ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs SA: ಇಂದು ಭಾರತ-ದಕ್ಷಿಣ ಆಫ್ರಿಕಾ ಕಾದಾಟ; ಹ್ಯಾಟ್ರಿಕ್‌ ಗೆಲುವಿನ ವಿಶ್ವಾಸದಲ್ಲಿ ಕೌರ್‌ ಪಡೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕೆಲ ರಾಜ್ಯಗಳಲ್ಲಿ ಮಳೆ ಬಿರುಸುಗೊಂಡಿದೆ. ಹೀಗಾಗಿ ಪಂದ್ಯಕ್ಕೆ ಮಳೆ ಭೀತಿ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಒಂದೊಮ್ಮೆ ಮಳೆಯಿಂದ ಪಂದ್ಯ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ.

ವಿಶಾಖಪಟ್ಟಣಂ: ಸತತ ಎರಡು ಪಂದ್ಯಗಳಲ್ಲಿ ಅಮೋಘ ಗೆಲುವು ದಾಖಲಿಸಿದ ಭಾರತ(IND vs SA) ತಂಡವು ಮಹಿಳಾ ವಿಶ್ವಕಪ್‌ನ ಗುರುವಾರದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿಯೂ ಗೆದ್ದು ಹ್ಯಾಟ್ರಿಕ್‌ ಗೆಲುವು ಸಾಧಿಸುವುದು ಹರ್ಮನ್‌ಪ್ರೀತ್‌ ಕೌರ್‌ ಪಡೆಯ ಗುರಿಯಾಗಿದೆ. ಆದರೆ ತಂಡದ ತಾರಾ ಬ್ಯಾಟರ್‌ಗಳಾದ ಸ್ಮೃತಿ ಮಂಧನಾ, ನಾಯಕಿ ಹರ್ಮನ್‌ಪ್ರೀತ್‌, ಜೆಮಿಮಾ ರೋಡ್ರಿಗ್ಸ್‌ ಇನ್ನೂ ಬ್ಯಾಟಿಂಗ್‌ ಲಯ ಕಂಡುಕೊಳ್ಳದಿರುವುದು ತಂಡಕ್ಕೆ ಚಿಂತೆಯ ವಿಷಯವಾಗಿದೆ.

ಬೌಲಿಂಗ್‌ನಲ್ಲಿ ದೀಪ್ತಿ, ಸ್ನೇಹಾ ಹಾಗೂ ವೇಗಿ ಕ್ರಾಂತಿ ಗೌಡ್‌ ತಂಡದ ಆಧಾರಸ್ತಂಭ ಎನಿಸಿಕೊಂಡಿದ್ದಾರೆ.ಮತ್ತೊಂದೆಡೆ ಲಾರಾ ವೊಲ್ವಾರ್ಟ್‌ ನಾಯಕತ್ವದಲ್ಲಿ ಆಡುತ್ತಿರುವ ಆಫ್ರಿಕಾ ತಂಡ ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 10 ವಿಕೆಟ್‌ಗಳಿಂದ ಪರಾಭವಗೊಂಡಿತ್ತು. ಆದರೆ ಕಿವೀಸ್‌ ವಿರುದ್ಧದ 6 ವಿಕೆಟ್‌ ಗೆಲುವು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಹೀಗಾಗಿ ತೀವ್ರ ಪೈಪೋಟಿ ನೀಡುವ ಸಾಧ್ಯತೆ ಇದೆ.

ಮಳೆ ಭೀತಿ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕೆಲ ರಾಜ್ಯಗಳಲ್ಲಿ ಮಳೆ ಬಿರುಸುಗೊಂಡಿದೆ. ಹೀಗಾಗಿ ಪಂದ್ಯಕ್ಕೆ ಮಳೆ ಭೀತಿ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಒಂದೊಮ್ಮೆ ಮಳೆಯಿಂದ ಪಂದ್ಯ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ.

ತಂಡಗಳು

ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ) ಸ್ಮೃತಿ ಮಂದಾನ (ಉಪನಾಯಕಿ) ಪ್ರತಿಕಾ ರಾವಲ್ ಹರ್ಲೀನ್ ಡಿಯೊಲ್ ಜೆಮಿಮಾ ರಾಡ್ರಿಗಸ್ ರಿಚಾ ಘೋಷ್ ಉಮಾ ಚೆಟ್ರಿ ರೇಣುಕಾ ಸಿಂಗ್ ಠಾಕೂರ್ ದೀಪ್ತಿ ಶರ್ಮಾ ಸ್ನೇಹ ರಾಣಾ ಶ್ರೀಚರಣಿ ರಾಧಾ ಯಾದವ್ ಅಮನ್ಜೋತ್ ಕೌರ್ ಅರುಂಧತಿ ರೆಡ್ಡಿ ಕ್ರಾಂತಿ ಗೌಡ್.

ಇದನ್ನೂ ಓದಿ Women's World Cup: ಹೊಸ ದಾಖಲೆ ಬರೆದ ಮಹಿಳಾ ವಿಶ್ವಕಪ್‌ನ ಉದ್ಘಾಟನಾ ಪಂದ್ಯ

ದಕ್ಷಿಣ ಆಫ್ರಿಕಾ: ಲಾರಾ ವೊಲ್ವಾರ್ಟ್ (ನಾಯಕಿ) ಅಯಾಬೋಂಗಾ ಕಾಕಾ ಚೊಲೆ ಟ್ರಯನ್ ನಡೈಡ್ ಡಿ ಕ್ಲರ್ಕ್ ಮೆಝಾನೆ ಕಾಪ್ ತಾಜ್ಮಿನ್ ಬ್ರಿಟ್ಸ್ ಸಿನಲೊ ಜಾಫ್ತಾ ನಾನಕುಲುಲೆಕೊ ಮ್ಲಾಬಾ ಅನೆರಿ ಡರ್ಕೆಸನ್ ಅನೆಕ್ ಬಾಷ್ ಮಸ್ಬಾತಾ ಕ್ಲಾಸ್ ಸುನಿ ಲೂಸ್ ಕರಾಬೊ ಮೆಸೊ ತುಮಿ ಸೆಖುಖುನೆ ನೊಂಡುಮಿಸೊ ಶಾಂಗಸೆ.