ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತ ವಿರುದ್ಧ ಗೆದ್ದು ದಾಖಲೆ ಬರೆದ ದಕ್ಷಿಣ ಆಫ್ರಿಕಾ; ವಿಶ್ವದ ಮೊದಲ ತಂಡ

IND vs SA: ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನ ಪಡೆದ ದಕ್ಷಿಣ ಆಫ್ರಿಕಾ, ಕ್ವಿಂಟನ್ ಡಿ ಕಾಕ್‌ ಆಕರ್ಷಕ ಅರ್ಧಶತಕದ ನೆರವಿನಿಂದ, ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 213 ರನ್ ಗಳಿಸಿತು. ಅದಕ್ಕುತ್ತರವಾಗಿ ಭಾರತ ತಂಡ 19.1 ಓವರ್‌ಗಳಲ್ಲಿ 162 ರನ್‌ ಗಳಿಸಲಷ್ಟೇ ಶಕ್ತವಾಗಿ 51ರನ್‌ಗಳ ಸೋಲು ಕಂಡಿತು.

South Africa

ಮುಲ್ಲನಪುರ, ಡಿ.12: ಗುರುವಾರ ನಡೆದಿದ್ದ ಭಾರತ(IND vs SA ) ವಿರುದ್ಧದ 2ನೇ ಟಿ20(IND vs SA 2nd T20I) ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿದ ದಕ್ಷಿಣ ಆಫ್ರಿಕಾ ತಂಡ ದಾಖಲೆಯೊಂದನ್ನು ನಿರ್ಮಿಸಿದೆ. ಟಿ20 ಪಂದ್ಯಗಳಲ್ಲಿ ಭಾರತದ ವಿರುದ್ಧ ಅತಿ ಹೆಚ್ಚು ಗೆಲುವುಗಳು ಸಾಧಿಸಿದ ವಿಶ್ವದ ಮೊದಲ ತಂಡ ಎಂಬ ಹಿರಿಮೆಗೆ ಪಾತ್ರವಾಗಿದೆ.

ಭಾರತ ವಿರುದ್ಧ 33* ಟಿ20 ಪಂದ್ಯಗಳನ್ನು ಆಡಿರುವ ದಕ್ಷಿಣ ಆಫ್ರಿಕಾ ತಂಡ 13* ಪಂದ್ಯಗಳನ್ನು ಗೆದ್ದು ಅಗ್ರಸ್ಥಾನದಲ್ಲಿದೆ. ತಲಾ 12 ಗೆಲುವು ಸಾಧಿಸಿರುವ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ಎರಡನೇ ಸ್ಥಾನದಲ್ಲಿದೆ. ತಲಾ 10 ಗೆಲುವು ಕಂಡಿರುವ ನ್ಯೂಜಿಲ್ಯಾಂಡ್‌ ಮತ್ತು ವೆಸ್ಟ್‌ ಇಂಡೀಸ್‌ ಮೂರನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ಸರಣಿ ಬಳಿಕ ಭಾರತಕ್ಕೆ ನ್ಯೂಜಿಲ್ಯಾಂಡ್‌ ಜತೆ 5 ಪಂದ್ಯಗಳ ಸರಣಿ ಇದೆ. ಹೀಗಾಗಿ ನ್ಯೂಜಿಲ್ಯಾಂಡ್‌ಗೆ ಗೆಲುವು ಸಾಧಿಸಿದರೆ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶವಿದೆ.

T20I ಗಳಲ್ಲಿ ಭಾರತದ ವಿರುದ್ಧ ಅತಿ ಹೆಚ್ಚು ಗೆಲುವುಗಳು

13 - ದಕ್ಷಿಣ ಆಫ್ರಿಕಾ (33 ಪಂದ್ಯಗಳು)*

12 - ಆಸ್ಟ್ರೇಲಿಯಾ (37 ಪಂದ್ಯಗಳು)

12 - ಇಂಗ್ಲೆಂಡ್ (29 ಪಂದ್ಯಗಳು)

10 - ನ್ಯೂಜಿಲೆಂಡ್ (25 ಪಂದ್ಯಗಳು)

10 - ವೆಸ್ಟ್ ಇಂಡೀಸ್ (30 ಪಂದ್ಯಗಳು)

ಇದನ್ನೂ ಓದಿ IND vs SA: ಕ್ವಿಂಟಕ್‌ ಡಿ ಕಾಕ್‌ ಅಬ್ಬರ, ಭಾರತ ತಂಡಕ್ಕೆ ತಿರುಗೇಟು ನೀಡಿದ ದಕ್ಷಿಣ ಆಫ್ರಿಕಾ!

ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನ ಪಡೆದ ದಕ್ಷಿಣ ಆಫ್ರಿಕಾ, ಕ್ವಿಂಟನ್ ಡಿ ಕಾಕ್‌ ಆಕರ್ಷಕ ಅರ್ಧಶತಕದ ನೆರವಿನಿಂದ, ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 213 ರನ್ ಗಳಿಸಿತು. ಅದಕ್ಕುತ್ತರವಾಗಿ ಭಾರತ ತಂಡ 19.1 ಓವರ್‌ಗಳಲ್ಲಿ 162 ರನ್‌ ಗಳಿಸಲಷ್ಟೇ ಶಕ್ತವಾಗಿ 51ರನ್‌ಗಳ ಸೋಲು ಕಂಡಿತು. ಸದ್ಯ ಸರಣಿ 1–1ರ ಸಮಬಲ ಸಾಧಿಸಿದೆ. ಮೂರನೇ ಪಂದ್ಯ ಭಾನುವಾರ ನಡೆಯಲಿದೆ.

ಡಿ ಕಾಕ್‌ 46 ಎಸೆತಗಳಲ್ಲಿ 90 ರನ್‌ ಗಳಿಸಿದರು. ಏಳು ಸಿಕ್ಸರ್‌ಗಳನ್ನು ಬಾರಿಸಿದರು. ಬೌಲಿಂಗ್‌ನಲ್ಲಿ ವೇಗಿ ಲುಂಗಿ ಎನ್‌ಗಿಡಿ (26ಕ್ಕೆ2), ಮಾರ್ಕೊ ಯಾನ್ಸೆನ್ (25ಕ್ಕೆ2), ಲುಥೊ ಸಿಪಾಮ್ಲಾ (46ಕ್ಕೆ2) ಹಾಗೂ ಒಟ್ನಿಲ್ ಬಾರ್ತಮನ್ (24ಕ್ಕೆ4) ಮಿಂಚಿದರು. ಭಾರತ ತಂಡದ ತಿಲಕ್ ವರ್ಮಾ (62 ರನ್) ಅವರ ಹೋರಾಟವು ತಂಡದ ಗೆಲುವಿಗೆ ಸಾಕಾಗಲಿಲ್ಲ. ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಅವರ ವೈಫಲ್ಯ ಈ ಪಂದ್ಯದಲ್ಲಿಯೂ ಮುಂದುವರಿಯಿತು. ಜಸ್‌ಪ್ರೀತ್ ಬೂಮ್ರಾ ಕೂಡ ತಮ್ಮ ಎರಡನೇ ಓವರ್‌ನಲ್ಲಿ 16 ರನ್‌ ಕೊಟ್ಟರು. ಅವರ ಒಂದು ಎಸೆತವನ್ನು ರೀಜಾ ಹೆನ್ರಿಕ್ಸ್ ಸಿಕ್ಸರ್‌ಗೆತ್ತಿದರು.