ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Temba Bavuma: ಗುವಾಹಟಿ ಟೆಸ್ಟ್‌ನಲ್ಲಿ ವಿಶ್ವ ದಾಖಲೆ ಬರೆಯುವ ಸನಿಹ ಟೆಂಬಾ ಬವುಮಾ

India vs South Africa 2nd Test: ಟೆಂಬಾ ಬವುಮಾ ಟೆಸ್ಟ್‌ನಲ್ಲಿ ನಾಯಕನಾಗಿ 1000 ರನ್‌ಗಳನ್ನು ಪೂರ್ಣಗೊಳಿಸಲು ಕೇವಲ 31 ರನ್‌ಗಳ ಅಗತ್ಯವಿದೆ. ಅವರು ಇದುವರೆಗೆ 11 ಟೆಸ್ಟ್‌ಗಳಲ್ಲಿ ದಕ್ಷಿಣ ಆಫ್ರಿಕಾವನ್ನು ಮುನ್ನಡೆಸಿದ್ದಾರೆ ಮತ್ತು ಮೂರು ಶತಕಗಳು ಮತ್ತು ಆರು ಅರ್ಧಶತಕಗಳೊಂದಿಗೆ 57 ರ ಸರಾಸರಿಯಲ್ಲಿ 969 ರನ್‌ಗಳನ್ನು ಗಳಿಸಿದ್ದಾರೆ.

ದ್ವಿತೀಯ ಟೆಸ್ಟ್‌ನಲ್ಲಿ ಹಲವು ದಾಖಲೆ ಮೇಲೆ ಕಣ್ಣಿಟ್ಟ ಟೆಂಬಾ ಬವುಮಾ

ದ್ವಿತೀಯ ಟೆಸ್ಟ್‌ನಲ್ಲಿ ಹಲವು ದಾಖಲೆ ಮೇಲೆ ಕಣ್ಣಿಟ್ಟ ಟೆಂಬಾ ಬವುಮಾ -

Abhilash BC
Abhilash BC Nov 18, 2025 2:41 PM

ಗುವಾಹಟಿ: ಶನಿವಾರ ಗುವಾಹಟಿ(Guwahati Test)ಯಲ್ಲಿ ಆರಂಭವಾಗಲಿರುವ ಭಾರತ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್‌(India vs South Africa 2nd Test) ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ(Temba Bavuma) ಬವುಮಾ ವಿಶ್ವ ದಾಖಲೆ ನಿರ್ಮಿಸುವ ಸನಿಹದಲ್ಲಿದ್ದಾರೆ. ದ್ವಿತೀಯ ಪಂದ್ಯವನ್ನು ಗೆದ್ದರೆ ಅಜೇಯವಾಗಿ ಅತ್ಯಧಿಕ ಟೆಸ್ಟ್‌ ಪಂದ್ಯ ಗೆದ್ದ ವಿಶ್ವದ ಮೊದಲ ನಾಯಕ ಎನಿಸಿಕೊಳ್ಳಲಿದ್ದಾರೆ.

ಸದ್ಯ ಬವುಮಾ ನಾಯಕನಾಗಿ 11 ಪಂದ್ಯಗಳಲ್ಲಿ ಅಜೇಯ 10 ಪಂದ್ಯಗಳನ್ನು ಜಯಿಸಿದ್ದಾರೆ. ಒಂದು ಪಂದ್ಯ ಡ್ರಾ ಗೊಂಡಿದೆ. ಇಂಗ್ಲೆಂಡ್ ಮಾಜಿ ನಾಯಕ ಮೈಕ್ ಬ್ರೆರ್ಲಿ ಕೂಡ 10 ಅಜೇಯ ಗೆಲುವು ಸಾಧಿಸಿದ್ದರು. ಸದ್ಯ ದಾಖಲೆ ಜಂಟಿಯಾಗಿದೆ. ಆದರೆ, ಮೈಕ್ ಬ್ರೆರ್ಲಿ ಅವರು ಸತತ 10 ಗೆಲುವು ಕಾಣುವ ಮುನ್ನ ಆಡಿದ್ದ ಮೊದಲ ಟೆಸ್ಟ್‌ನಲ್ಲಿ ಸೋಲು ಕಂಡಿದ್ದರು. ಬವುಮಾ ಒಂದೇ ಒಂದು ಸೋಲು ಕಂಡಿಲ್ಲ.

ಏತನ್ಮಧ್ಯೆ, ಟೆಂಬಾ ಬವುಮಾ ಟೆಸ್ಟ್‌ನಲ್ಲಿ ನಾಯಕನಾಗಿ 1000 ರನ್‌ಗಳನ್ನು ಪೂರ್ಣಗೊಳಿಸಲು ಕೇವಲ 31 ರನ್‌ಗಳ ಅಗತ್ಯವಿದೆ. ಅವರು ಇದುವರೆಗೆ 11 ಟೆಸ್ಟ್‌ಗಳಲ್ಲಿ ದಕ್ಷಿಣ ಆಫ್ರಿಕಾವನ್ನು ಮುನ್ನಡೆಸಿದ್ದಾರೆ ಮತ್ತು ಮೂರು ಶತಕಗಳು ಮತ್ತು ಆರು ಅರ್ಧಶತಕಗಳೊಂದಿಗೆ 57 ರ ಸರಾಸರಿಯಲ್ಲಿ 969 ರನ್‌ಗಳನ್ನು ಗಳಿಸಿದ್ದಾರೆ. ಅವರು ಈ ಸಾಧನೆ ಮಾಡಿದ ಒಂಬತ್ತನೇ ದಕ್ಷಿಣ ಆಫ್ರಿಕಾದ ಆಟಗಾರನಾಗಲಿದ್ದಾರೆ. ಮತ್ತು ಟೆಸ್ಟ್‌ನಲ್ಲಿ ನಾಯಕನಾಗಿ 998 ರನ್‌ಗಳನ್ನು ಗಳಿಸಿದ ಶಾನ್ ಪೊಲಾಕ್ ಅವರನ್ನು ಹಿಂದಿಕ್ಕಲಿದ್ದಾರೆ.

ಇದನ್ನೂ ಓದಿ IND vs SA: ಈಡನ್‌ ಗಾರ್ಡನ್ಸ್‌ ಪಿಚ್‌ ಟೀಕೆಗೆ ಖಡಕ್‌ ಪ್ರತಿಕ್ರಿಯೆ ನೀಡಿದ ಕ್ಯುರೇಟರ್

ಕೋಲ್ಕತಾ ಟೆಸ್ಟ್‌ ಗೆಲ್ಲುವ ಮೂಲಕ 15 ವರ್ಷಗಳ ಬಳಿಕ ಭಾರತದಲ್ಲಿ ಗೆಲುವು ದಾಖಲಿಸಿದ್ದ ಹರಿಣ ಪಡೆ ಇದೀಗ 25 ವರ್ಷಗಳ ಬಳಿಕ ಭಾರತದಲ್ಲಿ ಮೊದಲ ಬಾರಿಗೆ ಸರಣಿ ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಲು ಕಾತರಗೊಂಡಿದೆ. ದಕ್ಷಿಣ ಆಫ್ರಿಕಾ ತಂಡವು ಭಾರತದಲ್ಲಿ ಕೊನೆಯ ಬಾರಿಗೆ ಟೆಸ್ಟ್ ಸರಣಿಯನ್ನು ಗೆದ್ದಿದ್ದು 2000 ರಲ್ಲಿ. ಹ್ಯಾನ್ಸಿ ಕ್ರೋನಿಯೆ ನೇತೃತ್ವದಲ್ಲಿ ಸಚಿನ್ ತೆಂಡೂಲ್ಕರ್ ನೇತೃತ್ವದ ತಂಡದ ವಿರುದ್ಧ 2-0 ಅಂತರದ ಐತಿಹಾಸಿಕ ಸರಣಿಯನ್ನು ಗೆದ್ದಿತ್ತು. ಮೊದಲ ಟೆಸ್ಟ್ ಅನ್ನು ನಾಲ್ಕು ವಿಕೆಟ್‌ಗಳಿಂದ ಮತ್ತು ಎರಡನೇ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಮತ್ತು 71 ರನ್‌ಗಳಿಂದ ಗೆದ್ದುಕೊಂಡಿತ್ತು.

ದಕ್ಷಿಣ ಆಫ್ರಿಕಾ ಪರ ಟೆಸ್ಟ್‌ನಲ್ಲಿ ನಾಯಕನಾಗಿ ಅತಿ ಹೆಚ್ಚು ರನ್‌ಗಳು

ಗ್ರೇಮ್ ಸ್ಮಿತ್ - 8647 ರನ್‌ಗಳು

ಹ್ಯಾನ್ಸಿ ಕ್ರೋನಿಯೆ - 2833 ರನ್‌ಗಳು

ಫಾಫ್ ಡು ಪ್ಲೆಸಿಸ್ - 2219 ರನ್‌ಗಳು

ಎಚ್‌ಡಬ್ಲ್ಯೂ ಟೇಲರ್ - 1487 ರನ್‌ಗಳು

ಎಡಿ ನೂರ್ಸೆ - 1242 ರನ್‌ಗಳು

ಟಿಎಲ್ ಗೊಡ್ಡಾರ್ಡ್ - 1092 ರನ್‌ಗಳು

ಡಿಎಲ್ ಮೆಕ್‌ಗ್ಲೆವ್ - 1058 ರನ್‌ಗಳು

ಕೆಸಿ ವೆಸೆಲ್ಸ್ - 1027 ರನ್‌ಗಳು

ಶಾನ್ ಪೊಲಾಕ್ - 998 ರನ್‌ಗಳು

ಟೆಂಬಾ ಬವುಮಾ - 969* ರನ್‌ಗಳು