ಅಬುಧಾಬಿ: ಯುಎಇ ವಿರುದ್ಧದ ಪಂದ್ಯಕ್ಕೂ(Asia Cup 2025) ಮುನ್ನ ಶಿಷ್ಟಾಚಾರ ಉಲ್ಲಂಘಿಸಿ ‘ಹೈಡ್ರಾಮಾ’ ನಡೆಸಿದ್ದ ಪಾಕಿಸ್ತಾನ(Pakistan) ತಂಡದ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ಅವರನ್ನು ವಜಾಗೊಳಿಸ ಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಐಸಿಸಿಗೆ ಮನವಿ ಮಾಡಿತ್ತು. ಆದರೆ ಆ ಮನವಿಯನ್ನು ಐಸಿಸಿ(ICC) ತಳ್ಳಿ ಹಾಕಿತ್ತು. ಅದನ್ನು ವಿರೋಧಿಸಿ ತಂಡವನ್ನು ತಡವಾಗಿ ಕ್ರೀಡಾಂಗಣಕ್ಕೆ ಕಳುಹಿಸಿತ್ತು.
ಬಹು ತಂಡಗಳ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ದುರ್ನಡತೆ ಮತ್ತು ಬಹು ಶಿಷ್ಟಾಚಾರ ಉಲ್ಲಂಘಿಸಿರುವ ಬಗ್ಗೆ ಐಸಿಸಿ ಉಲ್ಲೇಖಿಸಲಾಗಿದೆ. ಒಂದೊಮ್ಮೆ ಪಾಕ್ ಮುಂದಿನ ಸೂಪರ್ 4 ಹಂತದಲ್ಲಿಯೂ ಇದೇ ರೀತಿಯ ತಪ್ಪೆಸಗಿದರೆ ತಂಡ ದಂಡಕ್ಕೆ ಗುರಿಯಾಗುವ ಸಾಧ್ಯತೆಯೂ ಇದೆ.
ಪಿಸಿಬಿ ವಿರುದ್ಧ ಭ್ರಷ್ಟಚಾರದ ಆರೋಪ!
ಪ್ರಸ್ತುತ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯಲ್ಲಿ ಹ್ಯಾಂಡ್ ಶೇಕ್ ವಿವಾದಿಂದ ಭಾರಿ ಮುಜುಗರ ಅನುಭವಿಸಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ಇದೀಗ ಭ್ರಷ್ಟಚಾರದ ಆರೋಪ ಕೇಳಿ ಬಂದಿದೆ. ಪಾಕ್ ಮಾಜಿ ಆಟಗಾರ ಅತಿಕ್ ಉಝ್ ಝಮಾನ್ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿರುದ್ಧ ಭ್ರಷ್ಟಚಾರದ ಆರೋಪ ಮಾಡಿದ್ದಾರೆ.
"ಕಳಪೆ ಗುಣಮಟ್ಟದ ಕಿಟ್‌ನಿಂದಾಗಿ ಪಾಕಿಸ್ತಾನ ಆಟಗಾರರು ಬೆವರುತ್ತಿದ್ದರು ಆದರೆ, ಎದುರಾಳಿ ತಂಡಗಳ ಆಟಗಾರರು ಉತ್ತಮ ಗುಣಮಟ್ಟದ ಜೆರ್ಸಿಗಳನ್ನು ಧರಿಸಿದ್ದರು ಹಾಗೂ ಇದು ಬಹುಬೇಗ ಒಣಗುತ್ತದೆ. ವೃತ್ತಿಪರ ಕಿಟ್ ತಯಾರು ಮಾಡುವವರಿಗೆ ಟೆಂಡರ್ ನೀಡದೆ, ಸ್ನೇಹಿತರಿಗೆ ಟೆಂಡರ್ ನೀಡದರೆ ಈ ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಬೆವರಿಗಿಂತ ಭ್ರಷ್ಟಾಚಾರವೇ ಹೆಚ್ಚು ತೊಟ್ಟಿಕ್ಕುತ್ತಿದೆ," ಎಂದು ಝಮಾನ್ ಎಕ್ಸ್ ಖಾತೆಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ Asia Cup 2025: ಶ್ರೀಲಂಕಾ ವಿರುದ್ಧ ಸತತ 5 ಸಿಕ್ಸರ್ ಬಾರಿಸಿದ ಮೊಹಮ್ಮದ್ ನಬಿ! ವಿಡಿಯೊ