IND vs ENG: ʻಒಂದು ಪಂದ್ಯದಿಂದ ಅನ್ಶುಲ್ ಕಾಂಬೋಜ್ ಸಾಮರ್ಥ್ಯವನ್ನು ಅಳೆಯಬೇಡಿʼ-ಸೌರವ್ ಗಂಗೂಲಿ!
ಈಗಾಗಲೇ ಭಾರತ ತಂಡದ ಆಯ್ಕೆ ಬಗ್ಗೆ ಮುಖ್ಯ ಕೋಚ್ ಗೌತಮ್ ಗಂಭೀರ್ ಸಾಲು ಸಾಲು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಇದರ ನಡುವೆ ಕಳೆದ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಹರಿಯಾಣ ವೇಗಿ ಅನ್ಶುಲ್ ಕಾಂಬೋಜ್ ಆಯ್ಕೆಯ ಕುರಿತು ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅನ್ಶುಲ್ ಕಾಂಬೋಜ್‌ಗೆ ಸೌರವ್ ಗಂಗೂಲಿ ಬೆಂಬಲ.

ಕೆನಿಂಗ್ಟನ್: ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದು ಟೆಸ್ಟ್ ಸರಣಿಯ ಕೊನೆಯ ಪಂದ್ಯ ಕೆನಿಂಗ್ಟನ್‌ನ ಓವಲ್ ಮೈದಾನದಲ್ಲಿ ನಡೆಯುತ್ತಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಲು ಮೈದಾನಕ್ಕಿಳಿದ ಭಾರತ ತಂಡ ತನ್ನ ಆರಂಭಿಕ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್ ಮತ್ತು ಕೆ ಎಲ್ ರಾಹುಲ್ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ಇನ್ನು ಈ ಸರಣಿಯಲ್ಲಿ 2-1 ಅಂತರದಲ್ಲಿ ಅತಿಥೇಯ ಇಂಗ್ಲೆಂಡ್ ತಂಡ ಮುನ್ನಡೆ ಸಾಧಿಸಿದೆ. ಇನ್ನೊಂದು ಕಡೆ ಆಡಿರುವ ನಾಲ್ಕು ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದು, ಒಂದರಲ್ಲಿ ಡ್ರಾ ಸಾಧಿಸಿ ಭಾರತ ತಂಡ ಹಿನ್ನಡೆ ಅನುಭವಿಸುತ್ತಿದೆ. ಈ ಪಂದ್ಯವನ್ನು ಗೆದ್ದು ಸರಣಿಯನ್ನು ಸಮಬಲಗೊಳಿಸಿಕೊಳ್ಳಲು ಭಾರತ ತಂಡ ಎದುರು ನೋಡುತ್ತಿದೆ. ಈಗಾಗಲೇ ತಂಡದ ಆಯ್ಕೆ ಬಗ್ಗೆ ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಸಾಲು ಸಾಲು ಟೀಕೆಗಳನ್ನು ಎದುರಿಸುತ್ತಿದ್ದಾರೆ.
ಇದರ ನಡುವೆ ಕಳೆದ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಹರಿಯಾಣದ ವೇಗಿ ಅನ್ಶುಲ್ ಕಾಂಬೋಜ್ ಆಯ್ಕೆಯ ಕುರಿತು ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಪ್ರತಿಕ್ರಿಯೆ ನೀಡಿದ್ದಾರೆ. ಟೆಸ್ಟ್ ಕ್ರಿಕೆಟ್‌ಗೆ ಈಗ ತಾನೇ ಪಾದಾರ್ಪಣೆ ಮಾಡಿರುವ ಅನ್ಶುಲ್ ಕಾಂಬೋಜ್ 18 ಒವರ್‌ಗಳನ್ನು ಬೌಲ್ ಮಾಡಿ 4.94ರ ಸರಾಸರಿಯಲ್ಲಿ 89ರನ್ ನೀಡಿ ತಂಡ ಸಂಕಷ್ಟದಲ್ಲಿದ್ದಾಗ ಎದುರಾಳಿ ತಂಡದ ಬೆನ್ ಡಕೆಟ್‌ರವರ ಪ್ರಮುಖ ವಿಕೆಟ್ ಕಬಳಿಸಿದ್ದರು. ಸಮತಟ್ಟಾಗಿದ್ದ ಓವಲ್ ಪಿಚ್‌ನಲ್ಲಿ ಲೈನ್ ಅಂಡ್ ಲೆನ್ತ್ ಮತ್ತು ವೇಗದೊಂದಿಗೆ ಎದುರಾಳಿಗಳ ವಿರುದ್ದ ಆಕ್ರಮಣಕಾರಿಯಾಗಿ ಪರಿಣಮಿಸಿದ್ದರು. ಹಾಗಾಗಿ ಒಂದೇ ಪಂದ್ಯದ ಪ್ರದರ್ಶನ ಮಾನದಂಡವಾಗಿರಿಸಿಕೊಂಡು ತಂಡದಿಂದ ಕೈ ಬಿಡುವುದು ಸೂಕ್ತವಲ್ಲ ಎಂದು ಗಂಗೂಲಿ, ಗೌತಮ್ ಗಂಭಿರ್ ನಿರ್ಧಾರದ ಕುರಿತು ಅಸಮಧಾನ ಹೊರಹಾಕಿದ್ದಾರೆ.
IND vs ENG: ಯಶಸ್ವಿ ಜೈಸ್ವಾಲ್ ಮಾಡುತ್ತಿರುವ ತಾಂತ್ರಿಕ ತಪ್ಪನ್ನು ತಿಳಿಸಿದ ಸುನೀಲ್ ಗವಾಸ್ಕರ್!
ಅನ್ಶುಲ್ ಕಾಂಬೋಜ್ ಗಂಗೂಲಿ ಸಾಥ್
ಕಾರ್ಯಕ್ರಮವೊಂದರಲ್ಲಿ ಸುದೀರ್ಘವಾಗಿ ಮಾತನಾಡಿದ ಗಂಗೂಲಿ, "ಕೇವಲ ಒಂದು ಟೆಸ್ಟ್ ಪಂದ್ಯವನ್ನು ಆಧರಿಸಿ ಅನ್ಶುಲ್ ಕಾಂಬೋಜ್ ಅವರನ್ನು ನಿರ್ಣಯಿಸಬೇಡಿ. ಅವರು ದೇಶಿ ಕ್ರಿಕೆಟ್‌ನಲ್ಲಿ ಸಾಕಷ್ಟು ವಿಕೆಟ್‌ಗಳನ್ನು ಪಡೆದಿರುವ ಚಿಕ್ಕ ಹುಡುಗ. ಅಭಿಪ್ರಾಯಗಳನ್ನು ರೂಪಿಸುವ ಮೊದಲು ನಾವು ಐದು, ಆರು, ಎಂಟು ಟೆಸ್ಟ್‌ಗಳಲ್ಲಿ ಅವಕಾಶ ನೀಡಿ ನಂತರ ಆಟಗಾರರನ್ನು ನಿರ್ಣಯಿಸಬೇಕಾಗಿದೆ,"ಎಂದು ಹೇಳಿದ್ದಾರೆ.
"ಮುಖೇಶ್ ಕುಮಾರ್ ಅವರನ್ನು ರಾಷ್ಟ್ರೀಯ ತಂಡದಲ್ಲಿ, ವಿಶೇಷವಾಗಿ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ನೋಡದಿರುವುದು ನನಗೆ ಅಚ್ಚರಿ ತಂದಿದೆ. ಅವರ ದೇಶಿ ಸಂಖ್ಯೆಗಳು ಅಸಾಧಾರಣವಾಗಿವೆ ಮತ್ತು ಈ ಪರಿಸ್ಥಿತಿಗಳು ಅವರ ಬೌಲಿಂಗ್ ಶೈಲಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತಿದ್ದವು. ಆಶಾದಾಯಕವಾಗಿ, ಮುಂದಿನ ದಿನಗಳಲ್ಲಿ ಅವರಿಗೆ ಅವಕಾಶ ಸಿಗಲಿದೆ ಎಂದು ಭಾವಿಸುತ್ತೇನೆ," ಎಂದು ತಿಳಿಸಿದ್ದಾರೆ.
IND vs ENG: ಓವಲ್ ಟೆಸ್ಟ್‌ನಲ್ಲಿ ಅರ್ಷದೀಪ್, ಕುಲ್ದೀಪ್‌ಗೆ ಸ್ಥಾನ ನೀಡದ ಗಂಭೀರ್ ವಿರುದ್ಧ ಫ್ಯಾನ್ಸ್ ಆಕ್ರೋಶ!
ಕುಲ್ದೀಪ್ ಯಾದವ್ ಪರ ಬ್ಯಾಟ್ ಬೀಸಿದ ಗಂಗೂಲಿ
ಹಿಂದಿನ ಕಾಲದ ಉನ್ನತ ತಂಡಗಳು ಯಾವಾಗಲೂ ಪಂದ್ಯ ಗೆಲ್ಲುವ ಸ್ಪಿನ್ನರ್‌ಗಳನ್ನು ಹೊಂದಿದ್ದವು ಎಂಬುದನ್ನು ಒತ್ತಿ ಹೇಳಿದ ಗಂಗೂಲಿ, ಕುಲದೀಪ್ ಯಾದವ್ ಅವರೊಂದಿಗೆ ಮುಂದುವರಿಯಬೇಕಿತ್ತು. ಕಳೆದ ಎರಡು ವರ್ಷಗಳಿಂದ ಭಾರತದ ಪರ ಅತ್ಯಂತ ಉತ್ತಮ ಫಾರ್ಮ್‌ನಲ್ಲಿರುವ ಸ್ಪಿನ್ನರ್ ಆಗಿದ್ದರೂ, ಕುಲ್‌ದೀಪ್ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯದಲ್ಲೂ ಆಡಲಿಲ್ಲ. ಬದಲಿಗೆ ಭಾರತ ತಂಡವ ತಮ್ಮ ಸ್ಪಿನ್ ವಿಭಾಗಗಳಲ್ಲಿ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಅವರಿಗೆ ಆದ್ಯತೆ ನೀಡಿದೆ.
IND vs ENG: ಟಾಸ್ ವೇಳೆ ರವಿ ಶಾಸ್ತ್ರಿ ಪ್ರಶ್ನೆಗೆ ಗೊಂದಲದ ಉತ್ತರವನ್ನು ಕೊಟ್ಟ ಶುಭಮನ್ ಗಿಲ್!
ಇಂಗ್ಲೆಂಡ್ ನಾಲ್ವರು ವೇಗದ ಬೌಲರ್‌ಗಳೊಂದಿಗೆ ಆಡಿದೆ ಎಂದು ನಾನು ಭಾವಿಸುತ್ತೇನೆ. ಅವರು ವಿಕೆಟ್ ಮೇಲೆ ಸ್ವಲ್ಪ ಹುಲ್ಲು ಬಿಟ್ಟಿದ್ದರು ಅದು ಉದ್ದೇಶಪೂರ್ವಕವಾಗಿಯೇ ಆಗಿತ್ತು ಎಂದು ನಾನು ಭಾವಿಸುತ್ತೇನೆ. ಭಾರತದಲ್ಲಿ ಹಿಂದೆ ಜಡೇಜಾ ಮತ್ತು ಅಶ್ವಿನ್‌ರಂತಹ ಗುಣಮಟ್ಟದ ಸ್ಪಿನ್ನರ್‌ಗಳಿದ್ದರು. ಕುಲ್‌ದೀಪ್ ಮ್ಯಾಂಚೆಸ್ಟರ್, ಲಾರ್ಡ್ಸ್ ಮತ್ತು ಬರ್ಮಿಂಗ್‌ಹ್ಯಾಮ್‌ನಲ್ಲಿಯೂ ಸಹ ಆಡಬೇಕಾಗಿತ್ತು. ಗುಣಮಟ್ಟದ ಸ್ಪಿನ್ ಇಲ್ಲದೆ 5ನೇ ದಿನದಂದು ತಂಡವನ್ನು ಔಟ್ ಮಾಡುವುದು ಕಷ್ಟ," ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
ಬರಹ- ಕೆ ಎನ್ ರಂಗು, ಚಿತ್ರದುರ್ಗ