ಮುಲ್ಲಾನ್‌ಪುರ, ಡಿ.12: ಭಾರತ ತಂಡ, ದಕ್ಷಿಣ ಆಫ್ರಿಕಾ(IND vs SA) ವಿರುದ್ಧ 2ನೇ ಟಿ20 ಪಂದ್ಯದಲ್ಲಿ 51 ರನ್ ಸೋಲನುಭವಿಸುದರೊಂದಿಗೆ 5 ಪಂದ್ಯಗಳ ಸರಣಿ 1-1 ಸಮಬಲಗೊಂಡಿದೆ. ದ್ವಿತೀಯ ಪಂದ್ಯದಲ್ಲಿ 54 ರನ್ ಬಿಟ್ಟುಕೊಟ್ಟ ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್(Arshdeep Singh) ಅವರು ಅನಗತ್ಯ ದಾಖಲೆಯೊಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್‌ನ 11ನೇ ಓವರ್‌ನಲ್ಲಿ ಅರ್ಶ್‌ದೀಪ್ ಸಿಂಗ್ 7 ವೈಡ್ ಸೇರಿ ಒಟ್ಟು 18 ರನ್ ನೀಡಿದರು. ಇದರೊಂದಿಗೆ ಅಂತಾರಾಷ್ಟ್ರೀಯ ಟಿ20ಯಲ್ಲಿ ಒಂದೇ ಓವರ್‌ನಲ್ಲಿ 7 ವೈಡ್ ಎಸೆದ ಮೊದಲ ಬೌಲರ್ ಎಂಬ ಕುಖ್ಯಾತಿಗೆ ಅರ್ಶ್‌ದೀಪ್ ಪಾತ್ರರಾದರು. ಇನ್ನು, ಅಂ.ರಾ ಟಿ20ಯಲ್ಲಿ ಜಂಟಿ ಅತಿ ದೀರ್ಘ ಓವರ್(13 ಎಸೆತ) ಎಂಬ ಕೆಟ್ಟ ದಾಖಲೆಯನ್ನೂ ಅರ್ಶ್‌ದೀಪ್ ತಮ್ಮದಾಗಿಸಿಕೊಂಡರು. 2024ರಲ್ಲಿ ಜಿಂಬಾಬ್ವೆ ವಿರುದ್ಧ ಅಫ್ಘಾನಿಸ್ತಾನದ ನವೀನ್ ಉಲ್ ಹಕ್ ಕೂಡಾ 13 ಎಸೆತ ದಾಖಲಿಸಿದ್ದರು. ಅದರಲ್ಲಿ 6 ವೈಡ್‌ಗಳಿದ್ದವು. ಅರ್ಶ್‌ದೀಪ್‌ಗೂ ಮುನ್ನ ಖಲೀಲ್ ಅಹ್ಮದ್ ಮತ್ತು ಹಾರ್ದಿಕ್ ಪಾಂಡ್ಯ ದೀರ್ಘ ಓವರ್ ಎಸೆದಿದ್ದರು. ಉಭಯ ಆಟಗಾರರು 11 ಎಸೆತ ಎಸೆದಿದ್ದರು.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿ; ಪಾಕ್‌ಗಿಂತಲೂ ಕೆಳ ಸ್ಥಾನಕ್ಕೆ ಕುಸಿದ ಭಾರತ
ಟಿ20ಐಗಳಲ್ಲಿ ಭಾರತೀಯ ಬೌಲರ್ ಎಸೆದ ಅತಿ ದೀರ್ಘ ಓವರ್
ಅರ್ಶ್‌ದೀಪ್ ಸಿಂಗ್ - 13 ಎಸೆತಗಳು (18 ರನ್‌ಗಳು) ದಕ್ಷಿಣ ಆಫ್ರಿಕಾ ವಿರುದ್ಧ, ನ್ಯೂ ಚಂಡೀಗಢ 2025
ಖಲೀಲ್ ಅಹ್ಮದ್ - 11 ಎಸೆತಗಳು (11 ರನ್‌ಗಳು) ಶ್ರೀಲಂಕಾ ವಿರುದ್ಧ, ಪಲ್ಲೆಕೆಲೆ 2024
ಹಾರ್ದಿಕ್ ಪಾಂಡ್ಯ - 11 ಎಸೆತಗಳು (19 ರನ್‌ಗಳು) ಆಸ್ಟ್ರೇಲಿಯಾ ವಿರುದ್ಧ, ಅಡಿಲೇಡ್ 2016
ಅರ್ಶ್‌ದೀಪ್ ಸಿಂಗ್ - 10 ಎಸೆತಗಳು (13 ರನ್‌ಗಳು) ಐರ್ಲೆಂಡ್ ವಿರುದ್ಧ, ನ್ಯೂಯಾರ್ಕ್ 2024
ಅರ್ಶ್‌ದೀಪ್ ಸಿಂಗ್ - 10 ಎಸೆತಗಳು (6 ರನ್‌ಗಳು) ವೆಸ್ಟ್ ಇಂಡೀಸ್ ವಿರುದ್ಧ, ತರೋಬಾ 2023
ಟಿ20ಗಳಲ್ಲಿ (ಪೂರ್ಣ ಸದಸ್ಯ ರಾಷ್ಟ್ರಗಳು) ಬೌಲರ್ ಒಬ್ಬರಿಂದ ಅತಿ ದೀರ್ಘ ಓವರ್
ಅರ್ಶ್‌ದೀಪ್ ಸಿಂಗ್ - 13 ಎಸೆತಗಳು (18 ರನ್‌ಗಳು) ದಕ್ಷಿಣ ಆಫ್ರಿಕಾ ವಿರುದ್ಧ, ನ್ಯೂ ಚಂಡೀಗಢ 2025
ನವೀನ್-ಉಲ್-ಹಕ್ - 13 ಎಸೆತಗಳು (19 ರನ್‌ಗಳು) ಜಿಂಬಾಬ್ವೆ ವಿರುದ್ಧ, ಹರಾರೆ 2024
ಸಿಸಂದಾ ಮಗಲಾ - 12 ಎಸೆತಗಳು (18 ರನ್‌ಗಳು) ಪಾಕಿಸ್ತಾನ ವಿರುದ್ಧ, ಜೋಹಾನ್ಸ್‌ಬರ್ಗ್ 2021
ಮಾರ್ಕ್ ಅಡೈರ್ - 11 ಎಸೆತಗಳು (26 ರನ್‌ಗಳು) ಆಸ್ಟ್ರೇಲಿಯಾ ವಿರುದ್ಧ, ಬ್ರಿಸ್ಬೇನ್ 2022