India's Test Record At Lord's: ಲಾರ್ಡ್ಸ್‌ನಲ್ಲಿ ಮೂರೇ ಸಲ ಭಾರತ ಲಕ್ಕಿ
ಮೂರನೇ ಗೆಲುವು 2021ರಲ್ಲಿ ಕೊನೆಯ ಸಲ ಇಲ್ಲಿ ಆಡಿದಾಗ ಒಲಿದಿತ್ತು. ಕನ್ನಡಿಗ ಕೆ.ಎಲ್ ರಾಹುಲ್ ಅವರ ಶತಕ ಮತ್ತು ಮೊಹಮ್ಮದ್ ಸಿರಾಜ್ 8 ವಿಕೆಟ್ ಸಾಧನೆಯಿಂದ ಭಾರತ 151ರನ್ ಅಂತರದ ಗೆಲುವು ಸಾಧಿಸಿತ್ತು. ರಾಹುಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಅಂದಿನ ಪಂದ್ಯ ಆಡದ ಶುಭಮನ್ ಗಿಲ್ ಈ ಬಾರಿ ತಂಡದ ನಾಯಕನಾಗಿದ್ದಾರೆ.

ಲಂಡನ್: ಬರ್ಮಿಂಗ್‌ಹ್ಯಾಮ್ ಟೆಸ್ಟ್ ಪಂದ್ಯದಲ್ಲಿ 336 ರನ್ನುಗಳ ಬೊಂಬಾಟ್ ಐತಿಹಾಸಿಕ ಗೆಲುವು ಸಾಧಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಶುಭಮನ್ ಗಿಲ್(Shubman Gill) ಸಾರಥ್ಯದ ಯುವ ಭಾರತ ತಂಡ ಇದೀಗ ಲಾರ್ಡ್ಸ್ ಮೈದಾನದಲ್ಲಿ ಮೂರನೇ ಪಂದ್ಯವನ್ನಾಡಲು ತಯಾರಿ ಆರಂಭಿಸಿದೆ. ಇತ್ತಂಡಗಳ ನಡುವಣ ಈ ಟೆಸ್ಟ್(IND vs ENG 3rd Test) ಪಂದ್ಯ ಜು.10 ರಿಂದ ಆರಂಭಗೊಳ್ಳಲಿದೆ. ಈ ಮೈದಾನದಲ್ಲಿ(India's Test Record At Lord's) ಭಾರತ ಟೆಸ್ಟ್ ಸಾಧನೆ ಹೇಗಿದೆ ಎಂಬ ಹಿನ್ನೋಟ ಇಲ್ಲಿದೆ.
ಲಾರ್ಡ್ಸ್‌ನಲ್ಲಿ ಭಾರತದ ಸಾಧನೆ
1932ರಿಂದ ಲಾರ್ಡ್ಸ್‌ನಲ್ಲಿ ಟೆಸ್ಟ್ ಪಂದ್ಯ ಆಡುತ್ತಿರುವ ಭಾರತ ಈವರೆಗೆ ಒಟ್ಟು 19 ಟೆಸ್ಟ್ ಗಳನ್ನಾಡಿದ್ದು,ಕೇವಲ ಮೂರನ್ನಷ್ಟೇ ಜಯಿಸಿದೆ. 12ರಲ್ಲಿ ಸೋಲನುಭವಿಸಿದೆ. 4 ಪಂದ್ಯ ಡ್ರಾಗೊಂಡಿದೆ. ಭಾರತ ಲಾರ್ಡ್ಸ್‌ನಲ್ಲಿ ಗೆಲುವಿನ ಖಾತೆ ತೆರೆಯಲು ಭರ್ತಿ 54 ವರ್ಷ ಕಾಯಬೇಕಾಯಿತು. 1986ರಲ್ಲಿ ಕಪಿಲ್‌ದೇವ್ ನಾಯಕತ್ವದ ಭಾರತ ಇಲ್ಲಿ ಆಡಲಾದ ಸರಣಿಯ ಮೊದಲ ಟೆಸ್ಟ್ ಪಂದ್ಯವನ್ನೇ 5 ವಿಕೆಟ್ ಗಳಿಂದ ಗೆದ್ದು ಇತಿಹಾಸ ಬರೆಯಿತು.
ಇದಾದ ಬಳಿಕ ಭಾರತ ಇಲ್ಲಿ ಮತ್ತೂಂದು ಜಯ ಕಾಣಲು 28 ವರ್ಷ ಕಾಯಬೇಕಾಯಿತು. 2014ರಲ್ಲಿ ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಭಾರತ ತಂಡ 95 ರನ್ ಅಂತರದ ಗೆಲುವು ಸಾಧಿಸಿತು. 319 ರನ್ ಗುರಿ ಪಡೆದಿದ್ದ ಇಂಗ್ಲೆಂಡ್ ಇಶಾಂತ್ ಶರ್ಮ ದಾಳಿಗೆ ತತ್ತರಿಸಿ 223ಕ್ಕೆ ಆಲೌಟ್ ಆಗಿತ್ತು. ಇಶಾಂತ್ ಶರ್ಮ 74ಕ್ಕೆ 7 ವಿಕೆಟ್ ಕಿತ್ತು ಗೆಲುವಿನ ರುವಾರಿ ಎನಿಸಿಕೊಂಡಿದ್ದರು.
ಇದನ್ನೂ ಓದಿ ENG vs IND: ಮೂರನೇ ಪಂದ್ಯಕ್ಕೆ ಬುಮ್ರಾ ಲಭ್ಯ; ಖಚಿತಪಡಿಸಿದ ನಾಯಕ ಗಿಲ್