ಗುವಾಹಟಿ, ಜ.24: ನ್ಯೂಜಿಲ್ಯಾಂಡ್ ಎದುರಿನ 5 ಪಂದ್ಯಗಳ ಟಿ20 ಸರಣಿಯಲ್ಲಿ ಸತತ ಎರಡು ಗೆಲುವು ಸಾಧಿಸಿರುವ ಭಾರತ ಭಾನುವಾರ ಮೂರನೇ ಪಂದ್ಯವನ್ನಾಡಲಿದೆ. ಈ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವ ಯೋಜನೆ ಸೂರ್ಯಕುಮಾರ್ ಪಡೆಯದ್ದಾದರೆ, ಅತ್ತ ಸರಣಿ ಜೀವಂತವಿರಿಸಿಕೊಳ್ಳಲು ಸ್ಯಾಂಟ್ನರ್ ಪಡೆಗೆ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಈ ಪಂದ್ಯದ ಪಿಚ್ ರಿಪೋರ್ಟ್, ಹವಾಮಾನ ವರದಿ ಇಲ್ಲಿದೆ.
ಪಿಚ್ ರಿಪೋರ್ಟ್
ಗುವಾಹಟಿಯ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿರುವ ನಿರೀಕ್ಷೆಯಿದ್ದು, ಈ ಪಂದ್ಯದಲ್ಲಿ ಹೆಚ್ಚಿನ ಸ್ಕೋರಿಂಗ್ ನಿರೀಕ್ಷಿಸಬಹುದು. ಆರಂಭದಲ್ಲಿ ವೇಗದ ಬೌಲರ್‌ಗಳಿಗೆ ಸ್ವಲ್ಪ ಸಹಾಯ ಸಿಗಬಹುದು. ಆದರೆ ಬೌಲರ್‌ಗಳಿಗೆ ಕಠಿಣ ಸಮಯ ಎದುರಾಗಬಹುದು. ವಿಶೇಷವಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಇಬ್ಬನಿಯು ಪ್ರಮುಖ ಪಾತ್ರ ವಹಿಸಬಹುದು. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ದುಕೊಳ್ಳಬಹುದು.
ಹವಾಮಾನ ವರದಿ
ಗುವಾಹಟಿ, ಇಂಡಿಯಾನಾದಲ್ಲಿ ಪಂದ್ಯದ ಸಮಯದಲ್ಲಿ ಹವಾಮಾನವು ಸ್ಪಷ್ಟವಾಗಿರುತ್ತದೆ. ಪಂದ್ಯದ ದಿನದಂದು ತಾಪಮಾನವು ಸುಮಾರು 23°C ಆಗುವ ನಿರೀಕ್ಷೆಯಿದೆ, 35% ಆರ್ದ್ರತೆ ಮತ್ತು ಗಾಳಿಯ ವೇಗ ಗಂಟೆಗೆ 2.8 ಕಿ.ಮೀ. ಮತ್ತು ಗೋಚರತೆ 10 ಕಿ.ಮೀ. ಆಟದ ಸಮಯದಲ್ಲಿ ಮಳೆಯಾಗುವ ಸಾಧ್ಯತೆಗಳಿಲ್ಲ.
ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣದ ಸ್ಕೋರ್ ದಾಖಲೆಗಳು
ಈ ಮೈದಾನದಲ್ಲಿ ಇದುವರೆಗೆ 7 ಅಂತಾರಾಷ್ಟ್ರೀಯ ಟಿ20 ಪಂದ್ಯಗಳು ನಡೆದಿವೆ. ತಲಾ 3 ಪಂದ್ಯಗಳನ್ನು ಮೊದಲು ಬ್ಯಾಟಿಂಗ್ ಮತ್ತು ಚೇಸಿಂಗ್ ನಡೆಸಿದ ತಂಡಗಳು ಗೆಲುವು ಸಾಧಿಸಿದೆ. 161 ಮೊದಲ ಇನಿಂಗ್ಸ್ ಸರಾಸರಿ ಮೊತ್ತ.
ಸಂಭಾವ್ಯ ತಂಡಗಳು
ಭಾರತ: ಸಂಜು ಸ್ಯಾಮ್ಸನ್(ವಿ.ಕೀ.), ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್(ನಾಯಕ), ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ.
ಪಾಕ್ ಆಟಗಾರನನ್ನು ತಬ್ಬಿಕೊಂಡ ಇರ್ಫಾನ್ ಪಠಾಣ್; ವಿಡಿಯೊ ವೈರಲ್
ನ್ಯೂಜಿಲೆಂಡ್: ಡೆವೊನ್ ಕಾನ್ವೇ, ಟಿಮ್ ಸೀಫರ್ಟ್ (ವಿ.ಕೀ.), ರಾಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಡ್ಯಾರಿಲ್ ಮಿಚೆಲ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಮ್ಯಾಟ್ ಹೆನ್ರಿ, ಝಾಕ್ ಫೌಲ್ಕ್ಸ್, ಇಶ್ ಸೋಧಿ, ಜಾಕೋಬ್ ಡಫಿ.
ಪಂದ್ಯ ಆರಂಭ: ರಾತ್ರಿ 7ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್,ಜಿಯೋಹಾಟ್‌ಸ್ಟಾರ್.