ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿ; ಪಾಕ್‌ಗಿಂತಲೂ ಕೆಳ ಸ್ಥಾನಕ್ಕೆ ಕುಸಿದ ಭಾರತ
WTC Points Table: ಆಸ್ಟ್ರೇಲಿಯಾ ತಂಡವು ಈ ವರೆಗೂ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಿದೆ. ಇಲ್ಲಿಯವರೆಗೆ ಐದು ಪಂದ್ಯಗಳನ್ನು ಆಡಿದೆ, ಎಲ್ಲವನ್ನೂ ಗೆದ್ದಿದೆ. ಅದರ PCT 100 ಪ್ರತಿಶತ, ಮತ್ತು ಅದು ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ 75 ಪ್ರತಿಶತ PCT ಯೊಂದಿಗೆ ಎರಡನೇ ಸ್ಥಾನದಲ್ಲಿದೆ.
New Zealand vs West Indies -
ವೆಲ್ಲಿಂಗ್ಟನ್, ಡಿ.12: ವೆಸ್ಟ್ ಇಂಡೀಸ್(New Zealand vs West Indies) ವಿರುದ್ಧ ನಡೆಯುತ್ತಿರುವ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಅದ್ಭುತ ಪ್ರದರ್ಶನ ನೀಡಿ ಒಂಬತ್ತು ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಜತೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ(WTC Points Table)ಯೂ ಪ್ರಗತಿ ಸಾಧಿಸಿತು. ಆದರೆ ಕಿವೀಸ್ ಗೆಲುವಿನಿಂದ ಭಾರತ ಐದನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಕುಸಿದಿದೆ.
ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ ತಂಡ ವಿಶ್ವ ಟೆಸ್ಟ್ ಅಂಕಪಟ್ಟಿಯಲ್ಲಿ ತನ್ನ ಖಾತೆಯನ್ನು ತೆರೆಯಿತು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ನ್ಯೂಜಿಲೆಂಡ್ ಈವರೆಗೂ ಎರಡು ಪಂದ್ಯಗಳನ್ನು ಆಡಿದ್ದು, ಒಂದು ಗೆಲುವು, ಒಂದು ಡ್ರಾ ಮಾಡಿಕೊಂಡಿದೆ. ತಂಡದ PCT ಶೇ. 66.67 ರಷ್ಟಿದ್ದು, 3ನೇ ಸ್ಥಾನಕ್ಕೆ ತಲುಪಿದೆ. ಮತ್ತೊಂದೆಡೆ, ಶ್ರೀಲಂಕಾ ಕೂಡ ಇದೇ ಪಿಸಿಟಿಯನ್ನು ಹೊಂದಿದ್ದರೂ ನ್ಯೂಜಿಲೆಂಡ್‌ಗಿಂತ ಒಂದು ಸ್ಥಾನ ಕೆಳಗಿದೆ. ಎರಡನೇ ಟೆಸ್ಟ್ ಪಂದ್ಯಕ್ಕೂ ಮೊದಲು, ನ್ಯೂಜಿಲೆಂಡ್ WTC ಅಂಕಪಟ್ಟಿಯಲ್ಲಿ ಆರನೇ ಸ್ಥಾನವನ್ನು ಪಡೆದುಕೊಂಡಿತ್ತು.
ಇದನ್ನೂ ಓದಿ IND vs SA: ಕ್ವಿಂಟಕ್ ಡಿ ಕಾಕ್ ಅಬ್ಬರ, ಭಾರತ ತಂಡಕ್ಕೆ ತಿರುಗೇಟು ನೀಡಿದ ದಕ್ಷಿಣ ಆಫ್ರಿಕಾ!
ಆಸ್ಟ್ರೇಲಿಯಾ ತಂಡವು ಈ ವರೆಗೂ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಿದೆ. ಇಲ್ಲಿಯವರೆಗೆ ಐದು ಪಂದ್ಯಗಳನ್ನು ಆಡಿದೆ, ಎಲ್ಲವನ್ನೂ ಗೆದ್ದಿದೆ. ಅದರ PCT 100 ಪ್ರತಿಶತ, ಮತ್ತು ಅದು ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ 75 ಪ್ರತಿಶತ PCT ಯೊಂದಿಗೆ ಎರಡನೇ ಸ್ಥಾನದಲ್ಲಿದೆ.
ಭಾರತದ ಬದ್ಧ ಎದುರಾಳಿ ಪಾಕಿಸ್ತಾನ ಕೂಡ ಭಾರತಕ್ಕಿಂತ ಮೇಲಿನ ಸ್ಥಾನ ಪಡೆದಿದೆ. ಶೇ. 50 ಗೆಲುವಿನ ಪ್ರತಿಶತದೊಂದಿಗೆ 5ನೇ ಸ್ಥಾನದಲ್ಲಿದೆ.
ಮೊದಲ ಟೆಸ್ಟ್‌ನಲ್ಲಿ ಅಸಾಮಾನ್ಯ ಬ್ಯಾಟಿಂಗ್ ಮೂಲಕ ಡ್ರಾ ಮಾಡಿಕೊಂಡಿದ್ದ ವಿಂಡೀಸ್ ಈ ಪಂದ್ಯದಲ್ಲಿ ಎಡವಿತು. 56 ರನ್ಗಳ ಸಾಮಾನ್ಯ ಗುರಿಯನ್ನು ಕಿವೀಸ್ ಪಡೆದ 10 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಜಾಕೋಬ್ ಡಫಿ ನ್ಯೂಜಿಲೆಂಡ್ ಪರ ಅದ್ಭುತ ಪ್ರದರ್ಶನ ನೀಡಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆದು ವೆಸ್ಟ್ ಇಂಡೀಸ್‌ಗೆ ಕಾಡಿದರು. ಪಂದ್ಯ ಕೇವಲ 3 ದಿನಗಳಲ್ಲಿ ಮುಕ್ತಾಯ ಕಂಡಿತು.
ಅಂಕಪಟ್ಟಿ
ಆಸ್ಟ್ರೇಲಿಯಾ- 100 ಅಂಕ
ದಕ್ಷಿಣ ಆಫ್ರಿಕಾ-75 ಅಂಕ
ಶ್ರೀಲಂಕಾ-66.67 ಅಂಕ
ನ್ಯೂಜಿಲ್ಯಾಂಡ್-66.67 ಅಂಕ
ಪಾಕಿಸ್ತಾನ-50 ಅಂಕ
ಭಾರತ- 48.15 ಅಂಕ
ಇಂಗ್ಲೆಂಡ್-30.95 ಅಂಕ
ಬಾಂಗ್ಲಾದೇಶ- 16.67 ಅಂಕ
ವೆಸ್ಟ್ ಇಂಡೀಸ್- 4.76 ಅಂಕ