ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

NEP vs SCO: ಸ್ಕಾಟ್ಲೆಂಡ್‌ ವಿರುದ್ಧ ಗೆದ್ದು ಟಿ20 ವಿಶ್ವಕಪ್‌ ಅಭಿಯಾನ ಮುಗಿಸಿದ ನೇಪಾಳ!

2026ರ ಟಿ20 ವಿಶ್ವಕಪ್‌ ಟೂರ್ನಿಯ ತನ್ನ ಅಂತಿಮ ಪಂದ್ಯದಲ್ಲಿ ನೇಪಾಳ ತಂಡ, ಸ್ಕಾಟ್ಲೆಂಡ್ ಅನ್ನು ಸೋಲಿಸಿತು. ನೇಪಾಳ ತಂಡವು ಕೊನೆಯ ಓವರ್‌ನಲ್ಲಿ 171 ರನ್‌ಗಳ ಗುರಿಯನ್ನು ತಲುಪಿತು. ಆ ಮೂಲಕ ತನ್ನ ಟೂರ್ನಿಯ ಅಭಿಯಾನವನ್ನು ಉಭಯ ತಂಡಗಳು ಮುಗಿಸಿದವು.

T20 World Cup: ಸ್ಕಾಟ್ಲೆಂಡ್‌ ವಿರುದ್ಧ ನೇಪಾಳ ತಂಡಕ್ಕೆ 7 ವಿಕೆಟ್‌ ಜಯ!

ಸ್ಕಾಟ್ಲೆಂಡ್‌ ವಿರುದ್ಧ ನೇಪಾಳ ತಂಡಕ್ಕೆ ಜಯ. -

Profile
Ramesh Kote Feb 18, 2026 12:48 AM

ಮುಂಬೈ: ಪ್ರಸ್ತುತ ನಡೆಯುತ್ತಿರುವ 2026ರ ಐಸಿಸಿ ಟಿ20 ವಿಶ್ವಕಪ್(T20 World Cup 2026) ಟೂರ್ನಿಯಲ್ಲಿ ನೇಪಾಳ ತನ್ನ ಕೊನೆಯ ಪಂದ್ಯವನ್ನು ಗೆದ್ದಿದೆ. ಇಂಗ್ಲೆಂಡ್ ವಿರುದ್ಧ ಒಂದು ರನ್ ನಿಂದ ಸೋತ ನಂತರ, ನೇಪಾಳ ತಂಡವು ಟೂರ್ನಿಯ 33ನೇ ಪಂದ್ಯದಲ್ಲಿ (NEP vs SCO) ಸ್ಕಾಟ್ಲೆಂಡ್ ತಂಡವನ್ನು ಏಳು ವಿಕೆಟ್ ಗಳಿಂದ ಸೋಲಿಸಿತು. ಮೊದಲು ಬ್ಯಾಟ್‌ ಮಾಡಿದ ಸ್ಕಾಟ್ಲೆಂಡ್ ತನ್ನ ಪಾಲಿನ 20 ಓವರ್‌ಗಳಿಗೆ ಏಳು ವಿಕೆಟ್ ಗಳಿಗೆ 170 ರನ್ ಗಳಿಸಿತು. ಸಿ ಗುಂಪಿನ ಪಂದ್ಯವನ್ನು ನೇಪಾಳ ಅಂತಿಮ ಓವರ್‌ನಲ್ಲಿ ಗೆದ್ದುಕೊಂಡಿತು. 2014ರ ನಂತರ ನೇಪಾಳ (Nepal) ತಂಡಕ್ಕೆ ಮೊದಲ ಟಿ20 ವಿಶ್ವಕಪ್ ಗೆಲುವು ಇದಾಗಿದೆ. ಈ ತಂಡ 2024ರ ಟೂರ್ನಿಯಲ್ಲಿಯೂ ಭಾಗವಹಿಸಿತ್ತು ಆದರೆ ಒಂದೇ ಒಂದು ಪಂದ್ಯವನ್ನು ಗೆದ್ದಿರಲಿಲ್ಲ.

ಕುಶಾಲ್ ಭುರ್ತೆಲ್ ಮತ್ತು ಆಸಿಫ್ ಶೇಖ್ ನೇಪಾಳಕ್ಕೆ ಸ್ಫೋಟಕ ಆರಂಭ ನೀಡಿದರು. ಪವರ್ ಪ್ಲೇ ನಲ್ಲಿ ತಂಡವು ವಿಕೆಟ್ ಕಳೆದುಕೊಳ್ಳದೆ 56 ರನ್ ಗಳಿಸಿತು. ಆದಾಗ್ಯೂ, ಮೈಕೆಲ್ ಲೀಸ್ಕ್ ಸ್ಕಾಟ್ಲೆಂಡ್‌ ತಂಡವನ್ನು ಮೂರು ವಿಕೆಟ್ ಗಳೊಂದಿಗೆ ಆಟಕ್ಕೆ ಮರಳಿ ತಂದರು. ಭುರ್ತೆಲ್ 35 ಎಸೆತಗಳಲ್ಲಿ 43 ರನ್ ಗಳಿಸಿದರೆ, ಆಸಿಫ್ 27 ಎಸೆತಗಳಲ್ಲಿ 33 ರನ್ ಗಳಿಸಿದರು. ನಾಯಕ ರೋಹಿತ್ ಪೌಡೆಲ್ 16 ರನ್ ಗಳಿಸಿದರು. 14ನೇ ಓವರ್ ನಲ್ಲಿ ರೋಹಿತ್ ಔಟಾದಾಗ, ತಂಡದ ಸ್ಕೋರ್ ಮೂರು ವಿಕೆಟ್ ಗಳಿಗೆ 98 ರನ್ ಆಗಿತ್ತು.

IND vs NED: ನೆದರ್ಲೆಂಡ್ಸ್‌ ವಿರುದ್ದದ ಪಂದ್ಯಕ್ಕೆ ಭಾತತ ತಂಡದ ಸಂಭಾವ್ಯ ಪ್ಲೇಯಿಂಗ್‌ XI ವಿವರ!

ದೀಪೇಂದ್ರ ಸಿಂಗ್ ಐರಿ ನಾಲ್ಕನೇ ವಿಕೆಟ್‌ಗೆ ಗುಲ್ಶನ್ ಝಾ ಜೊತೆ 36 ಎಸೆತಗಳಲ್ಲಿ ಅಜೇಯ 73 ರನ್ ಗಳಿಸಿದರು. ನೇಪಾಳ ಗೆಲ್ಲಲು ಕೊನೆಯ 31 ಎಸೆತಗಳಲ್ಲಿ 65 ರನ್‌ಗಳು ಬೇಕಾಗಿದ್ದವು. ದೀಪೇಂದ್ರ ಸಿಂಗ್ ಐರಿ 23 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ ಅಜೇಯ 50 ರನ್ ಗಳಿಸಿದರು. ಗುಲ್ಶನ್ ಝಾ 17 ಎಸೆತಗಳಲ್ಲಿ 24 ರನ್‌ಗಳ ಕೊಡುಗೆ ನೀಡಿದರು.

ನೇಪಾಳದ ಬೌಲರ್‌ಗಳು ಬಲಿಷ್ಠ ದಾಳಿ

ಟಾಸ್ ಗೆದ್ದ ನೇಪಾಳ ನಾಯಕ ರೋಹಿತ್ ಪೌಡೆಲ್ ಸ್ಕಾಟ್ಲೆಂಡ್ ಅನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಜಾರ್ಜ್ ಮುನ್ಸೆ ಮತ್ತು ಮೈಕೆಲ್ ಜೋನ್ಸ್ 10 ಓವರ್‌ಗಳಲ್ಲಿ 80 ರನ್ ಗಳಿಸುವುದರೊಂದಿಗೆ ಸ್ಕಾಟ್ಲೆಂಡ್‌ಗೆ ಅದ್ಭುತ ಆರಂಭವನ್ನು ನೀಡಿದರು. ಜಾರ್ಜ್ 29 ಎಸೆತಗಳಲ್ಲಿ ನಾಲ್ಕು ಬೌಂಡರಿಗಳೊಂದಿಗೆ 27 ರನ್ ಗಳಿಸಿ ಔಟಾದರು. ಅದಾದ ನಂತರ, ಬ್ರೆಂಡನ್ ಮೆಕ್‌ಮುಲ್ಲೆನ್ (25) ಅವರೊಂದಿಗೆ ಮೈಕೆಲ್ ಜೋನ್ಸ್ ಎರಡನೇ ವಿಕೆಟ್‌ಗೆ 32 ಎಸೆತಗಳಲ್ಲಿ 52 ರನ್ ಸೇರಿಸಿ ತಂಡವನ್ನು 132 ರನ್‌ಗಳ ಗಡಿ ದಾಟಿಸಿದರು.



ಕೊನೆಯ ಐದು ಓವರ್‌ಗಳಲ್ಲಿ ನೇಪಾಳ ಅದ್ಭುತ ಬೌಲಿಂಗ್ ಮಾಡಿತು ಮತ್ತು ಆ ಅವಧಿಯಲ್ಲಿ ಸ್ಕಾಟ್ಲೆಂಡ್ ಕೇವಲ 39 ರನ್‌ಗಳನ್ನು ಗಳಿಸಿತು. ಮೈಕೆಲ್ ಜೋನ್ಸ್ 45 ಎಸೆತಗಳಲ್ಲಿ ಮೂರು ಸಿಕ್ಸರ್‌ಗಳು ಮತ್ತು ಎಂಟು ಬೌಂಡರಿಗಳನ್ನು ಒಳಗೊಂಡಂತೆ 71 ರನ್ ಗಳಿಸಿದರು. ಅಲ್ಲಿಂದ, ತಂಡವು ನಿಯಮಿತ ಅಂತರದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡರೂ 170/7 ತಲುಪಿತು. ಸೋಂಪಾಲ್ ಕಾಮಿ ಮೂರು ವಿಕೆಟ್‌ಗಳನ್ನು ಪಡೆದರೆ, ನಂದನ್ ಯಾದವ್ ಎರಡು ವಿಕೆಟ್‌ಗಳನ್ನು ಪಡೆದರು.