ಅಹಮದಾಬಾದ್, ಫೆ.18: ಮುಂದಿನ ಭಾನುವಾರ(ಫೆ.22) ದಕ್ಷಿಣ ಆಫ್ರಿಕಾ ವಿರುದ್ಧ ನೆಯಲಿರುವ ಸೂಪರ್-8 ಪಂದ್ಯಕ್ಕೂ ಮುನ್ನ ರಿಹರ್ಸಲ್ ಎಂಬಂತೆ ಭಾರತ ತಂಡ ಈ ಬಾರಿ ಟಿ20 ವಿಶ್ವಕಪ್(T20 World Cup)ನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಇಂದು(ಬುಧವಾರ) ನೆದರ್ಲೆಂಡ್ಸ್ ವಿರುದ್ಧ ಕಣಕ್ಕಿಳಿಯಲಿದೆ. ತಂಡ ಸತತ 3ನೇ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ(IND vs NED pitch report) ಈ ಪಂದ್ಯವನ್ನೂ ಗೆದ್ದು ಅಜೇಯ ಓಟ ಮುಂದುವರಿಸುವ ಕಾತರದಲ್ಲಿದೆ.
ಪಿಚ್ ರಿಪೋರ್ಟ್
ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ ಇದುವರೆಗಿನ ಮೂರು ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ನೆರವು ನೀಡಿದೆ. ಇದುವರೆಗಿನ ಮೂರು ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡಗಳು 213, 187 ಮತ್ತು 175 ಸ್ಕೋರ್‌ಗಳನ್ನು ಗಳಿಸಿವೆ. ಈ ಅಂಕಿ ಅಂಶಗಳ ಪ್ರಕಾರ ಇಂದಿನ ಪಂದ್ಯ ಕೂಡ ಹೈ-ಸ್ಕೋರಿಂಗ್ ನಿರೀಕ್ಷೆ ಮಾಡಬಹದು. ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ನಡುವಣ ಡಬಲ್ ಸೂಪರ್ ಓವರ್‌ಗೂ ಈ ಮೈದಾನ ಸಾಕ್ಷಿಯಾಗಿತ್ತು.
ಮೊದಲು ಬ್ಯಾಟಿಂಗ್ ಮಾಡುವ ತಂಡವು ಇಲ್ಲಿ 200 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಬೇಕಾಗುತ್ತದೆ ಇಲ್ಲದಿದ್ದರೆ ಎದುರಾಳಿಗಳು ಸ್ಕೋರ್‌ಗಳನ್ನು ಬೆನ್ನಟ್ಟುವ ಅಪಾಯವನ್ನು ಎದುರಿಸಬೇಕಾಗುತ್ತದೆ.
ಅಹಮದಾಬಾದ್ T20I ದಾಖಲೆಗಳು
ಆಡಿದ ಪಂದ್ಯಗಳು - 14
ಮೊದಲು ಬ್ಯಾಟಿಂಗ್‌ನಲ್ಲಿ ಗೆದ್ದ ಪಂದ್ಯಗಳು - 9
ಮೊದಲು ಬೌಲಿಂಗ್‌ನಲ್ಲಿ ಗೆದ್ದ ಪಂದ್ಯಗಳು - 5
ಮೊದಲ ಇನ್ನಿಂಗ್ಸ್‌ನಲ್ಲಿ ಸರಾಸರಿ ಸ್ಕೋರ್ - 172
ದಾಖಲಾದ ಅತ್ಯಧಿಕ ಮೊತ್ತ - ಭಾರತ vs ನ್ಯೂಜಿಲೆಂಡ್ 234
NEP vs SCO: ಸ್ಕಾಟ್ಲೆಂಡ್ ವಿರುದ್ಧ ಗೆದ್ದು ಟಿ20 ವಿಶ್ವಕಪ್ ಅಭಿಯಾನ ಮುಗಿಸಿದ ನೇಪಾಳ!
ಭಾರತ ಮತ್ತು ನೆದರ್ಲೆಂಡ್ಸ್ ತಂಡಗಳು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಮ್ಮೆ ಮಾತ್ರ ಮುಖಾಮುಖಿಯಾಗಿವೆ. 2022 ರ ಸಿಡ್ನಿಯಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವು 56 ರನ್‌ಗಳ ಸುಲಭ ಜಯ ಸಾಧಿಸಿತ್ತು.
ಸಂಭಾವ್ಯ ಆಡುವ ಬಳಗ
ಭಾರತ: ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿ.ಕೀ.), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಶಿವಂ ದುಬೆ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ.
ನೆದರ್ಲ್ಯಾಂಡ್ಸ್: ಮೈಕೆಲ್ ಲೆವಿಟ್, ಮ್ಯಾಕ್ಸ್ ಒ'ಡೌಡ್, ಬಾಸ್ ಡಿ ಲೀಡೆ, ಕಾಲಿನ್ ಅಕರ್‌ಮನ್, ಸ್ಕಾಟ್ ಎಡ್ವರ್ಡ್ಸ್ (ನಾಯಕ/ವಿ.ಕೀ.), ಝಾಕ್ ಲಯನ್-ಕ್ಯಾಚೆಟ್, ಲೋಗನ್ ವ್ಯಾನ್ ಬೀಕ್, ಆರ್ಯನ್ ದತ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಮತ್ತು ಇಬ್ಬರು ಕೈಲ್ ಕ್ಲೈನ್, ಫ್ರೆಡ್ ಕ್ಲಾಸೆನ್ ಮತ್ತು ಪಾಲ್ ವ್ಯಾನ್ ಮೀಕೆರೆನ್.