ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತ vs ಪಾಕ್‌ ಮಹಿಳಾ ಟಿ20 ವಿಶ್ವಕಪ್‌ ಕೌತುಕ; ಇತ್ತಂಡಗಳ ಸಾಧನೆ ಹೇಗಿದೆ?

IND vs PAK Womens T20 World Cup: ಮಹಿಳಾ T20 ವಿಶ್ವಕಪ್‌ನಲ್ಲಿ ಭಾರತ ಮಹಿಳಾ vs ಪಾಕಿಸ್ತಾನ ಮಹಿಳಾ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ ಮತ್ತು ಜಿಯೋಹಾಟ್‌ಸ್ಟಾರ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.

IND vs PAK Women’s T20 World Cup

ಲಂಡನ್‌, ಜೂ.10: ಭಾರತ ತಂಡವು ಜೂನ್ 14 ರಂದು ಎಡ್ಜ್‌ಬಾಸ್ಟನ್‌ನಲ್ಲಿ ಪಾಕಿಸ್ತಾನ ವಿರುದ್ಧ ತನ್ನ ಮಹಿಳಾ ಟಿ20 ವಿಶ್ವಕಪ್(Women's T20 World Cup 2026) ಅಭಿಯಾನವನ್ನು ಆರಂಭಿಸಲಿದೆ. ಪುರುಷರ ಮುಖಾಮುಖಿಯಂತೆ ಈ ಪಂದ್ಯವೂ ಭಾರೀ ಕುತೂಹಲ ಕೆರಳಿಸಿದೆ. ಅದರಲ್ಲೂ ಆಪರೇಷನ್ ಸಿಂಧೂರದ ಬಳಿಕ ಉಭಯ ದೇಶಗಳ ನಡುವಣ ಕ್ರಿಕೆಟ್‌ ಸರಣಿ ಮತ್ತಷ್ಟು ಪೈಪೋಟಿ ಸೃಷ್ಟಿಸಿದೆ. ಭಾರತ ಹಾಲಿ ಏಕದಿನ ಚಾಂಪಿಯನ್ ಆಗಿರುವ ಕಾರಣ ಭಾರತವೇ ಫೇವರಿಟ್‌ ಎನಿಸಿದೆ.

ಭಾರತವು ಬಲಿಷ್ಠ ಆಸ್ಟ್ರೇಲಿಯಾ ಮತ್ತು ಅವಳಿ T20 ಫೈನಲಿಸ್ಟ್‌ಗಳಾದ ದಕ್ಷಿಣ ಆಫ್ರಿಕಾ ತಂಡಗಳನ್ನು ಒಳಗೊಂಡಿರುವ ಗುಂಪಿನಲ್ಲಿ ಸ್ಥಾನ ಪಡೆದಿದೆ. ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ಕೂಡ ಈ ಗುಂಪಿನ ಇತರ ತಂಡಗಳು.

Night club Controversy: ಮೊದಲನೇ ಟೆಸ್ಟ್‌ ಗೆದ್ದ ಬೆನ್ನಲ್ಲೆ ದೊಡ್ಡ ಸಂಕಷ್ಟಕ್ಕೆ ಸಿಲುಕಿದ ಬೆನ್‌ ಸ್ಟೋಕ್ಸ್‌!

ಜೂನ್‌ 14ರಂದು ಪಾಕ್‌ ವಿರುದ್ಧದ ಪಂದ್ಯದ ಬಳಿಕ ಭಾರತ, ಜೂನ್ 17 ರಂದು ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯಕ್ಕಾಗಿ ಹೆಡಿಂಗ್ಲಿಗೆ ಪ್ರಯಾಣ ಬೆಳೆಸಲಿದೆ. ನಂತರ ಜೂನ್ 21 ಮತ್ತು 25 ರಂದು ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶವನ್ನು ಎದುರಿಸಲು ಮ್ಯಾಂಚೆಸ್ಟರ್‌ಗೆ ತೆರಳಲಿದ್ದು, ಜೂನ್ 28 ರಂದು ಲಾರ್ಡ್ಸ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯನ್ನರ ವಿರುದ್ಧ ಅಂತಿಮ ಲೀಗ್ ಹಂತದ ಪಂದ್ಯವನ್ನು ಆಡಲಿದೆ.

ಭಾರತ-ಪಾಕ್‌ ಮುಖಾಮುಖಿ

ಪಂದ್ಯ: 16

ಭಾರತ ಗೆಲುವು: 13

ಪಾಕಿಸ್ತಾನ ಗೆಲುವು: 3

ಟಿ20 ವಿಶ್ವಕಪ್‌ ಮುಖಾಮುಖಿ

ಉಭಯ ತಂಡಗಳು ಟಿ20 ವಿಶ್ವಕಪ್‌ನಲ್ಲಿ 8 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 6 ಪಂದ್ಯಗಳನ್ನು ಗೆದ್ದರೆ, ಪಾಕಿಸ್ತಾನ 2 ಪಂದ್ಯಗಳನ್ನು ಗೆದ್ದಿದೆ. ಮಹಿಳಾ ಟಿ20 ವಿಶ್ವಕಪ್, ಏಷ್ಯಾಕಪ್, ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟ ಸೇರಿದಂತೆ ಮತ್ತು ಜಾಗತಿಕ ಕ್ರೀಡಾಕೂಟಗಳಲ್ಲಿ ಭಾರತವು ಈ ಸ್ವರೂಪದಲ್ಲಿ ಪಾಕಿಸ್ತಾನವನ್ನು ಎದುರಿಸಿದೆ. ಆದರೆ ಈ ಸ್ವರೂಪದಲ್ಲಿ ಭಾರತ ಎಂದಿಗೂ ಪಾಕಿಸ್ತಾನವನ್ನು ದ್ವಿಪಕ್ಷೀಯ ಪಂದ್ಯಗಳಲ್ಲಿ ಎದುರಿಸಿಲ್ಲ.

ಶಿಷ್ಟಾಚಾರ ಉಲ್ಲಂಘನೆ ವಿವಾದ; ಕ್ರಿಕೆಟ್‌ ನಿವೃತ್ತಿಗೆ ಮುಂದಾದ ಬೆನ್‌ ಸ್ಟೋಕ್ಸ್‌

ಎಡ್ಜ್‌ಬಾಸ್ಟನ್ ಕ್ರಿಕೆಟ್ ಮೈದಾನ ಇರುವ ಬರ್ಮಿಂಗ್ಹ್ಯಾಮ್‌ನಲ್ಲಿ ಭಾರತ ಮತ್ತು ಪಾಕಿಸ್ತಾನಿ ಅಪಾರ ಜನ ಸಮುದಾಯವನ್ನು ಹೊಂದಿದ್ದು, ಈ ಪಂದ್ಯಕ್ಕೂ ಹೆಚ್ಚಿನ ಆಸಕ್ತಿ ಇದೆ.

ಮಹಿಳಾ T20 ವಿಶ್ವಕಪ್‌ನಲ್ಲಿ ಭಾರತ ಮಹಿಳಾ vs ಪಾಕಿಸ್ತಾನ ಮಹಿಳಾ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ ಮತ್ತು ಜಿಯೋಹಾಟ್‌ಸ್ಟಾರ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.