1983ರ ವಿಶ್ವಕಪ್(1983 Cricket World Cup) ಟ್ರೋಫಿಗೂ ಇರುವ ನಂಟೇನು? ಎಂಬ ಮತ್ತೊಂದು ಕುತೂಹಲ ಅಭಿಮಾನಿಗಳದ್ದು.
ಭಾರತದ ಮೊದಲ ವಿಶ್ವಕಪ್ ನಂಟು
ಹೌದು, ಐಪಿಎಲ್ ಟ್ರೋಫಿಯಲ್ಲಿ ಬರೆದಿರುವ ಸಂಸ್ಕೃತ ಶ್ಲೋಕಕ್ಕೂ 1983ರ ವಿಶ್ವಕಪ್ ಟ್ರೋಫಿಗೂ ನಂಟಿದೆ. ಭಾರತ ತಂಡ 1983ರಲ್ಲಿ ಗೆದ್ದ ಏಕದಿನ ವಿಶ್ವಕಪ್ ಟ್ರೋಫಿ ಮೇಲೆ “ಯತ್ರಾ ಅವಸರ ಪ್ರಾಪ್ನೋತಿಹಿ”(Yatra Pratibha Avsara Prapnotihi) ಎಂದು ಸಂಸ್ಕೃತ ಶ್ಲೋಕವೊಂದನ್ನು ಬರೆಯಲಾಗಿದೆ. ಇದೇ ಶ್ಲೋಕವನ್ನು ಐಪಿಎಲ್ ಟ್ರೋಫಿಯಲ್ಲಿಯೂ ಬರೆಯಲಾಗಿದೆ. ಇದರ ಅರ್ಥ ಎಲ್ಲಿ ಪ್ರತಿಭೆಗಳು ಇರುತ್ತಾರೋ ಅಲ್ಲಿ ಅವಕಾಶವೂ ಇರುತ್ತದೆ ಎಂದು. ಇದನ್ನೇ ಸ್ಫೂರ್ತಿಯನ್ನಾಗಿಟ್ಟುಕೊಂಡು ಐಪಿಎಲ್ ಟ್ರೋಫಿಯ ಮೇಲೂ ಈ ಶ್ಲೋಕವನ್ನು ಕೆತ್ತಲಾಗಿದೆ.
IPL 2026 winner prize money: ಐಪಿಎಲ್ ಚಾಂಪಿಯನ್ ತಂಡಕ್ಕೆ ಸಿಗುವ ಬಹುಮಾನ ಮೊತ್ತವೆಷ್ಟು?
1983ರಲ್ಲಿ ಕಪಿಲ್ ದೇವ್ ಸಾರಥ್ಯದ ಭಾರತ ತಂಡ ಲಂಡನ್ಗೆ ವಿಶ್ವಕಪ್ ಆಡಲು ತೆರಳಿದ್ದಾಗ ಭಾರತ ತಂಡವನ್ನು ಅತ್ಯಂತ ಕೀಳು ಮಟ್ಟದಲ್ಲಿ ಅಪಮಾನ ಮಾಡಲಾಗಿತ್ತು. ಅದರಲ್ಲೂ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮಾಧ್ಯಮಗಳು ಕೆಲ ಸವಾಲನ್ನು ಹಾಕಿದ್ದವು. ಸ್ವತಃ ಭಾರತೀಯರೀಗೂ ಕಪ್ ಗೆಲ್ಲುವ ವಿಶ್ವಾಸವಿರಲಿಲ್ಲ. ಆದರೆ ಅಂದು ಕಪೀಲ್ ದೇವ್ ಪಡೆ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು.
Just look at it 🤌
— IndianPremierLeague (@IPL) May 30, 2026
This is what they all play for 🏆#TATAIPL | #Final | #TheFinalLeap | #RCBvGT | @RCBTweets | @gujarat_titans pic.twitter.com/rE1El0ibM7
ಅರ್ಥಪೂರ್ಣವಾಗಿದೆ ಈ ಶ್ಲೋಕ
ಕಪಿಲ್ ಸಾರಥ್ಯದಲ್ಲಿ ಗೆದ್ದ ವಿಶ್ವಕಪ್ ಮೇಲೆ “ಯತ್ರಾ ಅವಸರ ಪ್ರಾತ್ನೋತಿನಿ” ಎಂದು ಬರೆಯಲಾಗಿತ್ತು. ಇದನ್ನೇ ಪ್ರಸಿದ್ಧ ಐಪಿಎಲ್ ಟ್ರೋಫಿಯಲ್ಲಿಯೂ ಬರೆಯಲಾಗಿದೆ. ಐಪಿಎಲ್ ಎಂಬುದು ಸ್ಥಳೀಯ ಆಟಗಾರರ ಪ್ರತಿಭೆಯನ್ನು ಅನಾವರಣ ಮಾಡಿಸಲು ಇರುವಂತ ಉತ್ತಮ ವೇದಿಕೆಯಾಗಿದೆ. ಈ ಟೂರ್ನಿಯಿಂದ ಅದೆಷ್ಟೋ ಆಟಗಾರರು ಬೆಳಕಿಗೆ ಬಂದು ಇಂದು ವಿಶ್ವದ ನಂ.1 ಆಟಗಾರರಾಗಿಯೂ ಮೆರೆದಾಡಿದ್ದಾರೆ. ಕೇವಲ 15 ವರ್ಷ ವೈಭವ್ ಸೂರ್ಯವಂಶಿಯಂತಹ ಸ್ಫೋಟಕ ಬ್ಯಾಟರನ್ನು ವಿಶ್ವಕ್ಕೆ ಪರಿಚಯಿಸಿದ ನಿದರ್ಶನವೇ ಇದಕ್ಕೆ ಸಾಕ್ಷಿ. ಈ ಕಾರಣದಿಂದ ಟ್ರೋಫಿ ಮೇಲೆ ಬರೆದಿರುವ ಶ್ಲೋಕ ಅರ್ಥಪೂರ್ಣವಾಗಿದೆ.