ಎಫ್‌ಐಎಚ್ ಪ್ರೊ ಲೀಗ್: ಭಾರತ ಮಹಿಳಾ ಹಾಕಿ ತಂಡ ಪ್ರಕಟ
ಭಾರತ ಹಾಕಿ ತಂಡವು ಫೆ.15ರಂದು ಇಂಗ್ಲೆಂಡ್ ವಿರುದ್ಧ ತನ್ನ ಅಭಿಯಾನ(FIH Pro League) ಆರಂಭಿಸಲಿದೆ. ಆ ಬಳಿಕ ನೆದರ್‌ಲ್ಯಾಂಡ್ಸ್, ಸ್ಪೇನ್ ಹಾಗೂ ಜರ್ಮನಿ ತಂಡಗಳನ್ನು ಎದುರಿಸಲಿದೆ. ಪ್ರತಿ ತಂಡಗಳು ತಲಾ ಎರಡು ಬಾರಿ ಮುಖಾಮುಖಿಯಾಗಲಿವೆ.

FIH Pro League

ನವದೆಹಲಿ: ಫೆಬ್ರವರಿ 15ರಿಂದ 25ರ ತನಕ ನಡೆಯಲಿರುವ ಎಫ್‌ಐಎಚ್ ಪ್ರೊ ಲೀಗ್‌ಗೆ(FIH Pro League) ಭಾರತ ಮಹಿಳಾ ಹಾಕಿ ತಂಡ ಪ್ರಕಟಗೊಂಡಿದೆ. 24 ಸದಸ್ಯರುಗಳನ್ನು ಒಳಗೊಂಡ ತಂಡವನ್ನು ಸಲಿಮಾ ಟೇಟೆ ಮುನ್ನಡೆಸಲಿದ್ದಾರೆ. ಫಾರ್ವರ್ಡ್ ಆಟಗಾರ್ತಿ ನವನೀತ್ ಕೌರ್ ಉಪ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಭಾರತ ಹಾಕಿ ತಂಡವು ಫೆ.15ರಂದು ಇಂಗ್ಲೆಂಡ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಆ ಬಳಿಕ ನೆದರ್‌ಲ್ಯಾಂಡ್ಸ್, ಸ್ಪೇನ್ ಹಾಗೂ ಜರ್ಮನಿ ತಂಡಗಳನ್ನು ಎದುರಿಸಲಿದೆ. ಪ್ರತಿ ತಂಡಗಳು ತಲಾ ಎರಡು ಬಾರಿ ಮುಖಾಮುಖಿಯಾಗಲಿವೆ.
ಪ್ರಮುಖ ತಂಡದ ಜತೆಗೆ ಮೀಸಲು ಆಟಗಾರರಾಗಿ ಗೋಲ್‌ಕೀಪರ್ ಬನ್ವಾರಿ ಸೋಲಂಕಿ, ಡಿಫೆಂಡರ್ ಗಳಾದ ಅಕ್ಷತಾ ಅಬಾಸೊ ಧೇಕಾಲೆ, ಜ್ಯೋತಿ ಸಿಂಗ್ ಹಾಗೂ ಫಾರ್ವರ್ಡ್‌ಗಳಾದ ಸಾಕ್ಷಿ ರಾಣಾ, ಅನ್ನು ಹಾಗೂ ಸೋನಮ್ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ Padma Awards: ಸ್ಪಿನ್ ದಿಗ್ಗಜ ಆರ್ ಅಶ್ವಿನ್‌ಗೆ ಪದ್ಮಶ್ರೀ, ಹಾಕಿ ದಿಗ್ಗಜ ಶ್ರೀಜೇಶ್‌ಗೆ ಪದ್ಮ ಭೂಷಣ!
ಭಾರತದ ಮಹಿಳಾ ಹಾಕಿ ತಂಡ
ಗೋಲ್‌ಕೀಪರ್ಸ್: ಸವಿತಾ ಪೂನಿಯ, ಬಿಚು ದೇವಿ ಖರಿಬಮ್
ಡಿಫೆಂಡರ್‌ಗಳು: ಸುಶೀಲಾ ಚಾನು, ನಿಕ್ಕಿ ಪ್ರಧಾನ್, ಉದಿತಾ, ಜ್ಯೋತಿ, ಇಶಿಕಾ ಚೌಧರಿ, ಜ್ಯೋತಿ ಛತ್ರಿ.
ಮಿಡ್ ಫೀಲ್ಡರ್‌ಗಳು: ವೈಷ್ಣವಿ ವಿಠಲ್ ಫಾಲ್ಕೆ, ನೇಹಾ, ಮನಿಶಾ ಚೌಹಾಣ್, ಸಲಿಮಾ ಟೇಟೆ(ನಾಯಕಿ), ಸುನೆಲಿತಾ ಟೊಪ್ಪೊ, ಲಾಲ್‌ರೆಂಸಿಯಾಮಿ, ಬಲ್ಜೀತ್ ಕೌರ್, ಶರ್ಮಿಳಾ ದೇವಿ.
ಫಾರ್ವರ್ಡ್‌ಗಳು: ನವನೀತ್ ಕೌರ್(ಉಪ ನಾಯಕಿ), ಮುಮ್ತಾಝ್ ಖಾನ್, ಪ್ರೀತಿ ದುಬೆ, ಋತುಜಾ ದಾದಾಸೊ ಪಿಸಾಲ್, ಬ್ಯೂಟಿ ಡಂಗ್‌ಡಂಗ್, ಸಂಗೀತಾ ಕುಮಾರಿ, ದೀಪಿಕಾ, ವಂದನಾ ಕಟಾರಿಯಾ.