Night club Controversy: ಮೊದಲನೇ ಟೆಸ್ಟ್ ಗೆದ್ದ ಬೆನ್ನಲ್ಲೆ ದೊಡ್ಡ ಸಂಕಷ್ಟಕ್ಕೆ ಸಿಲುಕಿದ ಬೆನ್ ಸ್ಟೋಕ್ಸ್!
ನ್ಯೂಜಿಲೆಂಡ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದ ಗೆಲುವಿನ ಬಳಿಕ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಹಾಗೂ ಅವರ ಸಹ ಆಟಗಾರ ಗಸ್ ಅಟ್ಕಿನ್ಸನ್ ಅವರು ಲಂಡನ್‌ನ ನೈಟ್ ಕ್ಲಬ್‌ವೊಂದರಲ್ಲಿ ರಗ್ಬಿ ಆಟಗಾರನ ಜೊತೆಗೆ ಕಿರಿಕ್ ಮಾಡಿಕೊಂಡಿದ್ದಾರೆ. ಇದು ವಿವಾದವನ್ನು ಹುಟ್ಟು ಹಾಕಿದ್ದು, ಇದಕ್ಕಾಗಿ ಇಂಗ್ಲೆಂಡ್ ನಾಯಕನ ವೃತ್ತಿ ಜೀವನದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.
ರಗ್ಬಿ ಆಟಗಾರನ ಜೊತೆಗೆ ಬೆನ್ ಸ್ಟೋಕ್ಸ್ ಕಿರಿಕ್. -
ನವದೆಹಲಿ: ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್(Ben Stokes) ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಂಡನ್‌ನ ನೈಟ್ ಕ್ಲಬ್ ವಿವಾದಕ್ಕೆ (Night club Controversy) ಸಂಬಂಧಿಸಿದಂತೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ECB) ತನಿಖೆಯನ್ನು ನಡೆಸಿತ್ತಿದ್ದು, ಇದು ಬೆನ್ ಸ್ಟೋಕ್ಸ್ ಅವರ ಕ್ರಿಕೆಟ್ ವೃತ್ತಿ ಜೀವನದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಮೂಲವೊಂದರ ಪ್ರಕಾರ, ಇಸಿಬಿ ಈ ಪ್ರಕರಣದಲ್ಲಿ ಸೂಕ್ತ ಕ್ರಮ ಜರುಗಿಸುವುದಕ್ಕೂ ಮೊದಲೇ ಇಂಗ್ಲೆಂಡ್ ಆಲ್‌ರೌಂಡರ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಬಹುದು ಎನ್ನಲಾಗುತ್ತಿದೆ.
ಲಂಡನ್‌ನ ಐತಿಹಾಸಿಕ ಲಾರ್ಡ್ಸ್ ಅಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದ ಗೆಲುವಿನ ಬಳಿಕ ಬೆನ್ ಸ್ಟೋಕ್ಸ್ ಹಾಗೂ ಅವರ ಸಹ ಆಟಗಾರ ಗಸ್ ಅಟ್ಕಿನ್ಸನ್ ಅವರು ಲಂಡನ್‌ನ ಕಿಂಗ್ಸ್ ರಸ್ತೆಯಲ್ಲಿರುವ ರೆಕ್ಸ್ ರೂಮ್ಸ್ ನೈಟ್ ಕ್ಲಬ್‌ಗೆ ತೆರಳಿದ್ದರು. ಈ ವೇಳೆ ರಗ್ಬಿ ಆಟಗಾರನ ಜೊತೆಗೆ ಇಂಗ್ಲೆಂಡ್ ಕ್ರಿಕೆಟ್ ಆಟಗಾರರು ಕಿರಿಕ್ ಮಾಡಿಕೊಂಡಿದ್ದರು. ಅಂದ ಹಾಗೆ ರಾಷ್ಟ್ರೀಯ ತಂಡದ ಸೇವೆಯಲ್ಲಿದ್ದ ಸಂದರ್ಭದಲ್ಲಿ ಈ ರೀತಿ ನೈಟ್ ಕ್ಲಬ್ ಹೋಗುವುದು ನಿಯಮ ಉಲ್ಲಂಘನೆಯಾಗಿದೆ. ಹಾಗಾಗಿ ಸದ್ಯ ಇಸಿಬಿ ಈ ಪ್ರಕರಣದ ತನಿಖೆಯನ್ನು ನಡೆಸುತ್ತಿದೆ.
T20 Mumbai League: ಗಾಯಗೊಂಡ ಬಾಲಕನಿಗೆ ಚೆಂಡು ನೀಡಿ ಫ್ಯಾನ್ಸ್ ಹೃದಯ ಗೆದ್ದ ಮರಿ ತೆಂಡೂಲ್ಕರ್!
ವಿದಾಯವನ್ನು ಪರಿಗಣಿಸುತ್ತಾರಾ ಬೆನ್ ಸ್ಟೋಕ್ಸ್?
ಹಿರಿಯ ಕ್ರಿಕೆಟ್ ವರದಿಗಾರ ಜಾರ್ಜ್ ಡೊಬೆಲ್ ಅವರು ಟಾಕ್ ಸ್ಟೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ಬೆನ್ ಸ್ಟೋಕ್ಸ್ ಅವರು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಯಾವುದೇ ಕ್ರಮ ಕೈಗೊಳ್ಳುವ ಮುನ್ನವೇ ಸ್ವತಃ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
"ನನಗೆ ಲಭ್ಯವಾಗುತ್ತಿರುವ ಮಾಹಿತಿಯ ಪ್ರಕಾರ, ಸ್ಟೋಕ್ಸ್ ಅವರೇ ಸ್ವತಃ ಮೊದಲು ಕ್ರಮ ಕೈಗೊಳ್ಳಲಿದ್ದಾರೆ ಎಂಬ ಆತಂಕವಿದೆ. ವಿಷಾದಕರ ಸಂಗತಿಯೆಂದರೆ, ಅವರು ನಾಯಕತ್ವ ತ್ಯಜಿಸುವುದಷ್ಟೇ ಅಲ್ಲದೆ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಸಾಧ್ಯತೆಯೂ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅವರು ಅನೇಕ ಪಂದ್ಯಗಳಲ್ಲಿ ಸಂಕಷ್ಟದಿಂದ ತಂಡವನ್ನು ಪಾರು ಮಾಡಿದಂತೆ ಈ ಪರಿಸ್ಥಿತಿಯನ್ನೂ ನಿಭಾಯಿಸುತ್ತಾರೆ ಎಂದು ನಾನು ಆಶಿಸುತ್ತೇನೆ. ಆದರೆ ನನಗೆ ದೊರೆಯುತ್ತಿರುವ ಮಾಹಿತಿಯ ಪ್ರಕಾರ, ಅವರಿಗೆ ಯಾವುದೋ ರೀತಿಯ ಅಂತಿಮ ಎಚ್ಚರಿಕೆ ನೀಡಿರಬಹುದು," ಎಂದು ಡೊಬೆಲ್ ತಿಳಿಸಿದ್ದಾರೆ.
🚨Street fight alert 🚨
— ᴄʀɪᴄᴋᴇᴛ ʟᴏᴠᴇʀ (@criclover451807) June 9, 2026
Ben Stokes and Gus Atkinson involved in a nightclub street fighting after England's Test win.
-It didn't confirmed that who is person knocked out by stokes with his punch👊
-Reports coming that his captaincy may in danger#ENGvsNZ #TestCricket… pic.twitter.com/ewCvfWtxsl
ಏನಿದು ನೈಟ್ ಕ್ಲಬ್ ವಿವಾದ?
ಗಸ್ ಅಟ್ಕಿನ್ಸನ್ ಮತ್ತು ರಗ್ಬಿ ಆಟಗಾರನ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಈ ವೇಳೆ ರಗ್ಬಿ ಆಟಗಾರ, ಅಟ್ಕಿನ್ಸನ್ ಅವರನ್ನು ಗುರಿಯಾಗಿಸಿಕೊಂಡು ಪಂಚ್ ನೀಡಲು ಮುಂದಾದರು, ಆದರೆ ಇದು ತಪ್ಪಿ ಇಸಿಬಿಯ ಭದ್ರತಾ ಸಿಬ್ಬಂದಿಯೊಬ್ಬರಿಗೆ ತಗುಲಿತು. ಗಾಯಗೊಂಡ ಭದ್ರತಾ ಸಿಬ್ಬಂದಿಗೆ ಹೊಲಿಗೆ ಹಾಕಬೇಕಾದ ಪರಿಸ್ಥಿತಿ ಉಂಟಾಯಿತು. ಆದರೆ, ಈ ಘಟನೆಯಲ್ಲಿ ಗಸ್ ಅಟ್ಕಿನ್ಸನ್ ಮತ್ತು ಬೆನ್ ಸ್ಟೋಕ್ಸ್ ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
ಐರ್ಲೆಂಡ್, ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗಳಿಂದ ಮೊಹಮ್ಮದ್ ಸಿರಾಜ್ ವಿಶ್ರಾಂತಿ!
ಈ ಇತ್ತೀಚಿನ ಘಟನೆ ಬಳಿಕ ಸ್ಟೋಕ್ಸ್ ಅವರ ನಾಯಕತ್ವದ ಮೇಲೆ ಪ್ರಶ್ನೆಗಳು ಮೂಡಿವೆ. ಇದಕ್ಕೂ ಮುನ್ನ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ, ಹ್ಯಾರಿ ಬ್ರೂಕ್ ಮತ್ತು ಬೆನ್ ಡಕೆಟ್ ಅವರನ್ನು ಒಳಗೊಂಡ ವಿವಾದಾತ್ಮಕ ಘಟನೆಗಳ ಕಾರಣದಿಂದ ಟೀಕೆಗೆ ಗುರಿಯಾಗಿತ್ತು. ವಿಶೇಷವಾಗಿ ದಿ ಆಷಸ್ ಟೆಸ್ಟ್ ಸರಣಿಯ ವೇಳೆ ನಡೆದ ಘಟನೆಗಳ ಬಳಿಕ, ಆಟಗಾರರಿಗಾಗಿ ಮಧ್ಯರಾತ್ರಿ ಕರ್ಫ್ಯೂ ಸೇರಿದಂತೆ ಹಲವು ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿತ್ತು.