ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs AUS 5th T20I: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

ನಾಯಕ ಸೂರ್ಯಕುಮಾರ್‌ ಮತ್ತು ಉಪನಾಯಕ ಶುಭಮನ್ ಗಿಲ್‌ಗೆ ಸರಣಿಯಲ್ಲಿ ಇದುವರೆಗೂ ಕನಿಷ್ಠ ಒಂದು ಅರ್ಧಶತಕ ಬಾರಿಸಲು ಸಾಧ್ಯವಾಗಿಲ್ಲ. ಮುಂದಿನ ವರ್ಷ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ನಿಟ್ಟಿನಲ್ಲಿ ಉಭಯ ಆಟಗಾರರು ಫಾರ್ಮ್‌ ಕಂಡುಕೊಳ್ಳಲೇ ಬೇಕಿದೆ. ಗಿಲ್ ಏಳು ಇನ್ನಿಂಗ್ಸ್‌ಗಳಲ್ಲಿ ಅರ್ಧಶತಕ ಗಳಿಸಿಲ್ಲ. ನಾಲ್ಕನೇ ಟಿ20ಯಲ್ಲಿ ಗಳಿಸಿದ್ದ 46 ರನ್‌ ಅತ್ಯಧಿಕ ಗಳಿಕೆಯಾಗಿದೆ.

ಟೀಮ್‌ ಇಂಡಿಯಾ ನಾಯಕ ಸೂರ್ಯಕುಮಾರ್‌ ಮತ್ತು ಮಿಚೆಲ್‌ ಮಾರ್ಷ್.

ಬ್ರಿಸ್ಬೇನ್‌: ಮೂರು ಮತ್ತು ನಾಲ್ಕನೇ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಭಾರತೀಯ ತಂಡವು ಶನಿವಾರ ನಡೆಯುವ 5ನೇ(IND vs AUS 5th T20I) ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಆಸ್ಟ್ರೆಲಿಯಾವನ್ನು ಬಗ್ಗುಬಡಿದು ಸರಣಿ ಗೆಲ್ಲುವ ಉತ್ಸಾಹದಲ್ಲಿದೆ. ಅಪಾಯಕಾರಿ ಜೋಶ್‌ ಹ್ಯಾಜಲ್‌ವುಡ್‌, ಟ್ರಾವಿಸ್‌ ಹೆಡ್‌ ಅವರ ಅನುಪಸ್ಥಿತಿಯ ಲಾಭದ ಜತೆಗೆ ಬ್ಯಾಟರ್‌ಗಳು ಉತ್ತಮ ನಿರ್ವಹಣೆ ನೀಡಿದರೆ ಭಾರತ ಗೆಲುವು ದಾಖಲಿಸುವ ಸಾಧ್ಯತೆ ಇದೆ. ಅತ್ತ ಆಸ್ಟ್ರೇಲಿಯಾ(India vs Australia) ಈ ಪಂದ್ಯವನ್ನು ಗೆದ್ದು ಸರಣಿ ಸಮಬಲಕ್ಕೆ ತರುವ ಇರಾದೆಯಲ್ಲಿದೆ.

ಭಾರತಕ್ಕೆ ಬ್ಯಾಟಿಂಗ್‌ನದ್ದೇ ಚಿಂತೆ

ಕಳೆದ ಮೂರು ಪಂದ್ಯಗಳನ್ನು ಗಮನಿಸಿದರೆ ಭಾರತಕ್ಕೆ ಹಿನ್ನಡೆಯಾದದ್ದು ಬ್ಯಾಟಿಂಗ್‌ ವಿಭಾಗದಲ್ಲಿಯೇ. ಬೌಲಿಂಗ್‌ ವಿಭಾಗ ಬಲಿಷ್ಠವಾಗಿದೆ. ಅಕ್ಷರ್‌ ಪಟೇಲ್‌, ಅರ್ಶ್‌ದೀಪ್‌ ಸಿಂಗ್‌, ವರುಣ್‌ ಚಕ್ರವರ್ತಿ, ಶಿವಂ ದುಬೆ, ವಾಷಿಂಗ್ಟನ್‌ ಸುಂದರ್‌ ಉತ್ತಮ ಲಯದಲ್ಲಿದ್ದಾರೆ. ಅವರ ಅಮೋಘ ಬೌಲಿಂಗ್‌ನಿಂದಾಗಿಯೇ ಕಳೆದ ಪಂದ್ಯದಲ್ಲಿ 167 ರನ್‌ಗಳನ್ನು ಹಿಡಿದು ನಿಲ್ಲಿಸಿ ತಂಡ 48 ರನ್‌ಗಳ ಗೆಲುವು ಸಾಧಿಸಿದ್ದು.

ನಾಯಕ ಸೂರ್ಯಕುಮಾರ್‌ ಮತ್ತು ಉಪನಾಯಕ ಶುಭಮನ್ ಗಿಲ್‌ಗೆ ಸರಣಿಯಲ್ಲಿ ಇದುವರೆಗೂ ಕನಿಷ್ಠ ಒಂದು ಅರ್ಧಶತಕ ಬಾರಿಸಲು ಸಾಧ್ಯವಾಗಿಲ್ಲ. ಮುಂದಿನ ವರ್ಷ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ನಿಟ್ಟಿನಲ್ಲಿ ಉಭಯ ಆಟಗಾರರು ಫಾರ್ಮ್‌ ಕಂಡುಕೊಳ್ಳಲೇ ಬೇಕಿದೆ. ಗಿಲ್ ಏಳು ಇನ್ನಿಂಗ್ಸ್‌ಗಳಲ್ಲಿ ಅರ್ಧಶತಕ ಗಳಿಸಿಲ್ಲ. ನಾಲ್ಕನೇ ಟಿ20ಯಲ್ಲಿ ಗಳಿಸಿದ್ದ 46 ರನ್‌ ಅತ್ಯಧಿಕ ಗಳಿಕೆಯಾಗಿದೆ.

ಇದನ್ನೂ ಓದಿ IND vs AUS 5th T20I: ಭಾರತ-ಆಸೀಸ್‌ ಅಂತಿಮ ಟಿ20 ಪಂದ್ಯ ಯಾವಾಗ?

ತಿಲಕ್ ವರ್ಮಾ ಇನ್ನೂ ಲಯ ಕಂಡುಕೊಳ್ಳದ ಮತ್ತೊಬ್ಬ ಬ್ಯಾಟ್ಸ್‌ಮನ್. 0, 29 ಮತ್ತು 5 ರನ್ ಗಳಿಸಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್‌ ಬದಲಿಗೆ ಆಡಲಿಳಿದ ಜಿತೇಶ್ ಶರ್ಮಾ ಕೂಡ ಗಮನಾರ್ಹ ಪ್ರದರ್ಶನ ತೋರುವ ಅನಿವಾರ್ಯತೆ ಇದೆ.

ಆಸ್ಟ್ರೇಲಿಯಾ ತಂಡ ಜೋಶ್‌ ಹ್ಯಾಜಲ್‌ವುಡ್‌ ಅವರನ್ನು ಕಳೆದುಕೊಂಡಿರುವುದು ಬೌಲಿಂಗ್‌ ವಿಭಾಗ ಶಕ್ತಿಯೇ ಕುಂದಿ ಹೋದಂತಿದೆ. ಮುಂಬರುವ ಆಶ್ಯಸ್ ಟೆಸ್ಟ್ ಸರಣಿಯ ಭಾಗವಾಗಿ ಇವರಿಗೆ ವಿಶ್ರಾಂತಿ ನೀಡಿದೆ. ಅಪಾಯಕಾರಿ ಬ್ಯಾಟರ್‌ ಟ್ರಾವಿಸ್‌ ಹೆಡ್‌ ಅನುಪಸ್ಥಿತಿಯೂ ತಂಡಕ್ಕೆ ಹಿನ್ನಡೆ ತಂದಿದೆ. ತಂಡದಲ್ಲಿರುವ ಗ್ಲೆನ್‌ ಮ್ಯಾಕ್ಸ್‌ವೆಲ್‌, ಟಿಮ್‌ ಡೇವಿಡ್‌, ಮಾರ್ಕಸ್‌ ಸ್ಟೋಯನಿಸ್‌ ಔಟ್‌ ಆಫ್‌ ಫಾರ್ಮ್‌ನಲ್ಲಿದ್ದಾರೆ. ಇವರ ಪೈಕಿ ಒಬ್ಬರು ಸಿಡಿದು ನಿಂತರೂ ತಂಡ ಬೃಹತ್‌ ಮೊತ್ತ ದಾಖಲಿಸಲಿದೆ.

ಸಂಭಾವ್ಯ ತಂಡಗಳು

ಆಸ್ಟ್ರೇಲಿಯಾ: ಜೋಶ್ ಫಿಲಿಪ್, ಮ್ಯಾಥ್ಯೂ ಶಾರ್ಟ್, ಬೆನ್ ಮೆಕ್‌ಡರ್ಮೊಟ್, ಮಿಚೆಲ್ ಮಾರ್ಷ್ (ನಾಯಕ), ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್, ಕ್ಸೇವಿಯರ್ ಬಾರ್ಟ್ಲೆಟ್, ನಾಥನ್ ಎಲ್ಲಿಸ್, ಆಡಮ್ ಜಂಪಾ, ಮಿಚೆಲ್ ಓವನ್.

ಇದನ್ನೂ ಓದಿ Pratika Rawal: ಜಯ್ ಶಾ ಮಧ್ಯಪ್ರವೇಶ; ಪ್ರತೀಕಾ ರಾವಲ್‌ಗೆ ವಿಶ್ವಕಪ್ ವಿಜೇತ ಪದಕ ಶೀಘ್ರದಲ್ಲೇ ಹಸ್ತಾಂತರ

ಭಾರತ: ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಜಿತೇಶ್ ಶರ್ಮಾ (ವಿ.ಕೀ.), ರಿಂಕು ಸಿಂಗ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಜಸ್‌ಪ್ರೀತ್‌ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ.

ಪ್ರಸಾರ: ಸ್ಟಾರ್ ಸ್ಪೋರ್ಟ್ಸ್. ಲೈವ್ ಸ್ಟ್ರೀಮಿಂಗ್; ಜಿಯೋ ಹಾಟ್​ಸ್ಟಾರ್.

ಪಂದ್ಯ ಆರಂಭ: ಭಾರತೀಯ ಕಾಲಮಾನ ಮಧ್ಯಾಹ್ನ 1:45