ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs SA: ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್‌ ಸರಣಿ ಹಿನ್ನೋಟ

ಕಳೆದ ತಿಂಗಳು ಪಾಕಿಸ್ತಾನದಲ್ಲಿ ನಡೆದ ಟೆಸ್ಟ್ ಸರಣಿಯನ್ನು 1-1 ಅಂತರದಿಂದ ಡ್ರಾ ಮಾಡಿಕೊಂಡಿದ್ದ ದಕ್ಷಿಣ ಆಫ್ರಿಕಾ, ಭಾರತದ ಪರಿಸ್ಥಿತಿಗಳಲ್ಲಿ ತನ್ನ ಸ್ಪಿನ್ನರ್‌ ಹಿಡಿತ ಸಾಧಿಸಬಹುದು ಎಂದು ನಂಬಿದೆ. ನಾಯಕ ಟೆಂಬಾ ಬವುಮಾ ಕೂಡ ಅನುಭವಿ ಭಾರತೀಯ ಬೌಲರ್‌ಗಳ ವಿರುದ್ಧ ತಮ್ಮ ಬ್ಯಾಟಿಂಗ್‌ನಲ್ಲಿ ಹಿಡಿತ ಸಾಧಿಸಬಹುದು.

ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್‌  ಸರಣಿ ಹಿನ್ನೋಟ

ನಾಯಕರಾದ ಶುಭಮನ್‌ ಗಿಲ್‌ ಮತ್ತು ಟೆಂಬ ಬವುಮಾ ಕುಶಲೋಪರಿ -

Abhilash BC
Abhilash BC Nov 13, 2025 10:52 AM

ಕೋಲ್ಕತಾ: ಭಾರತ ಮತ್ತು ದಕ್ಷಿಣ ಆಫ್ರಿಕಾ(IND vs SA) ತಂಡಗಳು ಶುಕ್ರವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಆರಂಭವಾಗುವ ಎರಡು ಪಂದ್ಯಗಳ ಟೆಸ್ಟ್(India vs South Africa Tests) ಸರಣಿಯ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. 2019 ರಲ್ಲಿ ಕೊನೆಯ ಬಾರಿಗೆ ಟೆಸ್ಟ್ ಸರಣಿಗಾಗಿ ಹರಿಣ ಪಡೆ ಭಾರತಕ್ಕೆ ಪ್ರವಾಸ ಮಾಡಿತ್ತು. ಆಗ 3-0 ಅಂತರದಿಂದ ಸೋಲನುಭವಿಸಿದ್ದರು.

2010 ರಿಂದ ದಕ್ಷಿಣ ಆಫ್ರಿಕಾ ಭಾರತದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದಿಲ್ಲ. ಆದರೆ ವಿಶ್ವ ಟೆಸ್ಟ್ ಚಾಂಪಿಯನ್ ಈ ಬಾರಿ ಆ ಅಸಂಭವತೆಯನ್ನು ಮುರಿಯುವ ವಿಶ್ವಾಸದಲ್ಲಿದ್ದಾರೆ. ಕಳೆದ ವರ್ಷ ಕಿವೀಸ್‌ ವಿರುದ್ಧ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 3-0 ಅಂತರದ ಸೋಲು ಕಂಡಿತ್ತು. ಈ ಮೂಲಕ ತವರಿನಲ್ಲಿ ಟೆಸ್ಟ್ ಪಂದ್ಯಗಳಲ್ಲಿ ದೀರ್ಘಕಾಲ ಹೊಂದಿದ್ದ ಅಜೇಯ ಗೆಲುವಿನ ದಾಖಲೆಯನ್ನು ಕಳೆದುಕೊಂಡಿತ್ತು. ಆದಾಗ್ಯೂ, ಹೊಸದಾಗಿ ನೇಮಕಗೊಂಡ ಟೆಸ್ಟ್ ನಾಯಕ ಶುಭಮನ್ ಗಿಲ್ ನೇತೃತ್ವದಲ್ಲಿ, ಭಾರತವು ಇಂಗ್ಲೆಂಡ್‌ನಲ್ಲಿ ಡ್ರಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ 2-0 ಅಂತರದ ಗೆಲುವು ಸಾಧಿಸಿತ್ತು.

ಕಳೆದ ತಿಂಗಳು ಪಾಕಿಸ್ತಾನದಲ್ಲಿ ನಡೆದ ಟೆಸ್ಟ್ ಸರಣಿಯನ್ನು 1-1 ಅಂತರದಿಂದ ಡ್ರಾ ಮಾಡಿಕೊಂಡಿದ್ದ ದಕ್ಷಿಣ ಆಫ್ರಿಕಾ, ಭಾರತದ ಪರಿಸ್ಥಿತಿಗಳಲ್ಲಿ ತನ್ನ ಸ್ಪಿನ್ನರ್‌ ಹಿಡಿತ ಸಾಧಿಸಬಹುದು ಎಂದು ನಂಬಿದೆ. ನಾಯಕ ಟೆಂಬಾ ಬವುಮಾ ಕೂಡ ಅನುಭವಿ ಭಾರತೀಯ ಬೌಲರ್‌ಗಳ ವಿರುದ್ಧ ತಮ್ಮ ಬ್ಯಾಟಿಂಗ್‌ನಲ್ಲಿ ಹಿಡಿತ ಸಾಧಿಸಬಹುದು.

ಮುಖಾಮುಖಿ

ಉಭಯ ತಂಡಗಳು ಇದುವರೆಗೆ ಟೆಸ್ಟ್‌ನಲ್ಲಿ ಒಟ್ಟು 44 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 16 ಪಂದ್ಯ ಗೆದ್ದರೆ, ದಕ್ಷಿಣ ಆಫ್ರಿಕಾ 18 ಪಂದ್ಯ ಜಯಿಸಿದೆ. 10 ಪಂದ್ಯಗಳು ಡ್ರಾಗೊಂಡಿದೆ. ಕೊನೆಯ ಬಾರಿಗೆ 2024ರಲ್ಲಿ ಕೇಪ್‌ಟೌನ್‌ನಲ್ಲಿ ಆಡಿದ್ದ ಪಂದ್ಯದಲ್ಲಿ ಭಾರತ 7 ವಿಕೆಟ್‌ ಅಂತರದ ಗೆಲುವು ಸಾಧಿಸಿತ್ತು. ಕೊನೆಯ ಐದು ಪಂದ್ಯಗಳ ಫಲಿತಾಂಶ ನೋಡುವುದಾದರೆ ಭಾರತ 2, ದಕ್ಷಿಣ ಆಫ್ರಿಕಾ 3 ಪಂದ್ಯ ಗೆದ್ದಿದೆ.

ಭಾರತದಲ್ಲಿ ಉಭಯ ತಂಡಗಳ ಮುಖಾಮುಖಿ

ಭಾರತದಲ್ಲಿ ಉಭಯ ತಂಡಗಳ ಟೆಸ್ಟ್‌ ಮುಖಾಮುಖಿ ದಾಖಲೆ ನೋಡುವುದಾದರೆ, ಇದುವರೆಗೆ 19 ಪಂದ್ಯಗಳನ್ನು ಆಡಿದ್ದು, ಭಾರತ 11 ಮತ್ತು ದಕ್ಷಿಣ ಆಫ್ರಿಕಾ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 3 ಪಂದ್ಯ ಡ್ರಾಗೊಂಡಿದೆ.

ಭಾರತ vs ದಕ್ಷಿಣ ಆಫ್ರಿಕಾ ತಂಡಗಳ ಅತಿ ಹೆಚ್ಚು/ ಅತಿ ಕಡಿಮೆ ಮೊತ್ತ

ಭಾರತ (ಅತ್ಯಧಿಕ ಸ್ಕೋರ್) - 643/6 - ಈಡನ್ ಗಾರ್ಡನ್ಸ್, 2010

ಭಾರತ (ಕಡಿಮೆ ಸ್ಕೋರ್) - 66 ಆಲ್ ಔಟ್ - ಡರ್ಬನ್, 1996

ದಕ್ಷಿಣ ಆಫ್ರಿಕಾ (ಅತ್ಯಧಿಕ ಸ್ಕೋರ್) - 620/4 - ಸೆಂಚುರಿಯನ್, 2010

ದಕ್ಷಿಣ ಆಫ್ರಿಕಾ (ಕಡಿಮೆ ಸ್ಕೋರ್) - 55 ಆಲ್ ಔಟ್ - ಕೇಪ್ ಟೌನ್, 2024

ಅತ್ಯುತ್ತಮ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ

ವೀರೇಂದ್ರ ಸೆಹ್ವಾಗ್ (ಭಾರತ) - 319 - ಚೆನ್ನೈ, 2008

ಶಾರ್ದುಲ್ ಠಾಕೂರ್ (ಭಾರತ) - 7/61 - ಜೋಹಾನ್ಸ್‌ಬರ್ಗ್, 2022

ಹಾಶಿಮ್ ಆಮ್ಲಾ (ದಕ್ಷಿಣ ಆಫ್ರಿಕಾ) - 253* - ನಾಗ್ಪುರ, 2010

ಲ್ಯಾನ್ಸ್ ಕ್ಲೂಸ್ನರ್ (ದಕ್ಷಿಣ ಆಫ್ರಿಕಾ) - 8/64 - ಈಡನ್ ಗಾರ್ಡನ್ಸ್, 1996

ಇದನ್ನೂ ಓದಿ IND vs SA Test: ದಕ್ಷಿಣ ಆಫ್ರಿಕಾ ಟೆಸ್ಟ್‌ ಸರಣಿಯಲ್ಲಿ ಭಾರತೀಯ ಆಟಗಾರರು ನಿರ್ಮಿಸಬಹುದಾದ ದಾಖಲೆಗಳ ಪಟ್ಟಿ

ಅತಿ ಹೆಚ್ಚು ರನ್‌ಗಳು

ಸಚಿನ್‌ ತೆಂಡೂಲ್ಕರ್‌- 1741 ರನ್‌

ಜಾಕ್‌ ಕ್ಯಾಲಿಸ್‌- 1734 ರನ್‌

ಹಶಿಮ್ ಆಮ್ಲಾ-1528 ರನ್‌

ಅತ್ಯಧಿಕ ವಿಕೆಟ್‌

ಅನಿಲ್‌ ಕುಂಬ್ಳೆ- 84 ವಿಕೆಟ್‌

ಡೇಲ್‌ ಸ್ಟೇನ್‌ -65 ವಿಕೆಟ್‌

ಜಾವಗಲ್‌ ಶ್ರೀನಾಥ್‌- 64 ವಿಕೆಟ್‌