ಲಂಡನ್, ಜೂ.11: ಒಂದೆಡೆ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳು ಕಾತುರದಿಂದ ಕಾಯುತ್ತಿರ ಫಿಫಾ ವಿಶ್ವಕಪ್‌ಗೆ ಕ್ಷಣಗಣನೆ ಆರಂಭವಾಗಿದೆ. ಇದೇ ವೇಳೆ ಕ್ರಿಕೆಟ್ ಅಭಿಮಾನಿಗಳು ಕೂಡ ಮಹಿಳಾ ಟಿ20 ವಿಶ್ವಕಪ್(Women’s T20 World Cup 2026)ಗೆ ಕಾತರರಾಗಿದ್ದಾರೆ. ಫಿಫಾ ವಿಶ್ವಕಪ್-ಜೂನ್ 11ರಿಂದ ಆರಂಭವಾಗುತ್ತಿದೆ. ಟಿ20 ವಿಶ್ವಕಪ್ ಜೂ.12ರಿಂದ ಆರಂಭವಾಗಲಿದೆ.
ಜೂನ್ 12 ರಿಂದ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿಈ ಬಾರಿ ತಂಡಗಳ ಸಂಖ್ಯೆ 10 ರಿಂದ 12 ಕ್ಕೆ ಏರಿಕೆಯಾಗಿದ್ದು, ನೆದರ್‌ಲ್ಯಾಂಡ್ಸ್ ತಂಡವು ತನ್ನ ಚೊಚ್ಚಲ ಪ್ರವೇಶವನ್ನು ಮಾಡಿದೆ. ಇಂಗ್ಲೆಂಡ್ ಈ ಬಾರಿ ಟೂರ್ನಿಯ ಆತಿಥ್ಯವಹಿಸಿಕೊಂಡಿದೆ. ಹಾಲಿ ಚಾಂಪಿಯನ್ ನ್ಯೂಜಿಲೆಂಡ್ ತಂಡವು ತನ್ನ ಕಿರೀಟವನ್ನು ಉಳಿಸಿಕೊಳ್ಳಲು ಉತ್ಸುಕವಾಗಿದೆ. ಟೂರ್ನಿಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾದ ಆಸ್ಟ್ರೇಲಿಯಾ, ತನ್ನ ದಾಖಲೆಯ ಏಳನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಭಾರತ ಚೊಚ್ಚಲ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದೆ.
2026ರ ಫಿಫಾ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಕೀರಾ, ಕೇಟಿ ಪೆರಿ, ನೋರಾ ಫತೇಹಿ!
ಮೊದಲ ಆವೃತ್ತಿ: 2009 (ಇಂಗ್ಲೆಂಡ್ ಚಾಂಪಿಯನ್)
ಕೊನೆಯ ಆವೃತ್ತಿ: 2024 (ನ್ಯೂಜಿಲೆಂಡ್ ಚಾಂಪಿಯನ್)
ಒಟ್ಟು ಆವೃತ್ತಿಗಳು: 10
ಹೆಚ್ಚು ಪ್ರಶಸ್ತಿಗಳು: ಆಸ್ಟ್ರೇಲಿಯಾ (2010, 2012, 2014, 2018, 2020, 2023)
ಈ ಬಾರಿಯ ತಂಡಗಳು
ಈ ಬಾರಿ ಹನ್ನೆರಡು ತಂಡಗಳು ಭಾಗವಹಿಸಲಿವೆ. ಅವುಗಳೆಂದರೆ ಇಂಗ್ಲೆಂಡ್, ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್, ಐರ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್.
2026ರ ಮಹಿಳಾ ಟಿ20 ವಿಶ್ವಕಪ್‌ನ ಸ್ವರೂಪ
ಜೂನ್ 12 ರಿಂದ ಜುಲೈ 5 ರವರೆಗೆ ಒಟ್ಟು 33 ಪಂದ್ಯಗಳು ನಡೆಯಲಿವೆ. 12 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಮತ್ತು ಬಿ. ಪ್ರತಿ ಗುಂಪಿನಲ್ಲಿ ಆರು ತಂಡಗಳು. ತಂಡದ ಒಂದು ಗೆಲುವಿಗೆ ಎರಡು ಅಂಕಗಳನ್ನು ಮತ್ತು ಫಲಿತಾಂಶವಿಲ್ಲದ ಪಂದ್ಯಕ್ಕೆ ತಲಾ ಒಂದು ಅಂಕವನ್ನು ಗಳಿಸುತ್ತವೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಮುನ್ನಡೆಯುತ್ತವೆ. ಗ್ರೂಪ್ ಎ ವಿಜೇತರು ಗ್ರೂಪ್ ಬಿ ಯಿಂದ ಎರಡನೇ ಸ್ಥಾನ ಪಡೆದ ತಂಡವನ್ನು ಎದುರಿಸುತ್ತಾರೆ. ಆದರೆ ಗ್ರೂಪ್ ಬಿ ವಿಜೇತರು ಗ್ರೂಪ್ ಎ ಯಿಂದ ರನ್ನರ್-ಅಪ್ ತಂಡವನ್ನು ಎದುರಿಸುತ್ತಾರೆ.
ಪಂದ್ಯಗಳ ಸ್ಥಳಗಳು
ಬರ್ಮಿಂಗ್ಹ್ಯಾಮ್ (ಎಡ್ಜ್‌ಬಾಸ್ಟನ್)
ಬ್ರಿಸ್ಟಲ್ (ಕೌಂಟಿ ಮೈದಾನ)
ಲಂಡನ್ (ಲಾರ್ಡ್ಸ್, ದಿ ಓವಲ್)
ಲೀಡ್ಸ್ (ಹೆಡಿಂಗ್ಲಿ)
ಮ್ಯಾಂಚೆಸ್ಟರ್ (ಓಲ್ಡ್ ಟ್ರಾಫರ್ಡ್)
ಸೌತಾಂಪ್ಟನ್ (ದಿ ರೋಸ್ ಬೌಲ್)
ತಂಡಗಳು
ಆಸ್ಟ್ರೇಲಿಯಾ: ಸೋಫಿ ಮೊಲಿನೆಕ್ಸ್ (ನಾಯಕಿ), ನಿಕೋಲಾ ಕ್ಯಾರಿ, ಆಶ್ಲೀ ಗಾರ್ಡ್ನರ್, ಕಿಮ್ ಗಾರ್ತ್, ಲೂಸಿ ಹ್ಯಾಮಿಲ್ಟನ್, ಗ್ರೇಸ್ ಹ್ಯಾರಿಸ್, ಅಲಾನಾ ಕಿಂಗ್, ಫೋಬೆ ಲಿಚ್‌ಫೀಲ್ಡ್, ತಹ್ಲಿಯಾ ಮೆಕ್‌ಗ್ರಾತ್, ಬೆತ್ ಮೂನಿ, ಎಲ್ಲಿಸ್ ಪೆರ್ರಿ, ಮೇಗನ್ ಶುಟ್, ಅನ್ನಾಬೆಲ್ ಸದರ್ಲ್ಯಾಂಡ್, ಜಾರ್ಜಿಯಾ ವೋಲ್, ಜಾರ್ಜಿಯಾ ವೇರ್‌ಹ್ಯಾಮ್.
ಬಾಂಗ್ಲಾದೇಶ: ನಿಗರ್ ಸುಲ್ತಾನ ಜೋಟಿ (ನಾಯಕಿ), ನಹಿದಾ ಅಕ್ತರ್, ಶರ್ಮಿನ್ ಅಕ್ಟರ್ ಸುಪ್ತಾ, ಸೋಭಾನಾ ಮೊಸ್ತರಿ, ಶೋರ್ನಾ ಅಕ್ಟರ್, ರಿತು ಮೋನಿ, ರಬೇಯಾ ಖಾನ್, ಫಾಹಿಮಾ ಖಾತುನ್, ಫರಿಹಾ ಇಸ್ಲಾಂ ತ್ರಿಸ್ನಾ, ಮಾರುಫಾ ಅಕ್ಟರ್, ಶಂಜಿದಾ ಅಖ್ತರ್ ಮಘಲಾ, ಸುಲ್ತಾನಾ ಖಾತುನ್, ದಿಲಾರಾ ಅಕ್ಟರ್, ತಜ್ರಿಯಾ ನೆ ಫೆರ್ಡ್‌ರಸ್.
ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ರಿಚಾ ಘೋಷ್, ಶ್ರೀ ಚರಣಿ, ಯಾಸ್ತಿಕಾ ಭಾಟಿಯಾ, ನಂದನಿ ಶರ್ಮಾ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್, ಕ್ರಾಂತಿ ಗೌಡ್, ಶ್ರೇಯಾಂಕ ಪಾಟೀಲ.
ನೆದರ್‌ಲ್ಯಾಂಡ್ಸ್: ಬಾಬೆಟ್ಟೆ ಡಿ ಲೀಡೆ (ನಾಯಕಿ), ಕ್ಯಾರೊಲಿನ್ ಡಿ ಲ್ಯಾಂಗ್, ಫ್ರೆಡೆರಿಕ್ ಓವರ್‌ಡಿಜ್ಕ್, ಹನ್ನಾ ಲ್ಯಾಂಡ್‌ಹೀರ್, ಹೀದರ್ ಸೀಗರ್ಸ್, ಐರಿಸ್ ಜ್ವಿಲ್ಲಿಂಗ್, ಇಸಾಬೆಲ್ ವ್ಯಾನ್ ಡೆರ್ ವೊನಿಂಗ್, ಲಾರಾ ಲೀಮ್‌ಹುಯಿಸ್, ಮಿರ್ತೆ ವ್ಯಾನ್ ಡೆನ್ ರಾಡ್, ಫೆಬ್ ಮೊಲ್ಕೆನ್‌ಬೋರ್, ರಾಬಿನೆ ಕ್ವೆರ್‌ಹುರ್‌ಕೆ, ರಾಬಿನೆಯಾ, ಸ್ಯಾನ್‌ಲಿ ಸೀಗರ್ಸ್, ಸ್ಟೆರ್ರೆ ಕಾಲಿಸ್.
ಪಾಕಿಸ್ತಾನ: ಫಾತಿಮಾ ಸನಾ (ನಾಯಕಿ), ಗುಲ್ ಫಿರೋಜಾ, ಆಯೇಶಾ ಜಾಫರ್, ಇರಾಮ್ ಜಾವೇದ್, ಐಮನ್ ಫಾತಿಮಾ, ಅಲಿಯಾ ರಿಯಾಜ್, ನತಾಲಿಯಾ ಪರ್ವೈಜ್, ಸೈರಾ ಜಬೀನ್, ಮುನೀಬಾ ಅಲಿ, ತುಬಾ ಹಸನ್, ರಮೀನ್ ಶಮೀಮ್, ಸಾದಿಯಾ ಇಕ್ಬಾಲ್, ನಶ್ರಾ ಸಂಧು, ಡಯಾನಾ ಬೇಗ್, ತಸ್ಮಿಯಾ ರುಬಾಬ್.
ದಕ್ಷಿಣ ಆಫ್ರಿಕಾ: ಲಾರಾ ವೊಲ್ವಾರ್ಡ್ಟ್ (ನಾಯಕಿ), ತಜ್ಮಿನ್ ಬ್ರಿಟ್ಸ್, ನಡಿನ್ ಡಿ ಕ್ಲರ್ಕ್, ಆನ್ನೆರಿ ಡೆರ್ಕ್ಸೆನ್, ಶಬ್ನಿಮ್ ಇಸ್ಮಾಯಿಲ್, ಸಿನಾಲೊ ಜಫ್ತಾ, ಮರಿಜಾನ್ನೆ ಕಪ್, ಅಯಾಬೊಂಗಾ ಖಾಕಾ, ಸುನೆ ಲೂಸ್, ಕರಾಬೊ ಮೆಸೊ, ನಾನ್‌ಕುಲುಲೆಕೊ ಮ್ಲಾಬಾ, ಕೈಲಾ ರೆಕ್ನೆಕ್, ತುಮಿ ಸೆಖುಖುನೆ, ಕ್ಲೋಯ್ ಟ್ರಯಾನ್, ಡೇನ್ ವ್ಯಾನ್ ನೀಕೆರ್ಕ್.
ಇಂಗ್ಲೆಂಡ್: ನ್ಯಾಟ್ ಸಿವರ್-ಬ್ರಂಟ್ (ನಾಯಕಿ), ಲಾರೆನ್ ಬೆಲ್, ಆಲಿಸ್ ಕ್ಯಾಪ್ಸೆ, ಟಿಲ್ಲಿ ಕಾರ್ಟೀನ್-ಕೋಲ್ಮನ್, ಚಾರ್ಲಿ ಡೀನ್, ಸೋಫಿಯಾ ಡಂಕ್ಲಿ, ಸೋಫಿ ಎಕ್ಲೆಸ್ಟೋನ್, ಲಾರೆನ್ ಫೈಲರ್, ಡ್ಯಾನಿ ಗಿಬ್ಸನ್, ಆಮಿ ಜೋನ್ಸ್, ಫ್ರೇಯಾ ಕೆಂಪ್, ಹೀದರ್ ನೈಟ್, ಲಿನ್ಸೆ ಸ್ಮಿತ್, ಇಸ್ಸಿ ವಾಂಗ್, ಡ್ಯಾನಿ ವ್ಯಾಟ್-ಹಾಡ್ಜ್.
ಐರ್ಲೆಂಡ್: ಗ್ಯಾಬಿ ಲೂಯಿಸ್ (ನಾಯಕಿ), ಅವಾ ಕ್ಯಾನಿಂಗ್, ಕ್ರಿಸ್ಟಿನಾ ಕೌಲ್ಟರ್ ರೀಲಿ, ಅಲಾನಾ ಡಾಲ್ಜೆಲ್, ಜಾರ್ಜಿನಾ ಡೆಂಪ್ಸೆ, ಆಮಿ ಹಂಟರ್, ಅರ್ಲೀನ್ ಕೆಲ್ಲಿ, ಲೂಯಿಸ್ ಲಿಟಲ್, ಐಮೀ ಮ್ಯಾಗೈರ್, ಲಾರಾ ಮೆಕ್‌ಬ್ರೈಡ್, ಕಾರಾ ಮುರ್ರೆ, ಲಿಯಾ ಪಾಲ್, ಓರ್ಲಾ ಪ್ರೆಂಡರ್‌ಗ್ಯಾಸ್ಟ್, ರೆಬೆಕ್ಕಾ ಸ್ಟೋಕೆಲ್, ಆಲಿಸ್ ಟೆಕ್ಟರ್.
ನ್ಯೂಜಿಲೆಂಡ್: ಮೆಲೀ ಕೆರ್ (ನಾಯಕಿ), ಸುಜೀ ಬೇಟ್ಸ್, ಸೋಫಿ ಡಿವೈನ್, ಫ್ಲೋರಾ ಡೆವನ್‌ಶೈರ್, ಇಜ್ಜಿ ಗೇಜ್, ಮ್ಯಾಡಿ ಗ್ರೀನ್, ಬ್ರೂಕ್ ಹ್ಯಾಲಿಡೇ, ಬ್ರೀ ಇಲ್ಲಿಂಗ್, ಪಾಲಿ ಇಂಗ್ಲಿಸ್, ಜೆಸ್ ಕೆರ್, ರೋಸ್ಮರಿ ಮೈರ್, ನೆನ್ಸಿ ಪಟೇಲ್, ಜಾರ್ಜಿಯಾ ಪ್ಲಿಮ್ಮರ್, ಇಜ್ಜಿ ಶಾರ್ಪ್, ಲಿಯಾ ತಹುಹು.
T20 World Cup: ಭಾರತೀಯ ವನಿತೆಯರಿಗೀಗ ಟಿ20 ವಿಶ್ವಕಪ್ ಗೆಲ್ಲುವ ಛಲ
ಸ್ಕಾಟ್ಲೆಂಡ್: ಕ್ಯಾಥರಿನ್ ಬ್ರೈಸ್ (ನಾಯಕಿ), ಕ್ಲೋಯ್ ಅಬೆಲ್, ಒಲಿವಿಯಾ ಬೆಲ್, ಸಾರಾ ಬ್ರೈಸ್, ಡಾರ್ಸಿ ಕಾರ್ಟರ್, ಪ್ರಿಯಾನಾಜ್ ಚಟರ್ಜಿ, ಗೇಬ್ರಿಯೆಲಾ ಫಾಂಟೆನ್ಲಾ, ಕ್ಯಾಥರೀನ್ ಫ್ರೇಸರ್, ಕಿರ್ಸ್ಟಿ ಗಾರ್ಡನ್, ಐಲ್ಸಾ ಲಿಸ್ಟರ್, ಮೈಸಿ ಮಸೇರಾ, ಅಬ್ತಾಹಾ ಮಕ್ಸೂದ್, ಮೇಗನ್ ಮೆಕ್‌ಕಾಲ್, ರಾಚೆಲ್ ಸ್ಲೇಟರ್, ಪಿಪ್ಪಾ ಸ್ಪ್ರೌಲ್.
ಶ್ರೀಲಂಕಾ: ಚಾಮರಿ ಅಥಾಪತ್ತು (ನಾಯಕಿ), ಹಾಸಿನಿ ಪೆರೇರಾ, ವಿಶ್ಮಿ ಗುಣರತ್ನೆ, ಹರ್ಷಿತಾ ಸಮರವಿಕ್ರಮ, ಇಮೇಶಾ ದುಲಾನಿ, ನೀಲಾಕ್ಷಿಕಾ ಸಿಲ್ವಾ, ಕವೀಶಾ ದಿಲ್ಹಾರಿ, ಹನ್ಸಿಮಾ ಕರುಣಾರತ್ನೆ, ಕೌಶಿನಿ ನುತ್ಯಂಗನ, ಸುಗಂದಿಕಾ ದಾಸನಾಯಕ, ನಿಮಾಶಾ ಮದುಶಾನಿ, ಕಾವ್ಯಾ ಕವಿಂದಿ, ಮಾಲ್ಕಿ ಮಾದರ, ಮಿಥಾಲಿ ಅಯೋಧ್ಯಾ, ಚೇತನಾ ವಿಮುಕ್ತಿ.
ವೆಸ್ಟ್ ಇಂಡೀಸ್: ಹೇಲಿ ಮ್ಯಾಥ್ಯೂಸ್ (ಸಿ), ಚಿನೆಲ್ಲೆ ಹೆನ್ರಿ, ಡಿಯಾಂಡ್ರಾ ಡಾಟಿನ್, ಸ್ಟಾಫನಿ ಟೇಲರ್, ಅಫಿ ಫ್ಲೆಚರ್, ಆಲಿಯಾ ಅಲೀನ್, ಶೆಮೈನ್ ಕ್ಯಾಂಪ್‌ಬೆಲ್ಲೆ, ಅಶ್ಮಿನಿ ಮುನಿಸರ್, ಕರಿಷ್ಮಾ ರಾಮ್‌ಹರಾಕ್, ಜನ್ನಿಲಿಯಾ ಗ್ಲಾಸ್ಗೋ, ಜಹಜಾರಾ ಕ್ಲಾಕ್ಸ್ಟನ್, ಕಿಯಾನಾ ಜೋಸೆಫ್, ಜೈದಾ ಜೇಮ್ಸ್, ಮ್ಯಾಂಡಿ ಮಾಂಗ್ರು, ಶಾವ್ನಿಶಾ ಹೆಕ್ಟರ್.