Asia Cup 2025: ಶ್ರೀಲಂಕಾ ವಿರುದ್ಧ ಸತತ 5 ಸಿಕ್ಸರ್ ಬಾರಿಸಿದ ಮೊಹಮ್ಮದ್ ನಬಿ! ವಿಡಿಯೊ
ಶ್ರೀಲಂಕಾ ವಿರುದ್ಧ 2025ರ ಏಷ್ಯಾ ಕಪ್ ಟೂರ್ನಿಯ ಬಿ ಗುಂಪಿನ ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ಆಲ್‌ರೌಂಡರ್ ಮೊಹಮ್ಮದ್ ನಬಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಅವರು ಕೊನೆಯ ಓವರ್‌ನಲ್ಲಿ ದುನಿತ್ ವೆಲ್ಲಾಳಗೆ ಅವರಿಗೆ ಸತತ ಐದು ಸಿಕ್ಸರ್ ಅನ್ನು ಬಾರಿಸಿದರು. ಆ ಮೂಲಕ ಆಫ್ಘನ್ 169 ರನ್ ಕಲೆ ಹಾಕಲು ನೆರವು ನೀಡಿದರು.

ಸತತ ಐದು ಎಸೆತಗಳಲ್ಲಿ ಸಿಕ್ಸರ್ ಬಾರಿಸಿದ ಮೊಹಮ್ಮದ್ ನಬಿ. -

ಅಬುದಾಬಿ: ಶ್ರೀಲಂಕಾ ವಿರುದ್ದ 2025ರ ಏಷ್ಯಾ ಕಪ್ (Asia Cup 2025) ಟೂರ್ನಿಯ ಪಂದ್ಯದ ಕೊನೆಯ ಓವರ್‌ನಲ್ಲಿ ಅಫ್ಘಾನಿಸ್ತಾನ ತಂಡದ ಆಲ್‌ರೌಂಡರ್ ಮೊಹಮ್ಮದ್ ನಬಿ (Mohammad Nabi) ಸ್ಪೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಿದರು. ಅವರು ಕೊನೆಯ ಓವರ್‌ನಲ್ಲಿ ಐದು ಸಿಕ್ಸರ್ ಬಾರಿಸುವ ಮೂಲಕ ಕಡಿಮೆ ಮೊತ್ತಕ್ಕೆ ಸೀಮಿತವಾಗುತ್ತಿದ್ದ ತಂಡದ ಮೊತ್ತವನ್ನು ಏರಿಸಿದರು. ಕೊನೆಯ ಓವರ್‌ನಲ್ಲಿ ಬೌಲ್ ಮಾಡಲು ಬಂದ ದುನಿತ್ ವೆಲ್ಲಾಳಗೆ (Dunith Wellalage) ಆರಂಭಿಕ ಮೂರು ಎಸೆತದಲ್ಲಿ ನಬಿ ಸಿಕ್ಸರ್ ಬಾರಿಸಿದರು. ನಂತರ ನೋಬಾಲ್ ಹಾಕಿದರು. ಬಳಿಕ 4 ಮತ್ತು 5ನೇ ಎಸೆತಗಳಲ್ಲಿ ಸಿಕ್ಸರ್ ಅನ್ನು ಬಾರಿಸಿದರು. ಆರನೇ ಎಸೆತದಲ್ಲಿ ಸಿಕ್ಸರ್ ಬಾರಿಸಲು ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ. ಒಂದು ರನ್ ಗಳಿಸಿ ಎರಡನೇ ರನ್‌ಗೆ ಪ್ರಯತ್ನಿಸಲು ಮುಂದಾಗಿ ರನ್‌ಔಟ್ ಆದರು.
ಶೇಖ್ ಝಾಹೇದ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಆಫ್ಘನ್ ತಂಡದ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಆ ಮೂಲಕ 17.1 ಓವರ್‌ನಲ್ಲಿ ಆಫ್ಘನ್ ತಂಡ 114 ರನ್‌ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆ ಮೂಲಕ ಈ ಪಂದ್ಯದಲ್ಲಿ ಶ್ರೀಲಂಕಾ ತಂಡ ಮೈಲುಗೈ ಸಾಧಿಸಿತ್ತು. ಕೊನೆಯ 17 ಎಸೆತಗಳು ಮಾತ್ರ ಬಾಕಿ ಇತ್ತು. ಆದರೆ, ಮೊಹಮ್ಮದ್ ನಬಿ ಕೊನೆಯ ಮೂರು ಓವರ್‌ಗಳಲ್ಲಿ ಅಬ್ಬರಿಸಿದರು. ಅವರು ಕೇವಲ 22 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 3 ಬೌಂಡರಿಗಳೊಂದಿಗೆ 60 ರನ್ ಗಳಿಸಿದರು. ಆ ಮೂಲಕ ಆಫ್ಘನ್ ತಂಡ ತನ್ನ 20 ಓವರ್‌ಗಳಿಗೆ 169 ರನ್‌ಗಳನ್ನು ಕಲೆ ಹಾಕಿತು ಹಾಗೂ ಶ್ರೀಲಂಕಾ ತಂಡಕ್ಕೆ 170 ರನ್‌ಗಳ ಗುರಿಯನ್ನು ನೀಡಿತು.
Asia Cup 2025: ಈ ಬಾರಿ ಪ್ರಶಸ್ತಿ ಗೆಲ್ಲುವ ತಮ್ಮ ನೆಚ್ಚಿನ ತಂಡವನ್ನು ಆರಿಸಿದ ಜೋನಾಥನ್ ಟ್ರಾಟ್!
ಕೊನೆಯ ಓವರ್‌ವರೆಗೂ ಆಫ್ಘನ್ ತಂಡ 140ರ ಆಸುಪಾಸಿನಲ್ಲಿ ಶ್ರೀಲಂಕಾ ತಂಡಕ್ಕೆ ಗುರಿಯನ್ನು ನೀಡಬಹುದು ಎಂದು ಭಾವಿಸಲಾಗಿತ್ತು. ಆದರೆ, ಕೊನೆಯ ಓವರ್‌ನಲ್ಲಿ ಮೊಹಮ್ಮದ್ ನಬಿ ಪಂದ್ಯದ ದಿಕ್ಕನ್ನು ಬದಲಿಸಿದರು. ಕೊನೆಯ ಓವರ್‌ನಲ್ಲಿ ದುನಿತ್ ವೆಲ್ಲಾಳಗೆ ಬೌಲಿಂಗ್‌ನಲ್ಲಿ ಮೊಹಮ್ಮದ್ ನಬಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಉಗ್ರ ರೂಪ ತಾಳಿಸಿದರು. ಅವರು ಆರಂಭಿಕ ಐದು ಎಸೆತಗಳಲ್ಲಿ ಸಿಕ್ಸರ್ ಅನ್ನು ಬಾರಿಸಿದರು. ಆ ಮೂಲಕ ಲಂಕಾ ಬೌಲರ್‌ಗೆ ನಡುಕ ಹುಟ್ಟಿಸಿದರು. ಅಲ್ಲದೆ ಕಡಿಮೆ ಮೊತ್ತಕ್ಕೆ ಸೀಮಿತವಾಗುತ್ತಿದ್ದ ಆಫ್ಘನ್ ತಂಡ ದೊಡ್ಡ ಮೊತ್ತವನ್ನು ಕಲೆ ಹಾಕಲು ಸಾಧ್ಯವಾಯಿತು.
Take a minute to let that ininings sink in 🔥🔥#SLvAFG #DPWorldAsiaCup2025 #ACC pic.twitter.com/JhZVlOKxOk
— AsianCricketCouncil (@ACCMedia1) September 18, 2025
4 ವಿಕೆಟ್ ಪಡೆದ ನುವಾನ್ ತುಷಾರ್
ಶ್ರೀಲಂಕಾ ತಂಡದ ಪರ ಪವರ್‌ಪ್ಲೇನಲ್ಲಿ ನುವಾನ್ ತುಷಾರ ಅವರು ಮಾರಕ ಬೌಲಿಂಗ್ ದಾಳಿ ನಡೆಸಿದರು. ಅವರು ಅವರು ಅಗ್ರ ಕ್ರಮಾಂಕದ ಮೂವರು ಸ್ಟಾರ್ ಬ್ಯಾಟ್ಸ್‌ಮನ್‌ಗಳು ಹೊಸ ಚೆಂಡಿನಲ್ಲಿ ಔಟ್ ಮಾಡಿದರು. ನಂತರ ಡೆತ್ ಓವರ್‌ನಲ್ಲಿ ರಶೀದ್ ಖಾನ್ ಅವರನ್ನು ಔಟ್ ಮಾಡಿದರು. ಅಂತಿಮವಾಗಿ ನುವಾನ್ ತುಷಾರ ಅವರು ಬೌಲ್ ಮಾಡಿದ ನಾಲ್ಕು ಓವರ್‌ಗಳಲ್ಲಿ 18 ರನ್ ನೀಡಿ 4 ವಿಕೆಟ್‌ಗಳನ್ನು ಕಬಳಿಸಿದರು.
Mohammad Nabi hits 5 Consecutive sixes in last over.🥶🔥 #AFGvSL pic.twitter.com/XM3JuU8FFg
— U' (@toxifyy18) September 18, 2025
ಶ್ರೀಲಂಕಾ ಪ್ಲೇಯಿಂಗ್ XI: ಪತುಮ್ ನಿಸಾಂಕ, ಕುಸಾಲ್ ಮೆಂಡಿಸ್ (ವಿಕೀ), ಕಮಿಲ್ ಮಿಷಾರ, ಕುಸಾಲ್ ಪೆರೆರಾ, ಚರಿತಾ ಅಸಲಂಕಾ (ನಾಯಕ), ದಸೂನ್ ಶಣಕ, ಕಮಿಂದು ಮೆಂಡಿಸ್, ವಾನಿಂದು ಹಸರಂಗ, ದುನಿತ್ ವೆಲ್ಲಾಳಗೆ, ದುಸ್ಮಾಂತ ಚಮೀರಾ, ನುವಾನ್ ತುಷಾರ
ಅಫ್ಘಾನಿಸ್ತಾನ ಪ್ಲೇಯಿಂಗ್ XI: ಸೆಡಿಕುಲ್ಲಾ ಅಟಲ್, ರೆಹಮಾನುಲ್ಲಾ ಗುರ್ಬಾಜ್ (ವಿ.ಕೀ), ಇಬ್ರಾಹಿಂ ಝರ್ಡಾನ್, ಮೊಹಮ್ಮದ್ ನಬಿ, ದಾರ್ವಿಷ್ ರಸೂಲಿ, ಅಝಮತ್‌ವುಲ್ಲಾ ಓಮರ್ಜಾಯ್, ಕರಿಮ್ ಜನತ್, ರಶೀದ್ ಖಾನ್ (ನಾಯಕ), ಮುಜೀಬ್ ಉರ್ ರೆಹಮಾನ್, ನೂರ್ ಅಹ್ಮದ್, ಫಝಲಕ್ ಫಾರೂಕಿ