ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತ vs ದಕ್ಷಿಣ ಆಫ್ರಿಕಾ ಟಿ20 ಸರಣಿ ಯಾವಾಗ?; ಇಲ್ಲಿದೆ ಮಾಹಿತಿ

IND vs SA T20I Series: ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದಿದ್ದ ಜಸ್ಪ್ರೀತ್ ಬುಮ್ರಾ ಕೂಡ ತಂಡಕ್ಕೆ ಮರಳಿದ್ದಾರೆ. ಅಹಮದಾಬಾದ್‌ನ 32 ವರ್ಷದ ವೇಗಿ, ಅತಿ ಕಡಿಮೆ ಮಾದರಿಯ ಸರಣಿಯಲ್ಲಿ ವೇಗದ ದಾಳಿಯನ್ನು ಮುನ್ನಡೆಸಲಿದ್ದಾರೆ.

ಟಿ20 ಸರಣಿಗೆ ಭಾರತ ತಂಡದಲ್ಲಿನ ಬದಲಾವಣೆಗಳ ಸಂಪೂರ್ಣ ಪಟ್ಟಿ

IND vs SA T20I Series -

Abhilash BC
Abhilash BC Dec 7, 2025 5:07 PM

ಕಟಕ್‌, ಡಿ.7: ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತು ಏಕದಿನ ಸರಣಿ ಗೆದಿರುವ ಟೀಮ್ ಇಂಡಿಯಾ ಇದೀಗ ಐದು ಪಂದ್ಯಗಳ ಟಿ20(IND vs SA T20I Series) ಸರಣಿಯನ್ನು ಆಡಲು ಸಜ್ಜಾಗಿದೆ. ಕಟಕ್‌ನ ಬಾರಾಬತಿ ಕ್ರೀಡಾಂಗಣದಲ್ಲಿ ಮಂಗಳವಾರ (ಡಿಸೆಂಬರ್ 9) ಮೊದಲ ಪಂದ್ಯ ನಡೆಯಲಿದೆ. ಉಳಿದ ನಾಲ್ಕು ಪಂದ್ಯಗಳು ಮುಲ್ಲನ್‌ಪುರ (ಡಿಸೆಂಬರ್ 11), ಧರ್ಮಶಾಲಾ (ಡಿಸೆಂಬರ್ 14), ಲಕ್ನೋ (ಡಿಸೆಂಬರ್ 17) ಮತ್ತು ಅಹಮದಾಬಾದ್ (ಡಿಸೆಂಬರ್ 19) ನಲ್ಲಿ ನಡೆಯಲಿವೆ.

ಸೂರ್ಯಕುಮಾರ್ ಯಾದವ್ ಸರಣಿಯಲ್ಲಿ ಆತಿಥೇಯರ ನಾಯಕತ್ವ ವಹಿಸಲಿದ್ದಾರೆ ಮತ್ತು ಶುಭಮನ್ ಗಿಲ್ ಅವರ ಉಪನಾಯಕರಾಗಿರುತ್ತಾರೆ. ದಕ್ಷಿಣ ಆಫ್ರಿಕಾ ತಂಡ ಐಡೆನ್ ಮಾರ್ಕ್ರಮ್ ನಾಯಕತ್ವದಲ್ಲಿ ಸರಣಿಯನ್ನು ಆಡಲಿದೆ. ಏಕದಿನ ಸರಣಿ ವೇಳೆ ಹಲವು ಅನುಭವಿ ಆಟಗಾರರು ಗಾಯಗೊಂಡಿರುವ ಕಾರಣ ಹರಿಣ ಪಡೆ ಟೀಮ್‌ ಇಂಡಿಯಾದ ಸವಾಲು ಹೇಗೆ ಎದುರಿಸಲಿದೆ ಎಂದು ಕಾದು ನೋಡಬೇಕು.

ಮುಂದಿನ ವರ್ಷದ ಫೆಬ್ರವರಿಯಲ್ಲಿ ಟಿ20 ವಿಶ್ವಕಪ್‌ ನಡೆಯುವ ಕಾರಣ ಉಭಯ ತಂಡಗಳಿಗೂ ಇದು ಮಹತ್ವದ ಸರಣಿಯಾಗಿದೆ. ಆಟಗಾರರು ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡರೆ ವಿಶ್ವಕಪ್‌ ಆಡುವ ಅವಕಾಶ ಲಭಿಸಬಹುದು.

ಶುಭಮನ್ ಗಿಲ್‌ಗೆ ಟಿ20 ಸರಣಿ ಆಡಲು ಅನುಮತಿ; ಸಿಒಇಯಿಂದ ಫಿಟ್‌ನೆಸ್ ಪ್ರಮಾಣಪತ್ರ

ಭಾರತೀಯ ನಾಯಕನಾಗಿ ಸೂರ್ಯಕುಮಾರ್ ಇದುವರೆಗೆ ಟಿ20ಐ ಸರಣಿಯನ್ನು ಸೋತಿಲ್ಲ, ಮತ್ತು ದಕ್ಷಿಣ ಆಫ್ರಿಕಾ ಸರಣಿಯ ಅಂತ್ಯದಲ್ಲೂ ಅವರು ತಮ್ಮ ದಾಖಲೆಯನ್ನು ಉಳಿಸಿಕೊಳ್ಳಲು ಬಯಸುತ್ತಾರೆ. ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ಭಾರತದಲ್ಲಿ ಟೆಸ್ಟ್ ಮತ್ತು ಟಿ20ಐ ಸರಣಿಯನ್ನು ಗೆಲ್ಲುವ ಉತ್ಸುಕದಲ್ಲಿದೆ. ಡಿಸೆಂಬರ್ 3 ರಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟಿ20ಐ ಸರಣಿಗಾಗಿ ಭಾರತದ 15 ಸದಸ್ಯರ ತಂಡವನ್ನು ಘೋಷಿಸಿದ್ದು, ತಂಡವು ಅನೇಕ ಟಿ20 ತಜ್ಞರನ್ನು ಒಳಗೊಂಡಿದೆ. ಭಾರತದ ಏಕದಿನ ತಂಡದಿಂದ ಕೇವಲ ಐದು ಆಟಗಾರರನ್ನು ಟಿ20ಐ ಸರಣಿಗೆ ಆಯ್ಕೆ ಮಾಡಲಾಗಿದೆ.

ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದಿದ್ದ ಜಸ್ಪ್ರೀತ್ ಬುಮ್ರಾ ಕೂಡ ತಂಡಕ್ಕೆ ಮರಳಿದ್ದಾರೆ. ಅಹಮದಾಬಾದ್‌ನ 32 ವರ್ಷದ ವೇಗಿ, ಅತಿ ಕಡಿಮೆ ಮಾದರಿಯ ಸರಣಿಯಲ್ಲಿ ವೇಗದ ದಾಳಿಯನ್ನು ಮುನ್ನಡೆಸಲಿದ್ದಾರೆ. ಜತೆಗೆ, ಶಿವಂ ದುಬೆ, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಜಿತೇಶ್ ಶರ್ಮಾ, ಅಕ್ಷರ್ ಪಟೇಲ್ ಮತ್ತು ವರುಣ್ ಚಕ್ರವರ್ತಿ ಕೂಡ ಭಾರತೀಯ ತಂಡಕ್ಕೆ ಮರಳಿದ್ದಾರೆ.

ಟಿ20ಗೆ ಭಾರತ ತಂಡ

ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಸರ್ ಪಟೇಲ್, ಜಿತೇಶ್ ಶರ್ಮಾ (ವಿ.ಕೀ.), ಸಂಜು ಸ್ಯಾಮ್ಸನ್ (ವಿ.ಕೀ.), ಜಸ್‌ಪ್ರೀತ್‌ ಬುಮ್ರಾ, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್.