ಕೊಲಂಬೊ, ಫೆ.14: ಭಾರಿ ವಿವಾದದ ಬಳಿಕ ಕೊಲಂಬೊದಲ್ಲಿ ಭಾರತ-ಪಾಕ್(IND vs PAK) ಕ್ರಿಕೆಟ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಭಾನುವಾರದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಇತ್ತಂಡಗಳು ಸೆಣೆಸಾಡಲಿವೆ. 2025ರ ಏಷ್ಯಾ ಕಪ್ ಫೈನಲ್ ನಂತರ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿರುವ ಎರಡೂ ತಂಡಗಳಿಗೆ ಕೆಲವು ಸವಾಲುಗಳು ಎದುರಾಗಲಿವೆ. ಈ ಪಂದ್ಯದ ಪಿಚ್ ರಿಪೋರ್ಟ್(colombo pitch report) ಮತ್ತು ಸಂಭಾವ್ಯ ತಂಡಗಳ ಮಾಹಿತಿ ಇಲ್ಲಿದೆ.
ಸ್ಪಿನ್ ಪಿಚ್
ಪ್ರೇಮದಾಸ ಕ್ರೀಡಾಂಗಣದ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ಸಹಕಾರಿ. ಶುಕ್ರವಾರ ಆಸ್ಟ್ರೇಲಿಯಾ ಮತ್ತು ಜಿಂಬಾಬ್ವೆ ನಡುವೆ ನಡೆದ ಪಂದ್ಯಕ್ಕೆ ಬಳಸಲಾದ ಒಣ ಪಿಚ್ ಅನ್ನೇ ಈ ಪಂದ್ಯಕ್ಕೂ ಬಳಸಲಾಗುತ್ತಿದೆ ಎನ್ನಲಾಗಿದೆ. ಹೀಗಾಗಿ ಬ್ಯಾಟರ್‌ಗಳಿಗೆ ರನ್ ಗಳಿಸಲು ಕಷ್ಟವಾಗಬಹುದು. ಇದೇ ಪಿಚ್‌ನಲ್ಲಿ ಕಳೆದ ಪಂದ್ಯದಲ್ಲಿ ಜಿಂಬಾಬ್ವೆ ತಂಡವು ಕೇವಲ 169 ರನ್ ರಕ್ಷಿಸಿಕೊಂಡು ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಪಾಕಿಸ್ತಾನ ಉಸ್ಮಾನ್ ತಾರಿಖ್ ಅವರ ಬೌಲಿಂಗ್‌ಗೆ ಕೊಂಚ ಕಷ್ಟಪಡುವ ಸಾಧ್ಯತೆ ಇದೆ. ಹಿಂದಿನ ಎರಡೂ ಪಂದ್ಯಗಳಲ್ಲಿಯೂ ಭಾರತೀಯ ಬ್ಯಾಟರ್‌ಗಳು ಸ್ಪಿನ್ನರ್‌ಗಳಿಗೆ ತಿಣುಕಾಡಿದ್ದರು.
ಪಂದ್ಯಕ್ಕೆ ಅಡ್ಡಿಯಾಗುತ್ತಾ ಮಳೆ?
ಹವಾಮಾನ ಇಲಾಖೆ ಪಂದ್ಯಕ್ಕೆ ಭಾರಿ ಮಳೆ ಮುನ್ಸೂಚನೆ ನೀಡಿದೆ. ಭಾನುವಾರ ಕೊಲಂಬೊದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಶೇ. 50 ರಷ್ಟು ಇದೆ. ಸ್ಥಳೀಯ ಸಮಯ ಸಂಜೆ 6 ಗಂಟೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಪಂದ್ಯ 7 ಗಂಟೆಗೆ ಆರಂಭವಾಗಲಿದೆ.
IND vs PAK: ಭಾರತ-ಪಾಕ್ ಪಂದ್ಯಕ್ಕೆ ಏಷ್ಯಾಕಪ್ ಟ್ರೋಫಿ ಕಳ್ಳ ನಖ್ವಿ ಹಾಜರ್!
ಸಂಭಾವ್ಯ ತಂಡಗಳು
ಭಾರತ: ಅಭಿಷೇಕ್ ಶರ್ಮ, ಇಶಾನ್ ಕಿಶನ್ (ವಿ.ಕೀ.), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ.
ಪಾಕಿಸ್ತಾನ: ಸೈಮ್ ಅಯೂಬ್, ಸಹಬ್ಜಾದಾ ಫರ್ಹಾನ್, ಸಲ್ಮಾನ್ ಅಲಿ ಅಘಾ (ನಾಯಕ), ಬಾಬರ್ ಅಜಮ್, ಉಸ್ಮಾನ್ ಖಾನ್, ಶಾದಾಬ್ ಖಾನ್, ಫಹೀಮ್ ಅಶ್ರಫ್, ಶಾಹೀನ್ ಶಾ ಆಫ್ರಿದಿ, ಸಲ್ಮಾನ್ ಮಿರ್ಜಾ, ಅಬ್ರಾರ್ ಅಹ್ಮದ್, ಉಸ್ಮಾನ್ ತಾರಿಕ್.
ಮುಖಾಮುಖಿ ದಾಖಲೆಗಳು
ಟಿ20 ಅಂತರಾಷ್ಟ್ರೀಯ ಪಂದ್ಯಗಳು
ಒಟ್ಟು ಪಂದ್ಯಗಳು: 16
ಭಾರತದ ಜಯ: 13
ಪಾಕಿಸ್ತಾನದ ಜಯ: 3
ಟೈ: 1
ಟಿ20 ವಿಶ್ವಕಪ್‌ನಲ್ಲಿ
ಒಟ್ಟು ಪಂದ್ಯಗಳು: 8
ಭಾರತದ ಜಯ: 7 (ಒಂದು ಬೌಲ್-ಔಟ್ ಮೂಲಕ ಜಯ)
ಪಾಕಿಸ್ತಾನದ ಜಯ: 1