ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs SA: ಗಾಯಳು ಶುಭಮನ್ ಗಿಲ್ ಬದಲಿಗೆ ಮತ್ತೆ ತಂಡ ಸೇರಿದ ನಿತೀಶ್ ರೆಡ್ಡಿ

India vs South Africa 2nd Test: ಗಿಲ್ ಸಕಾಲದಲ್ಲಿ ಫಿಟ್ನೆಸ್ ಮರಳಿ ಪಡೆಯದಿದ್ದರೆ ಗುವಾಹಟಿಯಲ್ಲಿ ಆಡುವ ಹನ್ನೊಂದರ ತಂಡದಲ್ಲಿ ನಿತೀಶ್‌ ರೆಡ್ಡಿ ಸ್ಥಾನ ಪಡೆಯಲು ಮತ್ತೊಮ್ಮೆ ಪೈಪೋಟಿಯಲ್ಲಿರಬಹುದು. ಏತನ್ಮಧ್ಯೆ, ಸರಣಿಯ ಮೊದಲ ಪಂದ್ಯದಲ್ಲಿ ಭಾರತ 30 ರನ್‌ಗಳಿಂದ ಸೋತ ನಂತರ ಸರಣಿಯನ್ನು ಉಳಿಸಿಕೊಳ್ಳಲು ಎರಡನೇ ಪಂದ್ಯದಲ್ಲಿ ಗೆಲ್ಲಲ್ಲೇ ಬೇಕಾದ ಒತ್ತಡದಲ್ಲಿದೆ.

ಗುವಾಹಟಿ ಟೆಸ್ಟ್‌ಗಾಗಿ ತಂಡ ಸೇರಿದ ಆಲ್‌ರೌಂಡರ್‌ನಿತೀಶ್ ರೆಡ್ಡಿ

ಗುವಾಹಟಿ: ದಕ್ಷಿಣ ಆಫ್ರಿಕಾ(IND vs SA) ವಿರುದ್ಧದ ಎರಡನೇ ಟೆಸ್ಟ್(India vs South Africa 2nd Test) ಪಂದ್ಯಕ್ಕೆ ಮುನ್ನ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ(Nitish Reddy) ಅವರನ್ನು ಭಾರತ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಗಾಯಗೊಂಡಿರುವ ನಾಯಕ ಶುಭಮನ್ ಗಿಲ್(Shubman Gill) ಬದಲಿಗೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ನವೆಂಬರ್ 22 ರಂದು ಗುವಾಹಟಿಯ ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ.

ಕೋಲ್ಕತ್ತಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಶುಭಮನ್‌ ಗಿಲ್‌ ಸ್ವೀಪ್‌ ಮಾಡುವ ಯತ್ನದಲ್ಲಿ ಕುತ್ತಿಗೆಗೆ ಗಾಯ ಮಾಡಿಕೊಂಡಿದ್ದರು. ನಿತೀಶ್ ಕುಮಾರ್ ರೆಡ್ಡಿಯನ್ನು ಈ ಸರಣಿಗೆ ಆಯ್ಕೆ ಮಾಡಲಾಗಿತ್ತಾದರೂ ಮೊದಲ ಪಂದ್ಯಕ್ಕೆ ಎರಡು ದಿನ ಮುನ್ನ ತಂಡದಿಂದ ಕೈಬಿಡಲಾಗಿತ್ತು. ಮತ್ತು ದಕ್ಷಿಣ ಆಫ್ರಿಕಾ ಎ ತಂಡದ ಎದುರಿನ ಸರಣಿಗೆ ಸೇರಿಸಿಕೊಳ್ಳಲಾಗಿತ್ತು. ಇದೀಗ ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಪಿಟಿಐ ವರದಿಯ ಪ್ರಕಾರ, ಗಿಲ್ ತಂಡದೊಂದಿಗೆ ಗುವಾಹಟಿಗೆ ಪ್ರಯಾಣಿಸಲಿದ್ದಾರೆ, ಆದರೆ ಅವರ ಕುತ್ತಿಗೆಯಲ್ಲಿನ ಬಿಗಿತವನ್ನು ಗಮನಿಸಿದರೆ, ಎರಡನೇ ಟೆಸ್ಟ್ ಆಡುವ ಸಾಧ್ಯತೆಗಳು ಕಡಿಮೆಯಾಗಿವೆ. ಗುವಾಹಟಿಗೆ ಬರಲು ಸಾಧ್ಯವಾಗದಿದ್ದರೆ, ಅವರು ಕೋಲ್ಕತ್ತಾದಿಂದ ಬೆಂಗಳೂರಿನಲ್ಲಿರುವ ಬಿಸಿಸಿಐ ಸಿಒಇಗೆ ವಿಮಾನದಲ್ಲಿ ಹೋಗಲಿದ್ದಾರೆ. ಏಕೆಂದರೆ ಅವರ ಪ್ರಯಾಣದ ಸಾಮರ್ಥ್ಯದ ಮೇಲೆ ಯಾವುದೇ ನಿರ್ಬಂಧಗಳಿಲ್ಲ.

ಇದನ್ನೂ ಓದಿ Temba Bavuma: ಗುವಾಹಟಿ ಟೆಸ್ಟ್‌ನಲ್ಲಿ ವಿಶ್ವ ದಾಖಲೆ ಬರೆಯುವ ಸನಿಹ ಟೆಂಬಾ ಬವುಮಾ

ಗಿಲ್ ಸಕಾಲದಲ್ಲಿ ಫಿಟ್ನೆಸ್ ಮರಳಿ ಪಡೆಯದಿದ್ದರೆ ಗುವಾಹಟಿಯಲ್ಲಿ ಆಡುವ ಹನ್ನೊಂದರ ತಂಡದಲ್ಲಿ ನಿತೀಶ್‌ ರೆಡ್ಡಿ ಸ್ಥಾನ ಪಡೆಯಲು ಮತ್ತೊಮ್ಮೆ ಪೈಪೋಟಿಯಲ್ಲಿರಬಹುದು. ಏತನ್ಮಧ್ಯೆ, ಸರಣಿಯ ಮೊದಲ ಪಂದ್ಯದಲ್ಲಿ ಭಾರತ 30 ರನ್‌ಗಳಿಂದ ಸೋತ ನಂತರ ಸರಣಿಯನ್ನು ಉಳಿಸಿಕೊಳ್ಳಲು ಎರಡನೇ ಪಂದ್ಯದಲ್ಲಿ ಗೆಲ್ಲಲ್ಲೇ ಬೇಕಾದ ಒತ್ತಡದಲ್ಲಿದೆ.

ಭಾರತ ತಂಡ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ವಾಷಿಂಗ್ಟನ್ ಸುಂದರ್,, ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ (ವಿ.ಕೀ.), ರವೀಂದ್ರ ಜಡೇಜಾ, ಧ್ರುವ್ ಜುರೆಲ್,ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ದಕ್ಷಿಣ ಆಫ್ರಿಕಾ ತಂಡ: ಐಡೆನ್ ಮಾರ್ಕ್ರಮ್, ರಿಯಾನ್ ರಿಕೆಲ್ಟನ್, ವಿಯಾನ್ ಮುಲ್ಡರ್, ಟೆಂಬಾ ಬವುಮಾ (ನಾಯಕ), ಟೋನಿ ಡಿ ಜೋರ್ಜಿ, ಟ್ರಿಸ್ಟಾನ್ ಸ್ಟಬ್ಸ್, ಕೈಲ್ ವೆರ್ರೆನ್ನೆ (ವಿ.ಕೀ.), ಮಾರ್ಕೊ ಜಾನ್ಸೆನ್, ಕಾರ್ಬಿನ್ ಬಾಷ್, ಸೈಮನ್ ಹಾರ್ಮರ್, ಕೇಶವ ಮಹಾರಾಜ್, ಡೆವಾಲ್ಡ್ ಬ್ರೆವಿಸ್, ಕಗಿಸೊ ರಬಾಡ, ಸೆನುರಾನ್ ಮುತ್ತುಸಾಮಿ, ಜುಬೇರ್ ಹಮ್ಜಾ.