INDW vs PAKW: ಮಹಿಳಾ ವಿಶ್ವಕಪ್‌ನಲ್ಲೂ ಭಾರತಕ್ಕೆ ಶರಣಾದ ಪಾಕ್
ಕೀಟಗಳ ಕಾಟದಿಂದ ಪಂದ್ಯವನ್ನು 15 ನಿಮಿಷಗಳ ಕಾಲ ಸ್ಥಗಿತಗೊಳಿಸಲಾಯಿತು. ಆದರೆ ಹವಾಮಾನ ಇಲಾಖೆ ನುಡಿದಿದ್ದ ಮಳೆ ಭವಿಷ್ಯ ಸುಳ್ಳಾಯಿತು. ಶನಿವಾರ ಕೊಲಂಬೊದಲ್ಲಿ ನಡೆಯಬೇಕಿದ್ದ ಆಸ್ಟ್ರೇಲಿಯಾ-ಶ್ರೀಲಂಕಾ ನಡುವಿನ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಹೀಗಾಗಿ ಭಾನುವಾರದ ಪಂದ್ಯಕ್ಕೂ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು.

-

ಕೊಲಂಬೊ: ಮಹಿಳಾ ಏಕದಿನ ವಿಶ್ವಕಪ್(ICC Womens World Cup 2025) ಟೂರ್ನಿಯಲ್ಲಿ ಭಾರತ(INDW vs PAKW) ತಂಡ ತನ್ನ ಅಜೇಯ ಗೆಲುವಿನ ಓಟ ಮುಂದುವರಿಸಿದೆ. ಭಾನುವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 88 ರನ್ ಅಂತರದಿಂದ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಪಾಕ್ ಸತತ ಎರಡನೇ ಸೋಲಿಗೆ ತುತ್ತಾಯಿತು.
ಮುಂದುವರಿದ ನೋ ಶೇಕ್‌ಹ್ಯಾಂಡ್ ವಾರ್
ಇತ್ತೀಚೆಗೆ ಪುರುಷರ ಏಷ್ಯಾಕಪ್‌ನಲ್ಲಿ ಭಾರತೀಯ ಆಟಗಾರರು ಪಾಕ್ ಆಟಗಾರರ ಕೈಕುಲುಕದೆ, ಪಹಲ್ಗಾಂ ಉಗ್ರ ದಾಳಿಗೆ ತಮ್ಮದೇ ರೀತಿಯಲ್ಲಿ ಪ್ರತಿರೋಧ ತೋರಿದ್ದರು. ಇದು ಮಹಿಳಾ ವಿಶ್ವಕಪ್‌ನಲ್ಲೂ ಮುಂದುವರಿಯಿತು. ಟಾಸ್ ವೇಳೆ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್, ಪಾಕ್ ನಾಯಕಿ ಫಾತಿಮಾ ಸನಾಗೆ ಶೇಕ್‌ಹ್ಯಾಂಡ್ ಮಾಡಲಿಲ್ಲ. ಪಂದ್ಯದ ಮುಕ್ತಾಯದ ಬಳಿಕವೂ ಭಾರತೀಯ ಆಟಗಾರ್ತಿಯರು ಯಾವುದೇ ಹಸ್ತಲಾಘವ ಮಾಡದೆ ತಮ್ಮ ಪಾಡಿಗೆ ತಾವು ಡ್ರೆಸ್ಸಿಂಗ್ ರೂಮ್‌ಗೆ ತೆರಳಿದರು.
ಇಲ್ಲಿನ ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಭರ್ತಿ 50 ಓವರ್‌ಗಳಿಂದ 247 ರನ್ ಬಾರಿಸಿ ಆಲೌಟ್ ಆಯಿತು. ಜವಾಬಿತ್ತ ಪಾಕಿಸ್ತಾನ, ಕ್ರಾಂತಿ ಗೌಡ್ (20ಕ್ಕೆ3) ಮತ್ತು ದೀಪ್ತಿ ಶರ್ಮ(45ಕ್ಕೆ3) ಅವರ ದಾಳಿ ಎದುರು 47 ಓವರ್‌ಗಳಲ್ಲಿ159 ರನ್‌ಗೆ ಸರ್ವಪತನ ಕಂಡಿತು. ಸೋಲಿನಿಂದ ಪಾಕ್ ಪರ ಏಕಾಂಗಿ ಹೋರಾಟ ನಡೆಸಿ ಅರ್ಧಶತಕ ಬಾರಿಸಿದ ಸಿದ್ರಾ ಅಮೀನ್ ಅವರ ಬ್ಯಾಟಿಂಗ್ ಶ್ರಮ ವ್ಯರ್ಥವಾಯಿತು. ಅವರು 106 ಎಸೆತ ಗಳಿಂದ 81 ರನ್ ಗಳಿಸಿದರು. ಉಳಿದಂತೆ ನಟಾಲಿಯಾ ಪರ್ವೈಜ್(33) ರನ್ ಗಳಿಸಿದರು.
India lead the #CWC25 points table following a comprehensive win against Pakistan 👌#INDvPAK 📝: https://t.co/eCML5mnd2B pic.twitter.com/gZ7gBQkGVk
— ICC (@ICC) October 5, 2025
ಮಂಧಾನ, ಕೌರ್ ಮತ್ತೆ ವಿಫಲ
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಭಾರತ ಪರ ನಾಯಕಿ ಹರ್ಮನ್‌ಪ್ರೀತ್ ಕೌರ್(19) ಮತ್ತು ಉಪನಾಯಕಿ ಸ್ಮೃತಿ ಮಂಧಾನ(23) ಈ ಪಂದ್ಯದಲ್ಲಿಯೂ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ತೋರುವಲ್ಲಿ ವಿಫಲರಾದರು. ಹರ್ಲೀನ್ ಡಿಯೋಲ್(46) ತಂಡದ ಪರ ಅತ್ಯಧಿಕ ರನ್ ಸ್ಕೋರರ್ ಎನಿಸಿದರು. ಜೆಮಿಮಾ ರೋಡ್ರಿಗಸ್ 32 ಮತ್ತು ರಿಚಾ ಘೋಷ್ ಅಜೇಯ 35 ರನ್ ಬಾರಿಸಿದರು. ಪಾಕಿಸ್ತಾನ ಪರ ಡಯಾನಾ ಬೇಗ್ ಒಂದು ಮೇಡನ್ ಸಹಿತ 69 ರನ್ ವೆಚ್ಚದಲ್ಲಿ 4 ವಿಕೆಟ್ ಕಿತ್ತರು.
ಇದನ್ನೂ ಓದಿ INDW vs PAKW: ಭಾರತ-ಪಾಕ್ ಮಹಿಳಾ ಪಂದ್ಯದಲ್ಲಿ ವಿವಾದಕ್ಕೆ ಕಾರಣವಾದ ರನೌಟ್, ಟಾಸ್ ನಿರ್ಧಾರ
ಕೀಟಗಳ ಕಾಟ
ಕೀಟಗಳ ಕಾಟದಿಂದ ಪಂದ್ಯವನ್ನು 15 ನಿಮಿಷಗಳ ಕಾಲ ಸ್ಥಗಿತಗೊಳಿಸಲಾಯಿತು. ಆದರೆ ಹವಾಮಾನ ಇಲಾಖೆ ನುಡಿದಿದ್ದ ಮಳೆ ಭವಿಷ್ಯ ಸುಳ್ಳಾಯಿತು. ಶನಿವಾರ ಕೊಲಂಬೊದಲ್ಲಿ ನಡೆಯಬೇಕಿದ್ದ ಆಸ್ಟ್ರೇಲಿಯಾ-ಶ್ರೀಲಂಕಾ ನಡುವಿನ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಹೀಗಾಗಿ ಭಾನುವಾರದ ಪಂದ್ಯಕ್ಕೂ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು.